Kinetic E-Luna: ಹಳ್ಳಿ & ಸಿಟಿಗೂ ಸೈ.. ಶೀಘ್ರ ಹೊಸ ರೂಪದಲ್ಲಿ ಕೈನೆಟಿಕ್ ಇ-ಲೂನಾ ಬಿಡುಗಡೆ.. 200 ಕಿ.ಮೀ ರೇಂಜ್?

ದೇಶದಲ್ಲಿ ದಶಕಗಳ ಹಿಂದೆ 'ಕೈನೆಟಿಕ್ ಲೂನಾ' ಸಾಮಾನ್ಯ ವರ್ಗದ ಜನರ ಮೆಚ್ಚಿನ ದ್ವಿಚಕ್ರ ವಾಹನವಾಗಿತ್ತು. ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಈ ಸ್ಕೂಟರ್‌ನ್ನು ಎಲೆಕ್ಟ್ರಿಕ್ ಅವತಾರದಲ್ಲಿಯೂ ಮಾರಾಟಕ್ಕೆ ತರಲಾಗಿತ್ತು. ಇದು ಹೆಚ್ಚು ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ದೊರೆಯಲಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ, ಕೈನೆಟಿಕ್ ಗ್ರೀನ್ (Kinetic Green) ಕಂಪನಿಯು ಈ ಮೊಪೆಡ್‍ನ್ನು ನವೀಕರಿಸಲು ಮುಂದಾಗಿದ್ದು, ಅತಿ ಶೀಘ್ರದಲ್ಲಿಯೇ ಹೊಸ ರೂಪದಲ್ಲಿ ಬಿಡುಗಡೆಗೊಳಿಸಲು ಸಿದ್ದತೆಯನ್ನು ನಡೆಸುತ್ತಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೈನೆಟಿಕ್ ಗ್ರೀನ್, ಹೊಚ್ಚ ಹೊಸ 'ಇ-ಲೂನಾ' ಎಲೆಕ್ಟ್ರಿಕ್ ಮೊಪೆಡ್‍ ವಿನ್ಯಾಸಕ್ಕಾಗಿ ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ಪೇಟೆಂಟ್‌ನ್ನು ಸಲ್ಲಿಸಿದೆ. ಆ ಪೇಟೆಂಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕೂಡ ಸೋರಿಕೆಯಾಗಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈಗಿರುವ ಇ-ಲೂನಾದಂತೆಯೇ ಕಾಣುತ್ತದೆ. ಆದರೆ, ಹೆಚ್ಚುವರಿಯಾಗಿ ರೈಡರ್ ಸೀಟ್ & ಹ್ಯಾಂಡಲ್‌ಬಾರ್ ಮಧ್ಯೆ ದೊಡ್ಡ ಗಾತ್ರದ ಬಾಕ್ಸ್ ಇರುವುದನ್ನು ಗುರುತಿಸಬಹುದು. ಇದು ಈ ಮೊಪೆಡ್‍ನ ಬ್ಯಾಟರಿ ಪ್ಯಾಕ್ ಆಗಿರಲಿದೆ ಎನ್ನಲಾಗಿದೆ.

New Kinetic E Luna moped design patented huge range details

ನೂತನ ಕೈನೆಟಿಕ್ ಇ-ಲೂನಾ (Kinetic E-Luna) ಮೊಪೆಡ್ ಬೃಹದಾಕಾರದ ಬ್ಯಾಟರಿ ಪ್ಯಾಕ್ ಹೊಂದಿರುವ ನೀರಿಕ್ಷೆಯಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 200 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಬಹುದು ಎಂದು ಅಂದಾಜಿಸಲಾಗಿದೆ. ಇದು ಮಾತ್ರವಲ್ಲದೆ, ತೆಗೆದು ಮತ್ತೆ ಹಾಕಬಹುದಾದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿರುವ ಸಾಧ್ಯತೆಯೂ ಹೆಚ್ಚಿದೆ.

ಪ್ರಸ್ತುತ ಖರೀದಿಗೆ ಲಭ್ಯವಿರುವ ಕೈನೆಟಿಕ್ ಇ-ಲೂನಾ ವಿಶೇಷತೆಗಳೇನು: ಈ ಮೊಪೆಡ್ ಎಕ್ಸ್2 (X2) ಮತ್ತು ಎಕ್ಸ್3 (X3) ಎರಡು ರೂಪದಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಎಕ್ಸ್2 ಮಾಡೆಲ್, ರೂ.69,990 ಎಕ್ಸ್-ಶೋರೂಂ ದರವನ್ನು ಪಡೆದಿದೆ. 2 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 110 ಕಿಲೋಮೀಟರ್ ಓಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

New Kinetic E Luna moped design patented huge range details

ಹೊಸ ಎಕ್ಸ್3 ಮಾಡೆಲ್, ರೂ.72,490 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. 2.3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 120 ಕಿಲೋಮೀಟರ್ ಕ್ರಮಿಸುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರ ಬ್ಯಾಟರಿಯೂ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಿ ಬಿಡುತ್ತದೆ.

ಹೊಸ ಕೈನೆಟಿಕ್ ಇ-ಲೂನಾ ಮಾಡೆಲ್‌ಗಳೆರೆಡು ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೈಡ್ ಸ್ಟ್ಯಾಂಡ್ ಸೆನ್ಸರ್ ಬ್ಯಾಗ್ ಹುಕ್‌, ಸ್ಯಾರಿ ಗಾರ್ಡ್ ಮತ್ತು ಸೇಫ್ಟಿ ಲಾಕ್ ಸೇರಿದಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಆಯ್ಕೆಯನ್ನು ಪಡೆದಿವೆ. ಓಷನ್ ಬ್ಲೂ, ಪರ್ಲ್ ಯೆಲ್ಲೋ, ಸ್ಪಾರ್ಕ್ಲಿಂಗ್ ಗ್ರೀನ್ ಹಾಗೂ ನೈಟ್ ಸ್ಟಾರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಇನ್ನು, ನೂತನ ಕೈನೆಟಿಕ್ ಇ-ಲೂನಾ ಮೊಪೆಡ್ ಬಿಡುಗಡೆಯಾಗುತ್ತಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡು ಮಾರಾಟಕ್ಕೂ ಬರಬಹುದು ಎನ್ನಲಾಗಿದೆ. ಈ ಮೊಪೆಡ್ ಅತಿ ಕಡಿಮೆಗೂ ಖರೀದಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಕೆಲವೇ ದಿನಗಳಲ್ಲಿ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, March 31, 2025, 11:25 [IST]
English summary
New kinetic e luna moped design patented huge range details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+