Mileage bikes: ಭಾರತದ ಎರಡು ಬೆಸ್ಟ್ ಮೈಲೇಜ್ ಬೈಕ್‌ಗಳು: ತಿಂಗಳ ಪೂರ್ತಿ ಓಡಿಸಬಹುದು!

ಭಾರತದಲ್ಲಿ ಹೋಂಡಾ ಶೈನ್ (Honda Shine) ಹಾಗೂ ಹೀರೋ ಸ್ಪ್ಲೆಂಡರ್ ಪ್ಲಸ್‌ (Hero Splendor Plus) ಬೈಕ್‌ಗಳಿಗೆ ಮೊದಲಿನಿಂದಲೂ ತುಂಬಾ ಬೇಡಿಕೆ ಇದೆ. ಮಧ್ಯಮ ಹಾಗೂ ಬಡ ವರ್ಗದ ಜೀವನಾಧಾರವಾಗಿರುವ ಈ ಬೈಕ್‌ಗಳು 2025ರಲ್ಲಿ ಹೊಸ ಅಪ್‌ಡೇಟ್‌ಗಳನ್ನು ಪಡೆದುಕೊಂಡಿವೆ. ಎರಡೂ ಬೈಕ್‌ಗಳು ಉತ್ತಮ ಮೈಲೇಜ್ ನೀಡುವ ಕಾರಣ, ಹಲವರಿಗೆ ಯಾವುದನ್ನು ಖರೀದಿಸಬೇಕು ಎಂಬ ಗೊಂದಲಿರುತ್ತದೆ. ಅಂಥವರಿಗಾಗಿಯೇ ಎರಡೂ ಬೈಕ್‌ಗಳ ನಡುವೆ ಹೋಲಿಕೆ ಮಾಡಿ ಇಲ್ಲಿ ವಿವರಿಸಿದ್ದೇವೆ. ಈ ಎರಡು 100 ಸಿಸಿ ಮೋಟಾರ್ ಸೈಕಲ್‌ಗಳಲ್ಲಿ ಯಾವುದು ಬೆಸ್ಟ್ ಇಲ್ಲಿ ನೋಡೋಣ.

ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆ ವಿಷಯಕ್ಕೆ ಬಂದರೆ ರೂ. 74,931 ಎಕ್ಸ್‌ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹಾಗೆಯೇ ಹೊಸ ಹೋಂಡಾ ಶೈನ್ 100 ಮೋಟಾರ್‌ಸೈಕಲ್‌ ಬೆಲೆಯ ವಿಷಯಕ್ಕೆ ಬಂದರೆ, ಇದು ರೂ. 68,767 ಎಕ್ಸ್ - ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಹೋಂಡಾ ಶೈನ್ 100 ಹೆಚ್ಚು ಕೈಗೆಟುಕುವ ಮೋಟಾರ್ ಸೈಕಲ್ ಆಗಿದೆ.

mileage-bikes-honda-shine-and-hero-splendor-plus-mileage-features

ಪ್ರತಿ ಲೀಟರ್‌ಗೆ 70 ಕಿ.ಮೀ ವರೆಗೆ ಮೈಲೇಜ್ ನೀಡುವ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್, 97.2 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದೆ. 8.02 ಪಿಎಸ್ ಪವರ್ ಹಾಗೂ 8.05 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 4 - ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪ್ರತಿ ಲೀಟರ್‌ಗೆ 65 ಕಿ.ಮೀ ವರೆಗೆ ಮೈಲೇಜ್ ನೀಡುವ ಹೊಸ ಹೋಂಡಾ ಶೈನ್ 100 ಮೋಟಾರ್‌ಸೈಕಲ್‌, 98.98 ಸಿಸಿ ಒಬಿಡಿ - 2ಬಿ ಪೆಟ್ರೋಲ್ ಎಂಜಿನ್ ಹೊಂದಿದೆ. 7.28 ಪಿಎಸ್ ಪವರ್ ಮತ್ತು 8.04 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 - ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.

mileage-bikes-honda-shine-and-hero-splendor-plus-mileage-features

ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಬರುತ್ತದೆ. ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಬರೋಬ್ಬರಿ 112 ಕೆ.ಜಿ ತೂಕವಿದ್ದು, 9.8 ಲೀಟರ್‌ನ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಸವಾರರ ಸುರಕ್ಷತೆಗಾಗಿ ಮುಂಭಾಗ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗ ಸಾಮಾನ್ಯ ಡ್ರಮ್ ಬ್ರೇಕ್ ಸೆಟಪ್‌ನ್ನು ಒಳಗೊಂಡಿದೆ.

ಹೊಸ ಶೈನ್ 100 ಮೋಟಾರ್‌ಸೈಕಲ್‌ ಈ ಬೈಕ್ 99 ಕೆ.ಜಿ ತೂಕವಿದ್ದು, 9 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ. ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್-ಸ್ಟ್ಯಾಂಡ್ ಸೆನ್ಸರ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಬಲ್ಬ್-ಟರ್ನ್ ಇಂಡಿಕೇಟರ್‌ಗಳು, ಸಿಂಗಲ್-ಪೀಸ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.ಡ್ರಮ್ ಬ್ರೇಕ್‌ ಹಾಗೂ ಸಿಬಿಎಸ್ ಸಿಸ್ಟಮ್ ಹೊಂದಿದೆ.

mileage-bikes-honda-shine-and-hero-splendor-plus-mileage-features

ಇನ್ನು ಎರಡೂ ಬೈಕ್‌ಗಳು ಒಂದೇ ರೀತಿಯ ಸಸ್ಪೆನ್ಷನ್ ಸೆಟಪ್ ಹೊಂದಿವೆ. ಶೈನ್ 100 ನ 17-ಇಂಚಿನ ಅಲಾಯ್ ವೀಲ್‌ಗಳು ಒರಟು ರಸ್ತೆಗಳಲ್ಲಿ ಉತ್ತಮವಾಗಿರುತ್ತವೆ. ಸ್ಪ್ಲೆಂಡರ್‌ನ ದೊಡ್ಡ 18-ಇಂಚಿನ ಅಲಾಯ್ ವೀಲ್‌ಗಳು ತನ್ನ ವಿಭಾಗದಲ್ಲಿ ಬೆಸ್ಟ್‌ ಎನ್ನಿಸಿಕೊಂಡಿವೆ. ಜೊತೆಗೆ ಸ್ಪ್ಲೆಂಡರ್‌ನಲ್ಲಿರುವ ಅಲಾಯ್ ವೀಲ್‌ಗಳು ಟ್ಯೂಬ್‌ಲೆಸ್ ಆಗಿದ್ದರೆ, ಹೋಂಡಾ ಶೈನ್ 100 ಟ್ಯೂಬ್ ಜೊತೆಗೆ ಬರುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, April 3, 2025, 11:13 [IST]
English summary
Mileage bikes honda shine and hero splendor plus mileage features
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+