Mantra: ಸೈಕಲ್ ಬೆಲೆಯಲ್ಲಿ ಸ್ಕೂಟರ್ ಖರೀದಿಸಿ... ಕೇವಲ 5 ಸಾವಿರ ಕಟ್ಟಿ ವಾಹನ ಕೊಂಡೊಯ್ಯಬಹುದು!
ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ. ಅದರಲ್ಲೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಕೂಟರ್‌ಗಳು ಲಭ್ಯವಾದರೆ ಇನ್ನೂ ಬೇಡಿಕೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಂತ್ರ (Mantra) ಎಲೆಕ್ಟ್ರಿಕ್ ಕಂಪನಿಯು ವಿಭಿನ್ನ ಬಜೆಟ್ ಮತ್ತು ಅಗತ್ಯಗಳಿಗೆ ಸರಿಹೊಂದುವಂತೆ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ನೀಡುತ್ತಿದೆ. ಕೇವಲ 35,000 ರೂ.ಗಳಿಂದ ಪ್ರಾರಂಭವಾಗುವ ಬೆಸ್ಟ್ ಬಜೆಟ್ ಸ್ಕೂಟರ್‌ಗಳನ್ನು ನಿಡುತ್ತಿದೆ. ಕೇವಲ ರೂ.5,000 ಡೌನ್ ಪೇಮೆಂಟ್ ನೊಂದಿಗೆ ಸ್ಕೂಟರ್ ಅನ್ನು ಮನೆಗೆ ತೆಗೆದುಕೊಂಡು ಹೋಗಬಹುದು ಎಂದು ಕಂಪನಿ ಹೇಳಿದೆ.
ಇತ್ತೀಚೆಗೆ ಒಂದು ಉತ್ತಮ ಸೈಕಲ್ ಬೆಲೆಯೆ 30 ಸಾವಿರವಿದ್ದು, ಇದೇ ಬೆಲೆಯ ಆಸುಪಾಸಿನಲ್ಲಿ ಮಂತ್ರ ಕಂಪನಿ ಸ್ಕೂಟರ್ ನೀಡುತ್ತಿರುವುದು ವಿಶೇಷ. ಕಂಪನಿಯು ಆರ್‌ಟಿಒ ಮತ್ತು ಆರ್‌ಟಿಒಗೆ ಒಳಪಡದ ಆವೃತ್ತಿಗಳು ಸೇರಿದಂತೆ ಸುಮಾರು 10 ವಿಭಿನ್ನ ಮಾಡಲ್‌ಗಳನ್ನು ನೀಡುತ್ತಿದೆ. ಗ್ರಾಹಕರು ಕ್ರೆಡಿಟ್ ಅರ್ಹತೆಯ ಆಧಾರದ ಮೇಲೆ 5,000 ರೂ.ಗಳಿಂದ 10,000 ರೂ.ಗಳವರೆಗಿನ ಡೌನ್ ಪೇಮೆಂಟ್ ಮಾಡಿ ಸುಲಭ ಕಂತು ಯೋಜನೆಗಳನ್ನು ಆಯ್ಕೆ ಮಾಡಬಹುದು.

ಎಂಟ್ರಿ ಲೆವೆಲ್ ಸ್ಕೂಟರ್ ಕಲರ್‌ಫುಲ್ ಮೀಟರ್, ಟ್ಯೂಬ್ ಲೆಸ್ ಟೈರ್‌ಗಳು, ಫ್ರಂಟ್ ಡಿಸ್ಕ್ ಬ್ರೇಕ್, ಎಲ್‌ಇಡಿ ಲೈಟ್‌ಗಳು ಮತ್ತು ಸೆಂಟ್ರಲ್ ಲಾಕ್ ಸಿಸ್ಟಮ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಬೇಸ್ ವೇರಿಯೆಂಟ್ 35,000 ರೂ.ಗಳಿಂದ ಬೆಲೆ ಆರಂಭವಾಗಿ ಟಾಪ್ ಎಂಡ್ ಮಂತ್ರ ಸ್ಕೂಟರ್ ಬೆಲೆಯು ರೂ.64,000 ಗಳಾಗಿದೆ. ಖರೀದಿದಾರರು ಮಾದರಿ ಮತ್ತು ಬ್ಯಾಟರಿ ಪ್ರಕಾರವನ್ನು ಅವಲಂಬಿಸಿ ಒಂದರಿಂದ ಮೂರು ವರ್ಷಗಳ ವಾರಂಟಿಯನ್ನು ಪಡೆಯಬಹುದು.
ಇದರಲ್ಲಿ ಆರ್‌ಟಿಒಗೆ ಒಳಪಡದ ಸ್ಕೂಟರ್ ವಿಭಾಗದಲ್ಲಿ ಬೇಸ್ ವೇರಿಯೆಂಟ್ ಬೆಲೆಯು 35,000 ರೂ.ಗಳಿಂದ ಪ್ರಾರಂಭವಾಗುತ್ತದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 60 ಕಿ.ಮೀ ರೇಂಜ್ ನೀಡುತ್ತದೆ. ಇದೇ ಮಾದರಿಯು ಡ್ಯುಯಲ್ ಬ್ಯಾಟರಿ ವೇರಿಯೆಂಟ್‌ನಲ್ಲೂ ಲಭ್ಯವಿದ್ದು, ಇದರ ಬೆಲೆಯು 40,000 ರೂ. ಇದೆ. ವೇಪರ್ ಗ್ರಿಲ್ (Vapor Grill) ಮಾಡಲ್ ಸಿಂಗಲ್ ಚಾರ್ಜ್‌ನಲ್ಲಿ 80 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರ ಬೆಲೆಯು 56,000 ರೂ. ಇದೆ.

ಇದೇ ವಿಭಾಗದಲ್ಲಿ ಸಿಂಗಲ್ ಚಾರ್ಜ್‌ಗೆ 80 ಕಿ.ಮೀ ರೇಂಜ್ ನೀಡುವ ವೇರಿಯೆಂಟ್‌ಗಳಾದ ವೇಪರ್ ಯು(Vapor U) 54,000 ರೂ. ಮತ್ತು ಮೊನಾರ್ಕ್(Monarch) 57,000 ರೂ. ಬೆಲೆಗಳನ್ನು ಹೊಂದಿವೆ. ನಂತರ ಟಾಪ್ ವೇರಿಯೆಂಟ್ ಆಕ್ಟಿವಾ ಬೆಲೆಯು ರೂ.53,000 ಇದ್ದು, ಇದು 80 ಕಿ.ಮೀ ರೇಂಜ್ ನೀಡುತ್ತದೆ. ಬಿ9 ಆಕ್ಟಿವಾ ನ್ಯೂ ಸ್ಕೂಟರ್ ರೂ. 60,000 ಬೆಲೆಯಿದ್ದು, 100 ಕಿ.ಮೀ ರೇಂಜ್ ನೀಡುತ್ತದೆ.(ಎಲ್ಲವು ಎಕ್ಸ್ ಶೋರೂಂ ಬೆಲೆಗಳು)
ಬಿ9 ವೇಪರ್ ನ್ಯೂ ಸ್ಕೂಟರ್‌ನಲ್ಲಿ ಜೆಲ್ ಮತ್ತು ಲಿಥಿಯಂ ಬ್ಯಾಟರಿ ಆಯ್ಕೆಗಳು, ಆಟೋ-ಲಾಕಿಂಗ್ ಸಿಸ್ಟಮ್, ರಿವರ್ಸ್ ಮೋಡ್, ಎಲ್ಇಡಿ ಲ್ಯಾಂಪ್‌ಗಳು, ಪವರ್ ಬ್ರೇಕ್, ಟ್ಯೂಬ್ಲೆಸ್ ಟೈರ್, ಯುಎಸ್‌ಬಿ ಪೋರ್ಟ್ ಮತ್ತು ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಈ ವೈಶಿಷ್ಟ್ಯಗಳು ಸುರಕ್ಷಿತ ಮತ್ತು ಅನುಕೂಲಕರ ಸವಾರಿ ಅನುಭವವನ್ನು ಖಚಿತಪಡಿಸುತ್ತವೆ.

ಇವಿಷ್ಟೆ ಅಲ್ಲದೆ ವಿಶಾಲವಾದ ಉದ್ದನೆಯ ಸೀಟ್, 25-ಲೀಟರ್ ಬೂಟ್ ಸ್ಪೇಸ್, ಡ್ಯುಯಲ್ ಡಿಸ್ಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಡಿಜಿಟಲ್ ಡಿಸ್ಪ್ಲೇಯನ್ನು ಹೊಂದಿದೆ. 32 ಇಂಚಿನ ಎಲ್ಇಡಿ ಟಿವಿ ಸೇರಿದಂತೆ ಅತ್ಯಾಕರ್ಷಕ ಉಡುಗೊರೆಗಳನ್ನು ಸಹ ನೀಡಲಾಗುತ್ತಿದೆ ಎಮದು ಕಂಪನಿ ಹೇಳಿಕೊಂಡಿದೆ. ಸ್ಕೂಟರ್ ಖರೀದಿಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








