ಈಚೆಗೆ ಬಿಡುಗಡೆ.. 'Honda'ದ ಹೊಸ ಪವರ್‌ಫುಲ್ ಬೈಕ್ ಕುರಿತ ಪ್ರಮುಖಾಂಶಗಳಿವು, ಯಾರು ಹೇಳಲ್ಲ!

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯವಾಗಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈಚೆಗೆ ಕಂಪನಿಯು ಹೊಸ 'ರೆಬೆಲ್ 500' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಬನ್ನಿ, ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ಬೆಲೆ (Price): ಹೊಚ್ಚ ಹೊಸ ಹೋಂಡಾ ರೆಬೆಲ್ 500 (Honda Rebel 500) ಪ್ರೀಮಿಯಂ ಮೋಟಾರ್‌ಸೈಕಲ್‌ ಆಗಿದ್ದು, ರೂ.5.12 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ಬೈಕ್‌ನ್ನು ಹೋಂಡಾದ 'ಬಿಗ್‌ವಿಂಗ್' ಡೀಲರ್‌ಶಿಪ್‌ ಮೂಲಕ ಬೆಂಗಳೂರು, ಗುರುಗ್ರಾಮ & ಮುಂಬೈ ನಗರಗಳಲ್ಲಿ ಮಾತ್ರ ಮಾರಾಟಗೊಳಿಸಲಾಗುತ್ತದೆ.

Honda Rebel 500 bike Top Things

ವಿನ್ಯಾಸ & ಬಣ್ಣ (Design & Color): ನೂತನ ರೆಬೆಲ್ '500' ಮೋಟಾರ್‌ಸೈಕಲ್‌ ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಸಿಗ್ನೇಚರ್ ರೌಂಡ್ ಹೆಡ್‌ಲೈಟ್‌, ಹೈ - ಮೌಂಟೆಡ್ ಫ್ಯುಯೆಲ್ ಟ್ಯಾಂಕ್ ಮತ್ತು ಆಲ್ - ಎಲ್ಇಡಿ ಲೈಟಿಂಗ್ ಸಿಸ್ಟಮ್‌ನ್ನು ಒಳಗೊಂಡಿದೆ. ಜೊತೆಗೆ 'ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್' ಎಂಬ ಒಂದೇ ಬಣ್ಣದ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ.

ಕಾರ್ಯಕ್ಷಮತೆ (Performance): ಹೊಸ ಹೋಂಡಾ ರೆಬೆಲ್ 500 ಬೈಕ್ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 471 ಸಿಸಿ ಪ್ಯಾರಲಲ್ ಟ್ವಿನ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 46 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 43.3 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 26 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

Honda Rebel 500 bike Top Things

ವೈಶಿಷ್ಟ್ಯಗಳು (Features): ಈ ಮೋಟಾರ್‌ಸೈಕಲ್‌ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ವಿಶೇಷವಾಗಿ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಒಳಗೊಂಡಿದೆ. ಹಾಗೆಯೇ ಬರೋಬ್ಬರಿ 191 ಕೆಜಿ ತೂಕವಿದ್ದು, 11.2 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ರಸ್ತೆಯ ಮೇಲೆ ಸವಾರರಿಗೆ ಬಿಗಿಯಾಗಿ ಹಿಡಿತವನ್ನು ಒದಗಿಸಲು ಅಲಾಯ್ ವೀಲ್‌ಗಳನ್ನು ಹೊಂದಿದ್ದು, ಮುಂಭಾಗ 130/90-16 & ಹಿಂಭಾಗ 150/80-16 ಅಳತೆಯ ಟೈರ್‌ಗಳನ್ನು ಒಳಗೊಂಡಿದೆ.

ಸಸ್ಪೆನ್ಷನ್ ಸೆಟಪ್‌ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ನೂತನ ಬೈಕ್ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ & ಹಿಂದೆ (ರೇರ್) ಶೋವಾ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಹೋಂಡಾ ರೆಬೆಲ್ 500ಗೆ 'ಜಾವಾ ಪೆರಾಕ್' ಬೈಕ್‌ ಪ್ರಬಲ ಪ್ರತಿಸ್ಪರ್ಧಿಯಾಗಬಲ್ಲದು: ಇದು ರೂ.2.43 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 334 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಪಡೆದಿದ್ದು, 34 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಕನ್ಸೋಲ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, May 25, 2025, 21:51 [IST]
English summary
Honda rebel 500 bike top things
Read more on india honda motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+