Honda: ಹೋಂಡಾ ಪವರ್‌ಫುಲ್ ಅಡ್ವೆಂಚರ್ ಬೈಕ್ ಇತ್ತೀಚೆಗೆ ಬಿಡುಗಡೆ: ವಿಶೇಷತೆಗಳೇನು?

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ ಕಂಪನಿಯು, ಇತ್ತೀಚೆಗೆ ತನ್ನ ಹೊಸ 2025ರ XL750 ಟ್ರಾನ್ಸಾಲ್ಪ್ (2025 XL750 Transalp) ಅಡ್ವೆಂಚರ್ ಮೋಟಾರ್‌ಸೈಕಲ್ ಅನ್ನು ರೂ. 10,99,990 (ಎಕ್ಸ್‌ ಶೋರೂಂ)ಗೆ ಬಿಡುಗಡೆ ಮಾಡಿದೆ. ಅಡ್ವೆಂಚರ್‌ನಿಂದ ಪ್ರೇರಿತವಾದ XL750 ಟ್ರಾನ್ಸಾಲ್ಪ್ ಎಲ್ಲಾ ಭೂಪ್ರದೇಶಗಳಲ್ಲೂ ಮುನ್ನುಗ್ಗುವಂತೆ ನಿರ್ಮಿಸಲಾಗಿದೆ. ಈ ಅಡ್ವೆಂಚರ್ ಮೋಟಾರ್‌ಸೈಕಲ್ 755cc ಲಿಕ್ವಿಡ್ - ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿದ್ದು, 9,500 RPM ನಲ್ಲಿ 67.5 kW ಪವರ್ ಮತ್ತು 7,250 RPM ನಲ್ಲಿ 75 Nm ಗರಿಷ್ಠ ಟಾರ್ಕ್ ಹೊರಹಾಕುತ್ತದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರುಕಟ್ಟೆ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, "ಭಾರತದಲ್ಲಿ ಅಡ್ವೆಂಚರ್ ಮೋಟಾರ್‌ಸೈಕಲ್ ವಿಭಾಗವು ರೋಮಾಂಚಕಾರಿ ವೇಗದಲ್ಲಿ ಬೆಳೆಯುತ್ತಿದೆ. ನಮ್ಮ ಪ್ರಸ್ತುತ ADV ಶ್ರೇಣಿಗೆ ನಾವು ಈಗಾಗಲೇ ಅಪಾರ ಉತ್ಸಾಹವನ್ನು ಕಂಡಿದ್ದೇವೆ. ನವೀಕರಿಸಿದ XL750 ಟ್ರಾನ್ಸಾಲ್ಪ್‌ನ ಪರಿಚಯದೊಂದಿಗೆ ಭಾರತದಲ್ಲಿ ಸಾಹಸ ಪ್ರವಾಸಕ್ಕಾಗಿ ಉತ್ಸಾಹವನ್ನು ಹೆಚ್ಚಿಸುತ್ತಿದ್ದೇವೆ ಎಂದರು.

honda-xl750-transalp-adv-motorcycle-top-things

ಈ ಮೋಟಾರ್‌ಸೈಕಲ್ ನೋಡಲು ಒರಟಾಗಿ ಕಂಡರು ಸಿಟಿ ಮತ್ತು ಆಫ್-ರೋಡ್ ಸಾಮರ್ಥ್ಯದ ನಡುವೆ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ. ಇದರ ಎಂಜಿನ್ ಅನ್ನು 6 - ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಮುಂಭಾಗದಲ್ಲಿ ಹೈಡ್ರಾಲಿಕ್ 2 - ಪಿಸ್ಟನ್ ಕ್ಯಾಲಿಪರ್‌ಗಳನ್ನು ಹೊಂದಿರುವ ಡ್ಯುಯಲ್ 310mm ವೇವ್ ಡಿಸ್ಕ್‌ಗಳು ಮತ್ತು ಡ್ಯುಯಲ್ - ಚಾನೆಲ್ ABS ಅನ್ನು ಪ್ರಮಾಣಿತವಾಗಿ ನೀಡಲಾಗಿದೆ.

ಹೊಸ XL750 ಟ್ರಾನ್ಸಾಲ್ಪ್ ಮೋಟಾರ್‌ಸೈಕಲ್ 21-ಇಂಚಿನ ಮುಂಭಾಗ ಮತ್ತು 18-ಇಂಚಿನ ಹಿಂಭಾಗದ ಸ್ಪೋಕ್ ವೀಲ್‌ಗಳನ್ನು ಹೊಂದಿದೆ. ಹಿಂಭಾಗದಲ್ಲಿ 1 - ಪಾಟ್ ಕ್ಯಾಲಿಪರ್‌ನೊಂದಿಗೆ 256 mm ಸಿಂಗಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ. ಈ ಅಡ್ವೆಂಚರ್ ಶೋವಾ 43mm SFF-CATM ಅಪ್ಸೈಡ್-ಡೌನ್ (USD) ಮುಂಭಾಗದ ಫೋರ್ಕ್‌ಗಳು ಮತ್ತು ಪ್ರೊ-ಲಿಂಕ್ ಮೂಲಕ ಕಾರ್ಯನಿರ್ವಹಿಸುವ ಹಿಂಭಾಗದ ಶಾಕ್‌ಗಳನ್ನು ಹೊಂದಿದೆ.

ಸಸ್ಪೆನ್ಷನ್‌ನ ಕಂಪ್ರೆಷನ್ ಮತ್ತು ರೀಬೌಂಡ್ ಡ್ಯಾಂಪಿಂಗ್ ಎರಡನ್ನೂ ಹೆಚ್ಚಿಸಲಾಗಿದೆ. ಇದರಲ್ಲಿ ಡ್ಯುಯಲ್ ಎಲ್‌ಇಡಿ ಹೈ/ಲೋ ಯೂನಿಫೈಡ್ ಪ್ರೊಜೆಕ್ಟರ್ ಲೆನ್ಸ್‌ಗಳು ಮತ್ತು ಏರೋಡೈನಮಿಕ್ ವೈಸರ್ ನೀಡಲಾಗಿದೆ. ಇದು ದೀರ್ಘ ಸವಾರಿಗಳಲ್ಲಿ ಶೈಲಿ ಮತ್ತು ಗಾಳಿ ರಕ್ಷಣೆ ಎರಡನ್ನೂ ಹೆಚ್ಚಿಸುತ್ತದೆ. ಒಟ್ಟಾರೆ ಈ ಮೋಟಾರ್ ಸೈಕಲ್ ಜಾಗತಿಕ ಐಕಾನ್ ಆಗಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ XL750 ಟ್ರಾನ್ಸಾಲ್ಪ್ ಮೋಟಾರ್‌ಸೈಕಲ್ ಹ್ಯಾಂಡಲ್‌ಬಾರ್‌ನ ಎಡಭಾಗದಲ್ಲಿ ನೀಡಲಾದ 4 - ವೇ ಟಾಗಲ್ ಸ್ವಿಚ್ ಮೂಲಕ ಸವಾರರು, ಇಂಡಿಕೇಟರ್ ಮತ್ತು ಪ್ರಯಾಣದಲ್ಲಿರುವಾಗ ಸಂಗೀತ ಮತ್ತು ವಾಯಿಸ್ ಕಮಾಂಡ್‌ಗಳನ್ನು ನಿಯಂತ್ರಿಸಲು ಹಾಗೂ ಕರೆ ಮತ್ತು SMS ನೋಟಿಫಿಕೇಷನ್ ಬಳಸಲು ಇದು ಅನುವು ಮಾಡಿಕೊಡುತ್ತದೆ.

ಹೊಸ 5.0-ಇಂಚಿನ ಫುಲ್ಲಿ TFT ಸ್ಕ್ರೀನ್ ಹೊಂದಿದ್ದು, ಹೋಂಡಾ ರೋಡ್‌ಸಿಂಕ್ ಅಪ್ಲಿಕೇಶನ್ ಸಂಪರ್ಕವನ್ನು ಹೊಂದಿದೆ. ಇದರ ಥ್ರೊಟಲ್ - ಬೈ - ವೈರ್ (TBW) ಸಿಸ್ಟಮ್ ಮೂಲಕ ಚಾಲನೆಯಲ್ಲಿರುವ ಎಲೆಕ್ಟ್ರಾನಿಕ್ ಅಸಿಸ್ಟ್ ರೈಡರ್ ಎಂಜಿನ್ ಪವರ್, ಅಸಿಸ್ಟ್ ಸ್ಲಿಪ್ಪರ್ ಕ್ಲಚ್, ಎಂಜಿನ್ ಬ್ರೇಕಿಂಗ್, ABS ಸೇರಿದಂತೆ 5 ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ರೈಡಿಂಗ್ ಮೋಡ್‌ಗಳಲ್ಲಿ ಸ್ಪೋರ್ಟ್, ಸ್ಟ್ಯಾಂಡರ್ಡ್, ರೈನ್, ಗ್ರಾವೆಲ್ ಮತ್ತು ಯುಸರ್ ಸೇರಿವೆ. ಹಾಗೆಯೇ ಇದು ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ವೈಶಿಷ್ಟ್ಯವನ್ನು ಸಹ ಹೊಂದಿದೆ. ಭಾರತದಾದ್ಯಂತ ಹೋಂಡಾದ ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್‌ಗಳು ಶುರುವಾಗಿದ್ದು, ಜುಲೈ 2025 ರಿಂದ ಗ್ರಾಹಕರಿಗೆ ವಿತರಣೆಗಳು ಪ್ರಾರಂಭವಾಗುತ್ತವೆ. ಹೊಸ XL750 ಟ್ರಾನ್ಸಾಲ್ಪ್ ಖಂಡಿತವಾಗಿಯೂ ಭಾರತದ ಅಡ್ವೆಂಚರ್ ಉತ್ಸಾಹಿಗಳನ್ನು ರೋಮಾಂಚನಗೊಳಿಸುತ್ತದೆ ಎಂಬ ವಿಶ್ವಾಸವಿದೆ.

More from DriveSpark

Article Published On: Wednesday, June 18, 2025, 13:51 [IST]
English summary
Honda xl750 transalp adv motorcycle top things
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+