Komaki: ಇತ್ತೀಚೆಗೆ ಬಿಡುಗಡೆಯಾಗಿರುವ ಅಗ್ಗದ ಹೊಸ ಸ್ಕೂಟರ್‌ಗಳು: ವಿಶೇಷತೆಗಳೇನು?

ದೇಶಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಆಗಿರುವ ಕೋಮಾಕಿ ಎಲೆಕ್ಟ್ರಿಕ್ (Komaki electric)' ಇತ್ತೀಚೆಗೆ ತನ್ನ SE ಎಲೆಕ್ಟ್ರಿಕ್ ಸ್ಕೂಟರ್ (Electric scooter) ಸಿರೀಸ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ ಸಾಮಾನ್ಯ ಜನರ ನಿತ್ಯವಸರಗಳಿಗೆ ಪೆಟ್ರೋಲ್ ಚಾಲಿತ ವಾಹನಗಳು ದುಬಾರಿ ಎನಿಸುತ್ತಿವೆ. ಇದನ್ನು ಸರಿದೂಗಿಸಲು ಕೊಮಾಕಿ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಇದೀಗ ಪರಿಚಯಿಸಿದ್ದು, ಈ ಸ್ಕೂಟರ್‌ಗಳ ಬೆಲೆ, ಬ್ಯಾಟರಿ, ರೇಂಜ್ ಸೇರಿದಂತೆ ಎಲ್ಲಾ ವಿಶೇಷತೆಗಳು ಇಲ್ಲಿವೆ.

ಕಂಪನಿಯು ಈ ಸಿರೀಸ್‌ನಲ್ಲಿ SE ಪ್ರೋ, SE ಅಲ್ಟ್ರಾ, SE ಮ್ಯಾಕ್ಸ್ ಎಂಬ ಮೂರು ಹೊಸ ಮಾಡಲ್‌ಗಳನ್ನು ಪರಿಚಯಿಸಿದೆ. ವಾಹನಗಳ ಬೆಲೆಗಳು SE ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ. 67,999, SE ಅಲ್ಟ್ರಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ. 76,999 ಹಾಗೂ SE ಮ್ಯಾಕ್ಸ್‌ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು 1,10,000 ರೂ. ಎಕ್ಸ್‌ ಶೋರೂಂ ಬೆಲೆಯಿದೆ.

komaki-electric-se-range-of-electric-scooters-top-things

ವಿಶೇಷವೆಂದರೆ ಎಲ್ಲಾ ಮೂರು ಮಾದರಿಗಳನ್ನು ಕೊಮಾಕಿ MG Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಧರಿಸಿ ನಿರ್ಮಿಸಲಾಗಿದೆ. ಈ Komaki MG Pro ಅನ್ನು 2024 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದು ಕೂಡ MG PRO Li, MG PRO V ಮತ್ತು MG PRO+ ಸೇರಿದಂತೆ ಮೂರು ಮಾಡಲ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಆಕರ್ಷಕ ಫೀಚರ್ಸ್ ಹಾಗೂ ಉತ್ತಮ ಪರ್ಫಾಮೆನ್ಸ ಹೊಂದಿದೆ.

ಕೊಮಾಕಿ SE ಅಲ್ಟ್ರಾ ಮತ್ತು SE ಮ್ಯಾಕ್ಸ್ LiPo4 ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿದ್ದು, ಸದ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬಳಸುವ ಸುರಕ್ಷಿತ ಬ್ಯಾಟರಿಗಳಾಗಿವೆ. ಕೊಮಾಕಿ SE ಮ್ಯಾಕ್ಸ್ 4.2kw LiPo4 ಬ್ಯಾಟರಿಯು ಸಿಂಗಲ್ ಚಾರ್ಜ್‌ನಲ್ಲಿ 200 ಕಿಮೀ ರೇಂಜ್ ಒದಗಿಸುತ್ತದೆ. ಹಾಗೆಯೇ ಕೊಮಾಕಿ SE ಅಲ್ಟ್ರಾ 2.7 kW LiPo4 ಬ್ಯಾಟರಿಯನ್ನು ಹೊಂದಿದ್ದು, 130 ರಿಂದ 140 ಕಿ.ಮೀ ರೇಂಜ್ ನೀಡುವುದಾಗಿ ಹೇಳಲಾಗಿದೆ.

komaki-electric-se-range-of-electric-scooters-top-things

ಈ ಬ್ಯಾಟರಿಗಳು ಹೆಚ್ಚಿನ ಸಾಮರ್ಥ್ಯದ ಲಿಥಿಯಂ - ಐಯಾನ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿವೆ. ಈ ಹೊಸ ತಂತ್ರಜ್ಞಾನವು ವರ್ಧಿತ ಶ್ರೇಣಿಯನ್ನು ಒದಗಿಸುತ್ತದೆ. ವೈಶಿಷ್ಟ್ಯಗಳ ವಿಷಯದಲ್ಲಿ ಕೊಮಾಕಿ SE ಮ್ಯಾಕ್ಸ್ ಡ್ಯುಯಲ್ ಚಾರ್ಜರ್‌ಗಳು, TFT ಸ್ಕ್ರೀನ್ ಮತ್ತು ಡ್ಯುಯಲ್ ಡಿಸ್ಕ್‌ಗಳನ್ನು ಹೊಂದಿದ್ದು, ಗಂಟೆಗೆ 80 ಕಿ.ಮೀ ಟಾಪ್‌ ಸ್ಪೀಡ್ ಹೊಂದಿದೆ.

SE Pro ಮತ್ತು SE ಅಲ್ಟ್ರಾ ಸ್ಕೂಟರ್‌ಗಳು ಸಿಂಗಲ್ ಡಿಸ್ಕ್, LED ಡಿಜಿಟಲ್ ಸ್ಪೀಡೋಮೀಟರ್ ಮತ್ತು 70 ಕಿ.ಮೀ ಟಾಪ್‌ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಕೊಮಾಕಿ MG Pro ವಿಶೇಷತೆಗಳನ್ನು ನೋಡುವುದಾದ್ರೆ BLDC ಹಬ್-ಮೌಂಟೆಡ್ ಮೋಟಾರ್ ಹೊಂದಿದ್ದು ಸ್ಕೂಟರ್ ಡಿಜಿಟಲ್ ಮ್ಯಾಟ್ರಿಕ್ಸ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ವೈರ್‌ಲೆಸ್ ಆಗಿ ನವೀಕರಿಸುವ ಸಾಮರ್ಥ್ಯವನ್ನು ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ಸುಧಾರಿತ ರೀಜೆನ್, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಅಸಿಸ್ಟ್‌ನೊಂದಿಗೆ ವೈರ್‌ಲೆಸ್ ಕಂಟ್ರೋಲ್, ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಜೊತೆಗೆ ಲಾಕ್ ಬೈ ರಿಮೋಟ್ ಫಂಕ್ಷನ್, ಸ್ವಯಂ-ರೋಗನಿರ್ಣಯ (self - diagnosis), ಕಳ್ಳತನ ವಿರೋಧಿ ಲಾಕ್ (anti - theft lock)ನಂತಹ ಫೀಚರ್ಸ್ ಒಳಗೊಂಡಿದೆ.

ಕಡಿಮೆ-ವೇಗದ Li ವೇರಿಯೆಂಟ್ 1.75 kW ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 75 ಕಿ.ಮೀ ರೇಂಜ್ನೀಡುತ್ತದೆ, V 100 ಕಿ.ಮೀ ರೇಂಜ್ ಹೊಂದಿರುವ 2.2 kW ಬ್ಯಾಟರಿಯನ್ನು ಹೊಂದಿದೆ. + ವೇರಿಯೆಂಟ್ 150 ಕಿ.ಮೀ ರೇಂಜ್ ಹೊಂದಿರುವ 2.7 kW ಬ್ಯಾಟರಿಯನ್ನು ಹೊಂದಿದೆ. ಇದರ ಚಾರ್ಜರ್ ಮೂಲಕ 4 ರಿಂದ 5 ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

More from DriveSpark

Article Published On: Friday, January 31, 2025, 10:53 [IST]
English summary
Komaki electric se range of electric scooters top things
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+