Ather: ಖರ್ಚಿಲ್ಲದೆ ನಿತ್ಯ 159 ಕಿ.ಮೀ ಓಡುವ ಹೊಸ ಸ್ಕೂಟರ್: ರಿವರ್ಸ್ ಗೇರ್ ಕೂಡ ಲಭ್ಯ!

ಎಥರ್ ಎನರ್ಜಿ (Ather energy) ಹೊಸ 3.7kWh ಬ್ಯಾಟರಿ ಪ್ಯಾಕ್‌ನೊಂದಿಗೆ ತನ್ನ ರಿಜ್ಟಾ S ಫ್ಯಾಮಿಲಿ ಸ್ಕೂಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ್ದು, ಉತ್ತಮ ಪ್ರಿತಿಕ್ರಿಯೆ ವ್ಯಕ್ತವಾಗಿದೆ. ಇದರ ಬೆಲೆಯು ರೂ. 1.37 ಲಕ್ಷ (ಎಕ್ಸ್-ಶೋರೂಂ) ವಿದೆ. ಈ ವೇರಿಯೆಂಟ್ ಅನ್ನು ಉನ್ನತ-ಮಟ್ಟದ Z ವೇರಿಯೆಂಟ್ ಆಯ್ಕೆ ಮಾಡದೆ ದೀರ್ಘ ರೇಂಜ್ ಬಯಸುವವರು ಖರೀದಿಸಬಹುದಾಗಿದೆ. ಈ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಒಮ್ಮೆ ಚಾರ್ಜ್ ಮಾಡಿದರೆ 159 ಕಿ.ಮೀ IDC-ಪ್ರಮಾಣೀಕೃತ ರೇಂಜ್ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

ಹೊಸ 3.7kWh ಬ್ಯಾಟರಿ ಪ್ಯಾಕ್ ಹೊಂದಿರುವ ಎಥರ್ 'ರಿಜ್ಟಾ ಎಸ್' ಸ್ಕೂಟರ್ ದೆಹಲಿಯಲ್ಲಿ 137,047 (ಎಕ್ಸ್-ಶೋರೂಂ), ಮುಂಬೈನಲ್ಲಿ ರೂ 137,258 (ಎಕ್ಸ್-ಶೋರೂಂ), ಬೆಂಗಳೂರಿನಲ್ಲಿ ರೂ. 137,999 (ಎಕ್ಸ್-ಶೋರೂಂ) ಮತ್ತು ಚೆನ್ನೈನಲ್ಲಿ ರೂ. 139,312 (ಎಕ್ಸ್-ಶೋರೂಂ) ದರದಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.

new-ather-rizta-s-price-features-battery-details

ಆದರೆ ರಿಯಲ್ ವರ್ಲ್ಡ್ ರೇಂಜ್ ಸುಮಾರು 125 ಕಿ.ಮೀ ಇರಬಹುದು. ಪ್ರಮಾಣಿತ ಐದು ವರ್ಷ/60,000 ಕಿ.ಮೀ ಬ್ಯಾಟರಿ ವಾರೆಂಟಿ, 'ಎಥರ್ ಎಯಿಟ್70' ಪ್ರೋಗ್ರಾಂನೊಂದಿಗೆ ಎಂಟು ವರ್ಷ/80,000 ಕಿ.ಮೀ ವರೆಗೆ ವಾರೆಂಟಿಯನ್ನು ವಿಸ್ತರಿಸಬಹುದು. ಈ ಸ್ಕೂಟರ್ 80 ಕಿ.ಮೀ/ಗಂಟೆಗೆ ಗರಿಷ್ಠ ವೇಗ, ಸ್ಮಾರ್ಟ್ ಇಕೋ ಮತ್ತು ಜಿಪ್ ಸೇರಿದಂತೆ ರೈಡಿಂಗ್ ಮೋಡ್‌ಗಳೊಂದಿಗೆ ಬರುತ್ತದೆ.

ದೊಡ್ಡ 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಜೊತೆಗೆ ಹೆಚ್ಚುವರಿ ಸ್ಥಳಾವಕಾಶಕ್ಕಾಗಿ ಐಚ್ಛಿಕ 22-ಲೀಟರ್ ಮುಂಭಾಗದ ಫ್ರಂಕ್ ಒದಗಿಸಲಾಗಿದೆ. ಬ್ಲೂಟೂತ್ ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಆಟೋ ಹೋಲ್ಡ್, ಫಾಲ್ ಸೇಫ್, ತುರ್ತು ನಿಲುಗಡೆ ಸಿಗ್ನಲ್, ಟೋ ಮತ್ತು ಕಳ್ಳತನದ ಎಚ್ಚರಿಕೆಗಳು, ರಿವರ್ಸ್ ಮೋಡ್ ಮತ್ತು 7-ಇಂಚಿನ LCD ಕನ್ಸೋಲ್ ನೀಡಲಾಗಿದೆ.

new-ather-rizta-s-price-features-battery-details

ಇವಿಷ್ಟೆ ಅಲ್ಲದೆ ಹೊಸ ವೇರಿಯೆಂಟ್ OTA ಅಪ್‌ಡೇಟ್‌ಗಳನ್ನು ಸಹ ಪಡೆಯುತ್ತದೆ. ಈ ಸ್ಕೂಟರ್ ಎಥರ್‌ನ ಸಮಗ್ರ ವೇಗದ ಚಾರ್ಜಿಂಗ್ ನೆಟ್‌ವರ್ಕ್, ಎಥರ್ ಗ್ರಿಡ್‌ಗೆ ಸಪೋರ್ಟ್ ಮಾಡುತ್ತದೆ. ಮನೆ ಚಾರ್ಜಿಂಗ್‌ಗಾಗಿ, ಈ ವೇರಿಯೆಂಟ್ ಎಥರ್‌ನ ಪರಿಣಾಮಕಾರಿ ಚಾರ್ಜಿಂಗ್ ಪರಿಹಾರವನ್ನು ಒಳಗೊಂಡಿದೆ, ದೈನಂದಿನ ಬಳಕೆಗೆ ಅನುಕೂಲಕರವಾದ ರಾತ್ರಿಯ ಚಾರ್ಜಿಂಗ್ ಅನ್ನು ಖಚಿತಪಡಿಸುತ್ತದೆ.

ನಗರ ಪ್ರಯಾಣಿಕರು ಮತ್ತು ಕುಟುಂಬಗಳಿಗೆ ರೇಜ್, ಫೀಚರ್ಸ್ ಮತ್ತು ಮೌಲ್ಯದ ಬಲವಾದ ಸಮತೋಲನವನ್ನು ನೀಡುತ್ತದೆ. ವಿಶಾಲವಾದ ಆಸನದೊಂದಿಗೆ ಪ್ರಯಾಣಿಕರಿಗೆ ಸೌಕರ್ಯ ಮತ್ತು ಪ್ರಾಯೋಗಿಕತೆಯ ಮೇಲೆ ಕೇಂದ್ರೀಕರಿಸಿ ಈ ವಾಹನವನ್ನು ನಿರ್ಮಿಸಿರುವುದಾಗಿ ಕಂಪನಿ ಹೇಳಿದೆ. ಭಾರತದಾದ್ಯಂತ ಆನ್‌ಲೈನ್ ಮತ್ತು ಶೋರೂಮ್‌ಗಳಲ್ಲಿ ಬುಕಿಂಗ್‌ಗಳು ತೆರೆದಿವೆ, ಉತ್ಪಾದನೆ ಹೆಚ್ಚಾದಂತೆ ಈ ತಿಂಗಳು ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.

new-ather-rizta-s-price-features-battery-details

ಹೊಸದಾಗಿ ಪರಿಚಯಿಸಲಾದ ರಿಜ್ಟಾ 3.7kWh ವೇರಿಯೆಂಟ್, ರೇಂಜ್ ಮತ್ತು ಕೈಗೆಟುಕುವಿಕೆಯ ವಿಷಯದಲ್ಲಿ ಕುಟುಂಬಗಳಿಗೆ ಬೆಸ್ಟ್ ಆಯ್ಕೆಯಾಗಿ ನಿಲ್ಲಲಿದೆ. ಈ ಬಿಡುಗಡೆಯೊಂದಿಗೆ, ರಿಜ್ಟಾ ಲೈನ್‌ಅಪ್ ಈಗ ನಾಲ್ಕು ವೇರಿಯೆಂಟ್‌ಗಳನ್ನು ಹೊಂದಿದೆ. ಇದು EV ವಿಭಾಗದಲ್ಲಿ ಅತ್ಯಂತ ಅನುಕೂಲಕರ, ಸ್ಮಾರ್ಟ್ ಮತ್ತು ಸುರಕ್ಷಿತ ಸ್ಕೂಟರ್‌ಗಳಲ್ಲಿ ಒಂದಾಗಿ ಗುರ್ತಿಸಿಕೊಳ್ಳಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಸ್ಕೂಟರ್‌ನ್ನು ದೈನಂದಿನ ಬಳಕೆಯ ಸುಲಭತೆ ಮತ್ತು ಸುರಕ್ಷತೆಯ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ. ಇದನ್ನು 2024 ರಲ್ಲಿ ಫ್ಯಾಮಿಲಿ ಸ್ಕೂಟರ್ ಆಗಿ ಬಿಡುಗಡೆ ಮಾಡಲಾಯಿತು. ರಿಜ್ಟಾ ಈಗ ಎಥರ್‌ನ ಒಟ್ಟು ಮಾರಾಟದಲ್ಲಿ ಶೇ 60 ಕ್ಕಿಂತ ಹೆಚ್ಚು ಮಾರಾಟದ ಪಾಲನ್ನು ಹೊಂದಿದೆ. ಬಿಡುಗಡೆಯಾದ ಒಂದು ವರ್ಷದೊಳಗೆ 1ಲಕ್ಷ ಯುನಿಟ್‌ ವಾಹನಗಳನ್ನು ದಾಟಿರುವುದು ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

More from DriveSpark

Article Published On: Sunday, July 6, 2025, 10:20 [IST]
English summary
New ather rizta s price features battery details
Read more on ather energy india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+