ಸದ್ದಿಲ್ಲದೆ ಬೆಲೆ ಏರಿಸಿ ಸೈಲೆಂಟ್ ಆದ ಕಂಪನಿ: ಬೈಕ್ ಖರೀದಿಗು ಮುನ್ನ ಇದನ್ನೊಮ್ಮೆ ನೋಡಿ
ಭಾರತದಲ್ಲಿ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಕೆಟಿಎಂ ಕಂಪನಿ ನೀಡುವ ಬೈಕ್‌ಗಳಿಗಾಗಿ ಯುವಕರು ಮುಗಿಬಿದ್ದು ಖರೀದಿಸುತ್ತಾರೆ. ಕಂಪನಿಯ ಕೆಟಿಎಂ 390 ಡ್ಯೂಕ್ ಸದ್ಯ ಸ್ಟ್ರೀಟ್ ಫೈಟರ್ ಲುಕ್‌ನೊಂದಿಗೆ ಭಾರತೀಯ ಮಧ್ಯಮ ವರ್ಗದ ಯುವಕರ ಹಾಟ್ ಫೇವರೆಟ್ ಆಗಿದೆ. ಇದರ ಪರ್ಫಾಮೆನ್ಸ್, ಪವರ್, ಫೀಚರ್ಸ್‌ಗೆ ಸಾಟಿಯಿಲ್ಲ ಎಂದು ಹೇಳಬಹುದು. ಇದೇ ವಿಭಾಗದಲ್ಲಿ ಬರುವ ಪ್ರತಿಸ್ಪರ್ಧಿ ಬೈಕ್‌ಗಳಿಗೆ ಹೋಲಿಸಿಕೊಂಡರೆ ಈ ಬೈಕ್ ಟಾಪ್‌ನಲ್ಲಿ ನಿಲ್ಲುತ್ತದೆ. ಇಂತಹ ಪರ್ಫಾಮೆನ್ಸ್ ಕಿಂಗ್ ಬೈಕ್ ಈಗ ತುಸು ಬೆಲೆ ಏರಿಕೆ ಪಡೆದುಕೊಂಡಿದೆ.
ಮೊದಲೇ ಹೇಳಿದಂತೆ ಈ ಬೆಲೆ ಏರಿಕೆಯು ಖರೀದಿದಾರರಿಗೆ ಅಷ್ಟೇನು ಹೊರೆಯಾಗುವುದಿಲ್ಲ. ಏಕೆಂದರೆ ಕೆಟಿಎಂ 390 ಡ್ಯೂಕ್ ಬೈಕಿನ ಬೆಲೆಯನ್ನು ಕೇವಲ ರೂ. 1,000 ಹೆಚ್ಚಿಸಲಾಗಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಈಗ ರೂ. 2.96 ಲಕ್ಷಗಳಾಗಿದೆ. ಸಣ್ಣ ಬೆಲೆ ಏರಿಕೆಯ ಹೊರತಾಗಿಯೂ, ಇದು ಇನ್ನೂ ಹಣಕ್ಕೆ ಮೀರಿ ಅಸಾಧಾರಣ ಮೌಲ್ಯವನ್ನು ನೀಡುತ್ತದೆ.

ಅಂದರೆ ಈ ಬೆಲೆಯಲ್ಲಿ ಈ ಮಟ್ಟದ ಪವರ್‌ನೊಂದಿಗೆ ಸಿಗುವ ಅತ್ಯುತ್ತಮ ಪರ್ಫಾಮೆನ್ಸ್ ಮೋಟಾರ್‌ಸೈಕಲ್ ಎಂದು ಹೇಳಬಹುದು. ಅಲ್ಲದೇ 390 ಡ್ಯೂಕ್ ತನ್ನ ವರ್ಗದಲ್ಲಿನ ಅತ್ಯಂತ ಶಕ್ತಿಶಾಲಿ ನೇಕೆಡ್ ಸ್ಟ್ರೀಟ್ ಮೋಟಾರ್ ಸೈಕಲ್ ಗಳಲ್ಲಿ ಒಂದಾಗಿದೆ. ಈ ಬೈಕ್ 399 ಸಿಸಿ, ಎಲ್‌ಸಿ 4ಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಬರೋಬ್ಬರಿ 45.3 ಬಿಹೆಚ್ ಪವರ್ ಮತ್ತು 39 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಇದು ಕೆಟಿಎಂ ನೀಡುವ ಮಧ್ಯಮ ವಿಭಾಗದ ಮೋಟಾರ್‌ಸೈಕಲ್‌ಗಳ ಬೆಸ್ಟ್ ಎಂಜಿನ್ ಆಗಿದೆ. ಈ ಎಂಜಿನ್ ನೊಂದಿಗೆ 6 - ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದ್ದು, ಇದು ಕ್ವಿಕ್ ಶಿಫ್ಟರ್ ಅನ್ನು ಸಹ ಹೊಂದಿದೆ. ಸದ್ಯ ಕೆಟಿಎಂ 390 ಡ್ಯೂಕ್ ಬೈಕ್ ತನ್ನ ವಿಭಾಗದಲ್ಲಿ ಹಸ್ಕ್ ವರ್ನಾ ಸ್ವಾರ್ಟ್ ಪಿಲೆನ್ 401 ಬೈಕಿಗೆ ನೇರ ಪೈಪೋಟಿ ನೀಡುತ್ತದೆ.

ಕೆಟಿಎಂ 390 ಡ್ಯೂಕ್ ಫೀಚರ್‌ಗಳ ವಿಷಯಕ್ಕೆ ಬಂದರೆ, ಆಲ್ - ಎಲ್ಇಡಿ ಲ್ಯಾಂಪ್‌ಗಳು, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಟಿಎಫ್‌ಟಿ ಡಿಸ್ಪ್ಲೇ, ಟ್ರಾಕ್ಷನ್ ಕಂಟ್ರೋಲ್, ಎಬಿಎಸ್, ಲಾಂಚ್ ಕಂಟ್ರೋಲ್ ಸೇರಿದಂತೆ ಇನ್ನೂ ಹೆಚ್ಚಿನ ಆಕರ್ಷಕ ಫೀಚರ್ಸ್ ಹೊಂದಿದೆ. ಸದ್ಯದ ಮಟ್ಟಿಗೆ ತನ್ನ ಬೆಲೆಗೆ ತಕ್ಕಂತೆ ಬೆಸ್ಟ್ ಮೋಟಾರ್‌ಸೈಕಲ್ ಎನ್ನಿಸಿಕೊಂಡಿದೆ.
ಬೈಕಿನ ಸ್ಟೈಲಿಂಗ್ ವಿಷಯದಲ್ಲೂ ಕೆಟಿಎಂ ನೀಡುವ ಸ್ಪೋರ್ಟಿ ಡಿಸೈನ್ ಎಲ್ಲರ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆಕ್ರಮಣಕಾರಿ ಎಲ್ಇಡಿ ಹೆಡ್ ಲೈಟ್ ನಿಂದ ಹಿಡಿದು ತೀಕ್ಷ್ಣವಾದ ಟ್ಯಾಂಕ್ ಸೇರಿದಂತೆ ತೆರೆದ ಸಬ್ ಫ್ರೇಮ್ ವರೆಗೆ, 390 ಡ್ಯೂಕ್ ಸರಿಯಾದ ಸ್ಟ್ರೀಟ್ ಫೈಟರ್ ನಂತೆ ಕಾಣುತ್ತದೆ.

ಬೈಕ್ ಉತ್ತಮ ಪರ್ಫಾಮೆನ್ಸ್ ಬಯಸುವವರಿಗೆ ಹೇಳಿಮಾಡಿಸಿದಂತಿರುತ್ತದೆ. ಬಲವಾದ ಮಧ್ಯಮ ಶ್ರೇಣಿಯನ್ನು ಹೊಂದಿದ್ದು, ಎಲೆಕ್ಟ್ರಾನಿಕ್ಸ್ ಎಲ್ಲವನ್ನೂ ನಿಯಂತ್ರಣದಲ್ಲಿಡಲು ಉತ್ತಮವಾಗಿ ಡಿಸೈನ್ ಮಾಡಲಾಗಿದೆ. ವಾಸ್ತವವಾಗಿ, ಕೆಟಿಎಂ 390 ಡ್ಯೂಕ್‌ನ ಬೆಲೆ ಮತ್ತು ಪರ್ಫಾಮೆನ್ಸ್ ಎರಡಕ್ಕೂ ಸಂಬಂಧವೇ ಇಲ್ಲ. ಈ ಬೆಲೆಗೆ ಈ ಮಟ್ಟದ ಪವರ್‌ಫುಲ್ ಬೈಕ್ ಸಿಗುವುದು ತುಂಬಾ ವಿರಳ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








