ಹೋಂಡಾ ಮಾರಾಟ ಸಂಖ್ಯೆ ಕುಸಿತ.. ಆಕ್ಟಿವಾ & ಶೈನ್‌ನಂತಹ ಟೂ-ವೀಲರ್‌ಗಳಿದ್ದರೂ ಮ್ಯಾಜಿಕ್ ನಡೆಯಲಿಲ್ಲವೇ?
ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ವಿಶ್ವಾಸಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ದೇಶೀಯವಾಗಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳನ್ನು ನಗರ ಪ್ರದೇಶಗಳಿಗೆ ಪೈಪೋಟಿ ನೀಡುವಂತೆ ಗ್ರಾಮೀಣ ಭಾಗದ ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದರ ಹೊರತಾಗಿಯೂ ಈ 'ಮೇ' ತಿಂಗಳು ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟ ಸಂಖ್ಯೆ ಕುಸಿತವಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಳೆದ ತಿಂಗಳು (ಮೇ - 2025) ಹೋಂಡಾ ಕಂಪನಿಯು ಸರಿ ಸುಮಾರು 4,65,115 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿದೆ. 2024ರ 'ಮೇ'ನಲ್ಲಿ 4,92,447 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ 5.55% ಇಳಿಕೆಯಾಗಿದೆ.

ಅದೇ ರೀತಿಯಲ್ಲಿ ತಿಂಗಳಿಂದ ತಿಂಗಳ (MoM) ಮಾರಾಟ ಸಂಖ್ಯೆಯೂ ಕುಸಿತವಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ 4,80,896 ಯುನಿಟ್‌ಗಳನ್ನು ಮಾರಲಾಗಿದೆ. ಅದಕ್ಕೆ ಹೋಲಿಸಿದರೆ, ಮೇ ತಿಂಗಳಲ್ಲಿ ಮಾರಾಟ ಪ್ರಮಾಣ ಶೇಕಡ 3.28% ಇಳಿಮುಖವಾಗಿದೆ. ಸದ್ಯಕ್ಕೆ ಮಾರಾಟ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ 'ಹೋಂಡಾ' ಕಂಪನಿಯು ಯಾವುದೇ ಸ್ಪಷ್ಟವಾದ ಕಾರಣವನ್ನು ಬಹಿರಂಗಪಡಿಸಿಲ್ಲ.
ಆದರೂ, ನಾನಾ ಕಾರಣಗಳಿಂದಾಗಿ ಮಾರಾಟ ಸಂಖ್ಯೆ ಕುಸಿತವಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ. ಬಹುಮುಖ್ಯವಾಗಿ ಮೇ ತಿಂಗಳಲ್ಲಿ ಯಾವುದೇ ಹಬ್ಬಗಳು ಇಲ್ಲದಿರುವುದರಿಂದ ಮಾರಾಟ ಪ್ರಮಾಣ ಇಳಿಕೆಯಾಗಿದೆ ಎನ್ನಲಾಗಿದೆ. ಹಾಗೆಯೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಖರೀದಿಯತ್ತ ಗ್ರಾಹಕರು ಮುಖ ಮಾಡಿರುವುದು ಸಹ ಮಾರಾಟ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಇಷ್ಟು ಮಾತ್ರವಲ್ಲದೆ, ಹೋಂಡಾ ಕಂಪನಿಯ 'ಗೇಮ್ ಚೇಂಜರ್'ಗಳು ಎಂದೇ ಹೆಸರುವಾಗಿರುವ ಶೈನ್ & ಆಕ್ಟಿವಾಗಳಿಗೆ ಎದುರಾಳಿಯಾಗಿ ಇತರೆ ಕಂಪನಿಗಳು ಸಾಲು - ಸಾಲು ದ್ವಿಚಕ್ರ ವಾಹನಗಳನ್ನು ಮಾರಾಟಗೊಳುತ್ತಿವೆ. ವಿಶೇಷವಾಗಿ ಟಿವಿಎಸ್ ಹಾಗೂ ಹೀರೋದ ಕೆಲವು ಬೈಕ್ ಹಾಗೂ ಸ್ಕೂಟರ್‌ಗಳು ಶೈನ್ - ಆಕ್ಟಿವಾಗೆ ಸವಾಲೆಸೆಯುವ ರೀತಿಯಲ್ಲಿವೆ. ಇದು ಕೂಡ ಮಾರಾಟ ಸಂಖ್ಯೆ ಕುಸಿತವಾಗಲು ಮತ್ತೊಂದು ಕಾರಣವಾಗಿದೆ. ಒಂದರ್ಥದಲ್ಲಿ ಶೈನ್ & ಆಕ್ಟಿವಾಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಹೋಂಡಾ ಆಕ್ಟಿವಾ ಸ್ಕೂಟರ್ ವಿಶೇಷತೆಗಳೇನು..
ಇದು ಆಕ್ಟಿವಾ 110 ಮತ್ತು ಆಕ್ಟಿವಾ 125 ಎಂಬ ಎರಡು ವಿಧದಲ್ಲಿ ಗ್ರಾಹಕರ ಖರೀದಿಗೆ ಸಿಗುತ್ತದೆ. 'ಆಕ್ಟಿವಾ 110' ರೂ.80,000 (ಎಕ್ಸ್ ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. 109 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 59 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಮತ್ತೊಂದು 'ಆಕ್ಟಿವಾ 125' ರೂ.94,000 ರಿಂದ ರೂ.97,000 ಬೆಲೆಯನ್ನು ಒಳಗೊಂಡಿದೆ. 123 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದ್ದು, 47 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಹೋಂಡಾ ಶೈನ್ ಬೈಕ್ ಹೇಗಿದೆ..
ಇದು ಶೈನ್ 100 ಹಾಗೂ ಶೈನ್ 125 ಎಂಬ ಎರಡು ರೂಪದಲ್ಲಿ ಲಭ್ಯವಾಗುತ್ತದೆ. 'ಶೈನ್ 100' ರೂ.70,000 (ಎಕ್ಸ್ ಶೋರೂಂ - ಬೆಂಗಳೂರು) ದರವನ್ನು ಹೊಂದಿದೆ. 98 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 65 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಇನ್ನೊಂದು ಶೈನ್ 125 ರೂ.86,000 ರಿಂದ ರೂ.91,000 ಬೆಲೆಯನ್ನು ಹೊಂದಿದೆ. 123 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಹೋಂಡಾದ ಇತರೆ ದ್ವಿಚಕ್ರ ವಾಹನಗಳು ಯಾವುವು..
ಹೋಂಡಾ ಕಂಪನಿಯು ಶೈನ್ - ಆಕ್ಟಿವಾಗಳನ್ನು ಮಾತ್ರವಲ್ಲದೆ, ಹಲವು ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ವಿಶೇಷವಾಗಿ ಎಸ್‌ಪಿ 125, ಯೂನಿಕಾರ್ನ್, ಸಿಬಿ350, ಎಸ್‌ಪಿ 160, ಹಾರ್ನೆಟ್ 2.0, ಡಿಯೋ, ಆಕ್ಟಿವಾ ಇ ಮತ್ತು ಕ್ಯೂಸಿ1 ಸೇರಿದಂತೆ ವಿವಿಧ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications