Honda: ಹೊಸ ಹೋಂಡಾ ಡಿಯೋ 125 ಸ್ಕೂಟರ್ ಬಿಡುಗಡೆ: ಹೊಸ ಬೆಲೆ, ನವೀನ ಫೀಚರ್ಸ್!
ಹೋಂಡಾ ಕಂಪನಿಯು ತನ್ನ 2025 ರ ಹೊಸ ಡಿಯೋ ಸ್ಕೂಟರ್ 125 ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಇದು DLX ಹಾಗೂ H-ಸ್ಮಾರ್ಟ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಡಿಎಲ್ಎಕ್ಸ್ ಮಾದರಿಯು 96,749 ರೂ. ಹಾಗೂ ಎಚ್-ಸ್ಮಾರ್ಟ್ ಮಾದರಿಯು 1,02,144 ರೂ. (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿವೆ. ಯುವಕರ ಆದ್ಯತೆಗಳಿಗೆ ಅನುಗುಣವಾಗಿ ನವೀಕರಿಸಿದ ಡಿಯೋ 125 ಹೊಸ ಡಿಸೈನ್, ಆಕರ್ಷಕ ಫೀಚರ್‌ಗಳು ಮತ್ತು ಸುಧಾರಿತ ಮೈಲೇಜ್‌ನೊಂದಿಗೆ ಬರಲಿದೆ. ಈಗ ಸ್ಪೋರ್ಟಿ ಮತ್ತು ಸ್ಟೈಲಿಶ್ ಸ್ಕೂಟರ್ ಆಗಿ ತನ್ನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಹೋಂಡಾ ಕಂಪನಿಯು ಡಿಯೋದ ಐಕಾನಿಕ್ ವಿನ್ಯಾಸವನ್ನು ಉಳಿಸಿಕೊಂಡಿದ್ದು, ರೋಮಾಂಚಕ ಹೊಸ ಗ್ರಾಫಿಕ್ಸ್ ಮತ್ತು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ನವೀಕರಿಸಿದೆ. ಜೊತೆಗೆ ಇಕೋ ಇಂಡಿಕೇಟರ್, ಮೈಲೇಜ್, ಟ್ರಿಪ್ ಮೀಟರ್, ರೇಂಜ್‌ಗಳಂತಹ ನೈಜ-ಸಮಯದ ಡೇಟಾದೊಂದಿಗೆ ಹೊಸ 4.2-ಇಂಚಿನ ಟಿಎಪ್‌ಟಿ ಡಿಸ್ಪ್ಲೇ ಹೊಸ ಸ್ಕೂಟರ್‌ನಲ್ಲಿ ಪ್ರಮುಖ ಸೇರ್ಪಡೆಗಳಾಗಿವೆ.

ಹೊಸ 2025 ರ ಡಿಯೋ 125 ಸ್ಕೂಟರ್ ಅನ್ನು ಭಾರತದಾದ್ಯಂತದ ಹೋಂಡಾ ಡೀಲರ್ ಶಿಪ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ಸ್ಪೋರ್ಟ್ಸ್ ಯೆಲ್ಲೋ, ಎಂಬ ಐದು ಬಣ್ಣಗಳಲ್ಲಿ ಗ್ರಾಹಕರು ಸ್ಕೂಟರ್ ಖರೀದಿಸಬಹುದು.
ಹೊಸ ಮಾದರಿಯು ಹೋಂಡಾ ರೋಡ್ ಸಿಂಕ್ ಅಪ್ಲಿಕೇಶನ್ ನೊಂದಿಗೆ ಹೊಂದಿಕೆಯಾಗುತ್ತದೆ. ಕಾಲ್ / ಮೆಸೇಜ್ ನೋಟಿಫಿಕೇಷನ್‌ಗಳು ಮತ್ತು ನ್ಯಾವಿಗೇಷನ್ ಸಹ ನೀಡಲಾಗಿದೆ. ಹೊಸ ಡಿಯೋ 125 ಸ್ಕೂಟರ್ 6.11 ಕಿಲೋವ್ಯಾಟ್ ಮತ್ತು 10.5 ಎನ್ಎಂ ಟಾರ್ಕ್ ಹೊರಹಾಕುವ 123.92 ಸಿಸಿ ಸಿಂಗಲ್ ಸಿಲಿಂಡರ್ ಪಿಜಿಎಂ-ಫೈ ಎಂಜಿನ್ ಹೊಂದಿದೆ.

ಇದರ ಜೊತೆಗೆ ಸ್ಮಾರ್ಟ್ ಕೀ, ಯುಎಸ್‌ಬಿ ಟೈಪ್-ಸಿ ಚಾರ್ಜರ್ ಮತ್ತು ಎಂಜಿನ್ ಸ್ಟಾರ್ಟ್ / ಸ್ಟಾಪ್ ಸಿಸ್ಟಮ್ ನಂತಹ ವೈಶಿಷ್ಟ್ಯಗಳು ಅನುಕೂಲತೆ ಮತ್ತು ಪರ್ಫಾಮೆನ್ಸ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದು ಉತ್ತಮ ಇಂಧನ ಮಿತವ್ಯಯಕ್ಕಾಗಿ ಐಡ್ಲಿಂಗ್ ಸ್ಟಾಪ್ ಸಿಸ್ಟಮ್ ಸಹ ಹೊಂದಿದೆ.
ಕಳೆದ 21 ವರ್ಷಗಳಿಂದ ಡಿಯೋ ಭಾರತೀಯ ಮಾರುಕಟ್ಟೆಯಲ್ಲಿ ಅಪ್ರತಿಮ ಹೆಸರು, ಡಿಸೈನ್, ಪರ್ಫಾಮೆನ್ಸ್ ಮತ್ತು ನಂಬಿಕೆಯ ಸಂಕೇತವಾಗಿ ನಿಂತಿದೆ. ಟ್ರೆಂಡಿ ಮತ್ತು ವಿಶ್ವಾಸಾರ್ಹ ಮೋಟೋ - ಸ್ಕೂಟರ್ ಅನ್ನು ಹುಡುಕುತ್ತಿರುವ ಗ್ರಾಹಕರಿಗೆ ಇದು ನಿರಂತರವಾಗಿ ಮೊದಲ ಆಯ್ಕೆಯಾಗಿದೆ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಸುಟ್ಸುಮು ಒಟಾನಿ ಹೇಳಿದರು.

ಹೊಸ ಒಬಿಡಿ 2 ಬಿ ಡಿಯೋ 125 ಬಿಡುಗಡೆಯೊಂದಿಗೆ, ಮೋಟೋ - ಸ್ಕೂಟರ್ ನ ಪ್ರಮುಖ ಪರಿಕಲ್ಪನೆಯನ್ನು ಹಾಗೆಯೇ ಉಳಿಸಿಕೊಂಡು, ನಮ್ಮ ಗ್ರಾಹಕರಿಗೆ ಹೆಚ್ಚುವರಿ ಮೌಲ್ಯ ಮತ್ತು ಉತ್ಸಾಹದೊಂದಿಗೆ ಅದರ ಅಪ್ರತಿಮ ಪರಂಪರೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಅಧ್ಯಕ್ಷ ಮತ್ತು ಸಿಇಒ ಸುಟ್ಸುಮು ಒಟಾನಿ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








