KTM: ಭಾರತದಲ್ಲಿ ಎರಡು ನವೀಕರಿಸಿದ ಅಡ್ವೆಂಚರ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಕೆಟಿಎಂ
ಪ್ರೀಮಿಯಂ ಸ್ಪೋರ್ಟ್ಸ್ ಮೋಟಾರ್‌ಸೈಕಲ್ ಬ್ರಾಂಡ್ ಆಗಿರುವ ಕೆಟಿಎಂ, ತನ್ನ 390 ಸಿಸಿ ವಿಭಾಗಕ್ಕೆ ಎರಡು ಹೊಸ ವೇರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ. ನವೀಕರಿಸಿದ ಕೆಟಿಎಂ 390 ಅಡ್ವೆಂಚರ್ ಎಕ್ಸ್ (390 Adventure X) ಮತ್ತು ಕೆಟಿಎಂ 390 ಅಡ್ವೆಂಚರ್ ಎಂಡ್ಯೂರೋ ಆರ್ (Enduro R) ಈಗ ಹೊಸದಾಗಿ ಬಿಡುಗಡೆಯಾಗಿರುವ ವೇರಿಯೆಂಟ್‌ಗಳಾಗಿವೆ. ಇವು ಕ್ರಮವಾಗಿ ರೂ. 3,03,125 ಮತ್ತು ರೂ. 3,53,825 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಎರಡು ನವೀಕೃತ ಮೋಟಾರ್‌ಸೈಕಲ್‌ಗಳ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಕೆಟಿಎಂ 390 ಅಡ್ವೆಂಚರ್ ಎಕ್ಸ್ - ಈಗ ಚುರುಕಾದ, ಸುರಕ್ಷಿತ, ಹೆಚ್ಚು ಬಹುಮುಖವಾಗಿದ್ದು, 390 ಅಡ್ವೆಂಚರ್ ಎಕ್ಸ್ ದೀರ್ಘ-ದೂರ ಮತ್ತು ಆಫ್-ರೋಡ್ ಬಯಸುವ ಗ್ರಾಹಕರಿಗೆ ಯಶಸ್ವಿ ಆಯ್ಕೆಯಾಗಲಿದೆ. ಹೊಸ ಅವತಾರದಲ್ಲಿ, ಬೈಕ್ ಈಗ KTM ಶ್ರೇಣಿಯ ಪ್ರಮುಖ ಮಾಡಲ್‌ಗಳಲ್ಲಿ ಮಾತ್ರ ನೀಡಲಾಗುತ್ತಿದ್ದ ಸುಧಾರಿತ ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳನ್ನು ಪಡೆಯುತ್ತವೆ.

ಹೊಸ KTM 390 ಅಡ್ವೆಂಚರ್ X ನ ಪ್ರಮುಖ ವೈಶಿಷ್ಟ್ಯಗಳ ನವೀಕರಣಗಳುಗಳನ್ನು ನೋಡುವುದಾದ್ರೆ, ಕ್ರೂಸ್ ಮತ್ತು ಸ್ಪೀಡ್ ಲಿಮಿಟರ್ ಮೋಡ್‌ಗಳೊಂದಿಗೆ ಕ್ರೂಸ್ ಕಂಟ್ರೋಲ್ ಈಗ ಪ್ರಮಾಣಿತವಾಗಿದೆ. ರೋಡ್, ರೈನ್ ಮತ್ತು ಆಫ್-ರೋಡ್ ಎಂಬ ರೈಡ್ ಮೋಡ್‌ಗಳೊಂದಿಗೆ ಸವಾರರು ರಸ್ತೆ ಪರಿಸ್ಥಿತಿಗಳಿಗೆ ತಕ್ಷಣ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತವೆ.
ಮೂಲೆಗಳಲ್ಲಿ ಒರಗಿದಾಗ ಸುರಕ್ಷಿತ, ಹೆಚ್ಚು ಸ್ಥಿರವಾದ ಬ್ರೇಕಿಂಗ್‌ಗಾಗಿ ಕಾರ್ನರಿಂಗ್ ABS (cABS) ನೀಡಲಾಗಿದೆ. ಮಿಶ್ರ ಭೂಪ್ರದೇಶಗಳಲ್ಲಿ ವರ್ಧಿತ ಸ್ಥಿರತೆ ಮತ್ತು ಸ್ಟೆಬಿಲಿಟಿಗಾಗಿ ಮೋಟಾರ್‌ಸೈಕಲ್ ಟ್ರಾಕ್ಷನ್ ಕಂಟ್ರೋಲ್ (MTC) ಕೂಡ ಪಡೆದುಕೊಂಡಿದೆ. ಇದು ಒಟ್ಟಾರೆ ಆಫ್ ರೋಡ್‌ಗೆ ಹೇಳಿಮಾಡಿಸಿದ ಎಲ್ಲಾ ಫೀಚರ್‌ಗಳನ್ನು ಒಳಗೊಂಡಿದೆ.

KTM 390 ಅಡ್ವೆಂಚರ್ ಎಂಡ್ಯೂರೋ R ಬಗ್ಗೆ ಹೇಳುವುದಾದರೆ, ಇದನ್ನು ಕಂಪನಿಯು OG ಆಫ್-ರೋಡ್ ಐಕಾನ್ ಎಂದು ಬಿರುದು ನೀಡಿದೆ. KTM 390 ಅಡ್ವೆಂಚರ್ ಎಂಡ್ಯೂರೋ R ಜಾಗತಿಕ-ಸ್ಪೆಕ್ ರೂಪಾಂತರವು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇದು ರಾಜಿಯಾಗದ ಡಕಾರ್ ಪರ್ಫಾಮೆನ್ಸ್ ಬಯಸುವ ಆಫ್-ರೋಡರ್ ಆಗಿದ್ದು, ಸಾಹಸಿ ಯುವಕರಿಗಾಗಿ ವಿನ್ಯಾಸಗೊಳಿಸಲಾಗಿದೆ.
KTM ಬಗ್ಗೆ: ವಿಶಿಷ್ಟವಾದ ರೆಡಿ ಟು ರೇಸ್ ಮನಸ್ಥಿತಿಯಿಂದ ನಡೆಸಲ್ಪಡುವ KTM ಯುರೋಪಿನ ಅತಿದೊಡ್ಡ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿದೆ. ಹೆಚ್ಚಿನ ಪರ್ಫಾಮೆನ್ಸ್ ಸ್ಟ್ರೀಟ್ ಮತ್ತು ಆಫ್‌ರೋಡ್ ಸ್ಪೋರ್ಟ್ ಮೋಟಾರ್‌ಸೈಕಲ್‌ಗಳ ಪ್ರಮುಖ ತಯಾರಕ ಕಂಪನಿಯಾಗಿದೆ. ಕಳೆದ ವರ್ಷಗಳಲ್ಲಿ ಕೆಟಿಎಂ ಪ್ರಪಂಚದಾದ್ಯಂತದ ರೇಸ್‌ಟ್ರಾಕ್‌ಗಳಲ್ಲಿ ತೀವ್ರ ಪ್ರತಿಸ್ಪರ್ಧಿಯಾಗಿ ಖ್ಯಾತಿಯನ್ನು ಗಳಿಸಿದೆ.

ವಿಶ್ವ ವೇದಿಕೆಯಲ್ಲಿ ಗಮನಾರ್ಹ ಯಶಸ್ಸು ಅದು ರಚಿಸುವ ಪ್ರತಿಯೊಂದು ಉತ್ಪನ್ನ ಮತ್ತು ಮಾಡುವ ಪ್ರತಿಯೊಂದು ನಡೆಯಲ್ಲೂ ಇದನ್ನು ಕಾಣಬಹುದಾಗಿದೆ. ಆಫ್‌ರೋಡ್ ವಿಭಾಗಗಳಲ್ಲಿ ಸ್ಥಾಪಿತ ಉಪಸ್ಥಿತಿಯೊಂದಿಗೆ, ಕೆಟಿಎಂ ವಿಶ್ವದ ಅತ್ಯಂತ ನವೀನ ಸ್ಟ್ರೀಟ್ ಮೋಟಾರ್‌ಸೈಕಲ್ ತಯಾರಕರಲ್ಲಿ ಒಂದಾಗಿದೆ ಮತ್ತು ಈಗ ವಿಶ್ವದ ಅತಿದೊಡ್ಡ ಸ್ಪೋರ್ಟ್ ಮೋಟಾರ್‌ಸೈಕಲ್ ತಯಾರಕರಾಗುವ ಗುರಿಯನ್ನು ಹೊಂದಿದೆ.
ಕೆಟಿಎಂ ಸುಮಾರು ಅರ್ಧ ಮಿಲಿಯನ್ ಬೈಕಿಂಗ್ ಉತ್ಸಾಹಿಗಳ ಬಲವಾದ ಗ್ರಾಹಕ ನೆಲೆಯನ್ನು ಭಾರತದಲ್ಲಿ ನಿರ್ಮಿಸಿದೆ. ಹಾಗೆಯೇ ಭಾರತವು ಕೆಟಿಎಂಗೆ ಅತಿದೊಡ್ಡ ಜಾಗತಿಕ ಮಾರುಕಟ್ಟೆಯನ್ನಾಗಿ ಮಾಡಿದೆ. ಬಜಾಜ್ ಆಟೋ ಲಿಮಿಟೆಡ್ ಮತ್ತು ಕೆಟಿಎಂ ನಡುವಿನ ಪಾಲುದಾರಿಕೆಯನ್ನು 2007 ರಲ್ಲಿ ಸಹಿ ಮಾಡಲಾಯಿತು, ಬಜಾಜ್ ಆಟೋ ಲಿಮಿಟೆಡ್ ಈಗ ಕೆಟಿಎಂ ಎಜಿಯಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ.
ಕೆಟಿಎಂ ಉತ್ಪನ್ನಗಳಲ್ಲಿ ರೇಸ್-ಸಾಬೀತಾದ ತಂತ್ರಜ್ಞಾನವನ್ನು ಸೇರಿಸುವುದರಿಂದ ಕೆಟಿಎಂ ಸವಾರರು ಕೆಟಿಎಂ ಬ್ರ್ಯಾಂಡ್ ಅನ್ನು ವ್ಯಾಖ್ಯಾನಿಸುವ ರೋಮಾಂಚನ ಮತ್ತು ಕಾರ್ಯಕ್ಷಮತೆಯನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. 2012 ರಲ್ಲಿ ಭಾರತದಲ್ಲಿ ಪ್ರವೇಶಿಸಿದಾಗಿನಿಂದ, ಕೆಟಿಎಂ ದೇಶಾದ್ಯಂತ 450 ಕ್ಕೂ ಹೆಚ್ಚು ಮಳಿಗೆಗಳಿಗೆ ತನ್ನ ಅಸ್ತಿತ್ವವನ್ನು ಬೆಳೆಸಿಕೊಂಡಿದೆ.


Click it and Unblock the Notifications








