Hero: 2025ರ ಹೀರೋ ಸೂಪರ್ ಸ್ಪ್ಲೆಂಡರ್‌ನ ಪರಿಕ್ಷೆ.. ಶೀಘ್ರ ಹೊಸ ರೂಪದಲ್ಲಿ ಮಾರಾಟಕ್ಕೆ, ಅತಿ ಕಡಿಮೆ ಬೆಲೆ?
ಭಾರತದಲ್ಲಿ ದಶಕಗಳಿಂದ 'ಸ್ಪ್ಲೆಂಡರ್' ಮಧ್ಯಮ ವರ್ಗದ ಜನರ ನೆಚ್ಚಿನ ಬೈಕ್ ಆಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ ದೊರೆಯವುದು ಮಾತ್ರವಲ್ಲದೆ, ಗರಿಷ್ಠ ಮೈಲೇಜ್ ನೀಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಹೀರೋ ಸೂಪರ್ ಸ್ಪ್ಲೆಂಡರ್ (Hero Super Splendor) ಶಕ್ತಿಯತವಾದ ಮೋಟಾರ್‌ಸೈಕಲ್ ಆಗಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಸದ್ಯ, ಇದೇ ಬೈಕ್‌ನ್ನು ಒಂದಷ್ಟು ನವೀಕರಿಸಿ, ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಕಂಪನಿಯು ತಯಾರಿಯನ್ನು ನಡೆಸುತ್ತಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಇತ್ತೀಚೆಗೆ, ರಾಜಸ್ಥಾನದ ಜೈಪುರದಲ್ಲಿ 2025ರ ನೂತನ 'ಹೀರೋ ಸೂಪರ್ ಸ್ಪ್ಲೆಂಡರ್' ಮೋಟಾರ್‌ಸೈಕಲ್ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದೆ. ಆ ಸ್ಪೈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿವೆ. ಹೊಸ ಬೈಕ್ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆಗಳನ್ನು ಪಡೆದುಕೊಂಡಿದೆ. ಅದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ವಿಶೇಷವಾಗಿ ಆಕರ್ಷಕವಾದ ಕಪ್ಪು (ಬ್ಯ್ಲಾಕ್) ಬಣ್ಣವನ್ನು ಹೊಂದಿದೆ. ಜೊತೆಗೆ 18-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿರುವುದನ್ನು ಸಹ ನೋಡಬಹುದಾಗಿದೆ.

ಈ ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ನ ಎಂಜಿನ್‌ನ್ನು ಒಬಿಡಿ 2ಬಿ (OBD-2B) ಮಾನದಂಡಗಳಿಗೆ ತಕ್ಕಂತೆ ನವೀಕರಿಸಲು ಕಂಪನಿಯು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಇಂಗಾಲ ಹೊರಸೂಸುವಿಕೆಯಲ್ಲಿ ಹೆಚ್ಚಿನ ತೊಂದರೆಗಳು ಕಂಡುಬಂದರೆ, ಸವಾರನನ್ನು ಎಚ್ಚರಿಸಲು ಸಾಧ್ಯವಾಗಲಿದ್ದು, ಹಾಗೆಯೇ ಬೈಕ್‌ನ ಕಾರ್ಯಕ್ಷಮತೆಯು ವೃದ್ಧಿಯಾಗಲಿದೆ.
ಹೊಸ ಬೈಕ್‌ನ ಎಂಜಿನ್‌ನ್ನು 'ಒಬಿಡಿ 2ಬಿ' ಮಾನದಂಡಗಳ ಅನ್ವಯ ಸಿದ್ಧಪಡಿಸಿದರೂ ಕಾರ್ಯಕ್ಷಮತೆಯಲ್ಲಿ ಯಾವುದೇ ಮಾರ್ಪಾಡುಗಳನ್ನು ಮಾಡಲಾಗಿಲ್ಲ ಎಂದು ಹೇಳಲಾಗಿದೆ. ಇದು ಸದ್ಯವಿರುವ ಮಾಡೆಲ್‌ನಂತೆಯೇ 124.7 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿರಲಿದೆ. 7500 ಆರ್‌ಪಿಎಂನಲ್ಲಿ 10.7 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6000 ಆರ್‌ಪಿಎಂನಲ್ಲಿ 10.6 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕಲಿದೆ.

2025ರ ನೂತನ ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್‌ಸೈಕಲ್ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿರಲಿದ್ದು, 69 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತವಿರುವ ಮಾಡೆಲ್ ಬ್ಲಾಕ್-ಸಿಲ್ವರ್ ಸ್ಟ್ರೀಟ್, ಮೆಟಾಲಿಕ್ ನೆಕ್ಸಸ್ ಬ್ಲೂ, ಕ್ಯಾಂಡಿ ಬ್ಲೇಜಿಂಗ್ ರೆಡ್ ಮತ್ತು ಬ್ಲಾಕ್-ಸ್ಪೋರ್ಟ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಅದೇ ಬಣ್ಣಗಳೊಂದಿಗೆ ಹೊಸ ಬೈಕ್ ಕೂಡ ಗ್ರಾಹಕರ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಈಗಿರುವ ಹೀರೋ ಸೂಪರ್ ಸ್ಪ್ಲೆಂಡರ್ ಮೋಟಾರ್‌ಸೈಕಲ್ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಲಾಂಗ್ ಸಿಂಗಲ್-ಪೀಸ್ ಸೀಟ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರೊಂದಿಗೆ 10 ಲೀ. ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಹೊಸ ಬೈಕ್ ಸಹ ಹೆಚ್ಚು - ಕಮ್ಮಿ ಇದೇ ರೀತಿಯಲ್ಲಿಯೇ ಇರಲಿದೆ.

ಇನ್ನು, ದೇಶೀಯವಾಗಿ ಖರೀದಿಗೆ ದೊರೆಯುತ್ತಿರುವ ಹೊಚ್ಚ ಹೊಸ ಹೀರೋ ಸೂಪರ್ ಸ್ಪ್ಲೆಂಡರ್ ರೂ.81,098 ರಿಂದ ರೂ.85,698 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಡ್ರಮ್ (Drum) ಹಾಗೂ ಡಿಸ್ಕ್ (Disc) ಎಂಬ ಎರಡು ರೂಪಾಂತರಗಳನ್ನು (ವೇರಿಯೆಂಟ್) ಒಳಗೊಂಡಿದೆ. ಹೊಸ ಮಾಡೆಲ್‌ನ್ನು ಇದೇ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎನ್ನಲಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: GaadiWaadi


Click it and Unblock the Notifications








