2025ರ ಟಿವಿಎಸ್ ಐಕ್ಯೂಬ್ S ಮತ್ತು ಐಕ್ಯೂಬ್ ST ಬಿಡುಗಡೆ: ಹೊಸ ಬೆಲೆ, ಅಧಿಕ ರೇಂಜ್!

2025ರ ಟಿವಿಎಸ್ ಐಕ್ಯೂಬ್ ಎಸ್ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್‌ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಬೆಲೆಗಳು ಈಗ 1.09 ಲಕ್ಷ ರೂ. (ಎಕ್ಸ್‌ಶೋರೂಂ) ಗಳಿಂದ ಪ್ರಾರಂಭವಾಗಿ 1.59 ಲಕ್ಷ ರೂ. (ಎಕ್ಸ್‌ಶೋರೂಂ) ವರೆಗೆ ಇದೆ. ಈಗಾಗಲೇ ಮಾರಾಟದಲ್ಲಿರುವ ಐಕ್ಯೂಬ್ ಮಾದರಿಗಳಿಗೆ ಹೋಲಿಸಿಕೊಂರೆ ಹೊಸ ಫೀಚರ್ಸ್ ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಈ ಸ್ಕೂಟರ್‌ಗಳು ಬಿಡುಗಡೆಯಾಗಿವೆ. ಈ ಮೂಲಕ ಹೊಸ ಸ್ಕೂಟರ್‌ಗಳು ಸಿಂಗಲ್‌ ಚಾರ್ಜ್‌ನಲ್ಲಿ ಹೆಚ್ಚಿನ ರೇಂಜ್ ನೀಡಲಿವೆ. ಐಕ್ಯೂಬ್ ಎಸ್ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ಟಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಮೊದಲೇ ಹೇಳಿದಂತೆ ಈ ಬಾರಿ ಕಂಪನಿಯು ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್ಚಿನ ರೇಂಜ್ ನೀಡಲು ಸ್ವಲ್ಪ ದೊಡ್ಡ ಬ್ಯಾಟರಿ ಪ್ಯಾಕ್ ನೀಡಿರುವುದರಿಂದ ಟಿವಿಎಸ್ ಐಕ್ಯೂಬ್ ಎಸ್ ಸ್ಕೂಟರ್ ಈ ಹಿಂದೆ ಇದ್ದ 3.3 ಕಿಲೋವ್ಯಾಟ್ ನಿಂದ 3.5 ಕಿಲೋವ್ಯಾಟ್ ಇರುವ ಬ್ಯಾಟರಿ ಪ್ಯಾಕ್ ಪಡೆದಿದೆ. ಈ ಮೂಲಕ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 145 ಕಿ.ಮೀ ರೇಂಜ್ ನೀಡಲಿದೆ.

new-2025-tvs-iqube-st-and-iqube-s-launched

ಮತ್ತೊಂದೆಡೆ, ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾದರಿಯು ತನ್ನ ಬ್ಯಾಟರಿ ಸಾಮರ್ಥ್ಯದಲ್ಲಿ ಈ ಹಿಂದೆ ಇದ್ದ 5.1 ಕಿಲೋವ್ಯಾಟ್ ಬ್ಯಾಟರಿಯಿಂದ ಈಗ 5.3 ಕಿಲೋವ್ಯಾಟ್ ಬ್ಯಾಟರಿಯನ್ನು ಪಡೆದುಕೊಂಡಿದೆ. ಈ ಮೂಲಕ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 212 ಕಿ.ಮೀ ವರೆಗೆ ರೇಂಜ್ ನೀಡುವುದಾಗಿ ಕಂಪನಿ ಹೇಳಿದೆ.

ನವೀಕರಿಸಿದ ಐಕ್ಯೂಬ್ ಎಸ್‌ನ ಬೆಲೆಗಳು ವೇರಿಯೆಂಟ್ ಅನ್ನು ಆಧರಿಸಿ ಬದಲಾಗುತ್ತವೆ. 5 ಇಂಚಿನ ಕಲರ್ ಟಿಎಫ್‌ಟಿ ಡಿಸ್ಪ್ಲೇ ಹೊಂದಿರುವ ವೇರಿಯೆಂಟ್ 1.09 ಲಕ್ಷ ರೂ. (ಎಕ್ಸ್ ಶೋರೂಂ) ಗಳಿಂದ ಪ್ರಾರಂಭವಾಗುತ್ತದೆ. 7 ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಹೊಂದಿರುವ ವೇರಿಯೆಂಟ್ ಬೆಲೆಯು 1.17 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.

new-2025-tvs-iqube-st-and-iqube-s-launched

ನವೀಕರಿಸಿದ ಟಿವಿಎಸ್ ಐಕ್ಯೂಬ್ ಎಸ್‌ಟಿ 3.5 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಸ್ಕೂಟರ್ ಬೆಲೆಯು 1.28 ಲಕ್ಷ ರೂ. (ಎಕ್ಸ್ ಶೋರೂಂ) ಇದೆ. 5.3 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ ಬೆಲೆ 1.59 ಲಕ್ಷ ರೂ. ಇದೆ. ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದರಗಳು ಎಂಬುದನ್ನು ಗಮನಿಸಬೇಕು.

ದೊಡ್ಡ ಬ್ಯಾಟರಿಯ ಹೊರತಾಗಿ, ಟಿವಿಎಸ್ ಐಕ್ಯೂಬ್ ಎಸ್‌ಟಿ ಬೀಜ್ ಬಣ್ಣದ ಒಳ ಪ್ಯಾನೆಲ್ ಗಳು, ಡ್ಯುಯಲ್ ಟೋನ್ ಸೀಟ್, ಅಚ್ಚುಕಟ್ಟಾಗಿ ಸಂಯೋಜಿಸಿದ ಪಿಲಿಯನ್ ಬ್ಯಾಕ್ ರೆಸ್ಟ್ ಸೇರಿದಂತೆ ಡಿಸೈನ್ ವಿಷಯದಲ್ಲಿ ಕೆಲ ಬದಲಾವಣೆಗಳನ್ನು ಸಹ ಮಾಡಲಾಗಿದೆ. ಕಂಪನಿಯ ಪ್ರಕಾರ ಬೆಲೆಗಳಿಗೆ ತಕ್ಕಂತೆ ಸ್ಕೂಟರ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

new-2025-tvs-iqube-st-and-iqube-s-launched

ಪ್ರತಿ ಬಾರಿಯಂತೆ ಕಂಪನಿಯ ಟಾಪ್ - ಸ್ಪೆಕ್ ಟಿವಿಎಸ್ ಐಕ್ಯೂಬ್ ಸಹ ಉತ್ತಮವಾಗಿ ಸಜ್ಜುಗೊಂಡಿದೆ. ಇದು ಟಚ್ ಸ್ಕ್ರೀನ್ ಟಿಎಫ್‌ಟಿ ಡಿಸ್ ಪ್ಲೇ, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಹೊಸ ಸ್ಕೂಟರ್‌ಗಳ ಮಾಹಿತಿಗಾಗಿ ಹತ್ತಿರದ ಶೋರೂಂಗೆ ಭೇಟಿ ನೀಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 15, 2025, 17:34 [IST]
English summary
New 2025 tvs iqube st and iqube s launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+