ಹೊಸ ಎಲೆಕ್ಟ್ರಿಕ್ ಆಕ್ಟೀವಾ ರಿವ್ಯೂ ವಿಡಿಯೋ: ಸಂಪೂರ್ಣ ಕನ್ನಡ ವಿವರಣೆ
ಹೋಂಡಾ ಕಂಪನಿಯು ತನ್ನ ಬಹುನಿರೀಕ್ಷಿತ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಆಕ್ಟಿವಾ-ಇ ಅನ್ನು ಕೊನೆಗೂ ಬಿಡುಗಡೆ ಮಾಡಿದೆ. ಈ ಸ್ಕೂಟರ್ ದೆಹಲಿ, ಮುಂಬೈ ಮತ್ತು ಬೆಂಗಳೂರಿನ ಬೀದಿಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ನಂತರ, ನಾವು ಉದ್ಯಾನ ನಗರಿ ಬೆಂಗಳೂರಿನ ಬೀದಿಗಳಲ್ಲಿ ಹೊಸ ಎಲೆಕ್ಟ್ರಿಕ್ ಆಕ್ಟಿವಾವನ್ನು ಸವಾರಿ ಮಾಡಿದ್ದೇವೆ. ಹೋಂಡಾ ಆಕ್ಟಿವಾ-ಇ ಡಿಸೈನ್ ನೋಡಿದರೆ ಸ್ವಲ್ಪ ಆಕ್ಟಿವಾದಂತೆ ಕಾಣುತ್ತದೆ, ಅದರ ನಯವಾದ ಬಾಡಿ ಪ್ಯಾನೆಲ್‌ಗಳು ಆಕ್ಟೀವಾದ ಫ್ಯೂಚರಿಸ್ಟಿಕ್ ಡಿಸೈನ್‌ನಂತೆ ಕಾಣುತ್ತದೆ. ಹೊಸ ಹೋಂಡಾ ಆಕ್ಟಿವಾ-ಇ ಸ್ಕೂಟರ್ ಓಡಿಸಿದ ಬಳಿಕ ಅದರ ಸಂಪೂರ್ಣ ರಿವ್ಯೂ ವಿಡಿಯೋವನ್ನು ಇಲ್ಲಿ ನೀಡಿದ್ದೇವೆ.
ಆಕ್ಟಿವಾ ಇ ತನ್ನ ಇಂಧನ ಚಾಲಿತ ಆಕ್ಟೀವಾಗೆ ಹೋಲಿಸಿದರೆ ಉತ್ತಮವಾಗಿಯೇ ಇದೆ. ಇದು ಸ್ಟ್ಯಾಂಡರ್ಡ್ ರೈಡಿಂಗ್ ಮೋಡ್‌ನಲ್ಲಿ ಸುಗಮ ಸವಾರಿ ಅನುಭವವನ್ನು ನೀಡುತ್ತದೆ. ಸ್ಪೋರ್ಟ್ ಮೋಡ್‌ನಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆಯಾದರೂ, ಬ್ಯಾಟರಿಗಳು ಬೇಗನೆ ಖಾಲಿ ಆಗುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿ.

ಬೆಂಗಳೂರಿನಲ್ಲಿ ಎಲ್ಲಾ ಮೋಡ್‌ಗಳ ಮಿಶ್ರ ಬಳಕೆಯಲ್ಲಿ (ಮೂರು ವಿಧಾನಗಳಲ್ಲಿ ಸವಾರಿ ಮಾಡಿದಾಗ), ಆಕ್ಟಿವಾ-ಇ ಬ್ಯಾಟರಿ ಪ್ಯಾಕ್‌ಗಳು ಬೇಗನೆ ಖಾಲಿಯಾಗುತ್ತವೆ. ಹಾಗಾಗಿ ಪ್ರತಿ 70 ರಿಂದ 75 ಕಿ.ಮೀ ಒಡಿಸಿದ ಬಳಿಕ ಸ್ವಾಪ್ ಪಾಯಿಂಟ್‌ಗಳನ್ನು ತಲುಪಲು ನಾವು ಸೂಚಿಸುತ್ತೇವೆ. ವಿನಿಮಯ ಪ್ರಕ್ರಿಯೆಯು ಯಾವುದೇ ತೊಂದರೆಯಿಲ್ಲದೆ ಇದ್ದರೂ, ಬ್ಯಾಟರಿ ಪ್ಯಾಕ್‌ಗಳು ಸುಮಾರು 10-15 ಕಿಲೋಗ್ರಾಂಗಳಷ್ಟು ತೂಗುತ್ತವೆ.
ಆಕ್ಟಿವಾ-ಇ ಸೀಟು ಸಾಕಷ್ಟು ಆರಾಮದಾಯಕವಾಗಿದ್ದು, ಹಿಂಭಾಗದಲ್ಲಿರುವ ವ್ಯಕ್ತಿಗೆ ಹೆಚ್ಚುವರಿ ಲಗೇಜ್ ಇದ್ದರೂ ಸಹ ಇಬ್ಬರು ಸುಲಭವಾಗಿ ಸ್ಕೂಟರ್ ಸವಾರಿ ಮಾಡಲು ಸಿಟ್ ಅನುವು ಮಾಡಿಕೊಡುವಷ್ಟು ಉದ್ದವಾಗಿದೆ. ಸೀಟು ಸಾಕಷ್ಟು ಕಡಿಮೆ ಎತ್ತರ ಇರುವುದರಿಂದ ಸಾಮಾನ್ಯ ಭಾರತೀಯ ಸವಾರನು ತಮ್ಮ ಪಾದಗಳನ್ನು ನೆಲದ ಮೇಲೆ ಸುಲಭವಾಗಿ ಇಡಲು ಅನುವು ಮಾಡಿಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








