Bajaj: ಕೇವಲ 1.8 ಲಕ್ಷಕ್ಕೆ ಹೊಸ ಸ್ಪೋರ್ಟಿ ಬಜಾಜ್ ಬೈಕ್ ಬಿಡುಗಡೆ: ಧೂಳೆಬ್ಬಿಸುವುದು ಪಕ್ಕಾ!

ಭಾರತದ ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ, ತನ್ನ ಹೊಚ್ಚ ಹೊಸ 2025 ಪಲ್ಸರ್ RS200 ಅನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ಅನ್ನು ಮೊದಲಿಗೆ 2015 ರಲ್ಲಿ ಬಿಡುಗಡೆ ಮಾಡಲಾಗಿತ್ತು, ಪಲ್ಸರ್ ಸಿರೀಸ್‌ನಲ್ಲಿ ತನಗೆಂದೇ ಪ್ರತ್ಯೇಕ ಅಭಿಮಾನಿಗಳನ್ನು ಪಡೆದ ಈ ಬೈಕ್ ಇದೀಗ ಆಕರ್ಷಕ ಲುಕ್‌ ಹಾಗೂ ಹೊಸ ಅಪ್‌ಡೇಟ್‌ಗಳನ್ನು ಪಡೆದು ಬಿಡುಗಡೆಯಾಗಿದೆ. ಪಲ್ಸರ್ ಅಭಿಮಾನಿಗಳಿಂದ ಹೆಚ್ಚು ನಿರೀಕ್ಷಿತ ಅಪ್‌ಗ್ರೇಡ್‌ಗಳಲ್ಲಿ ಒಂದಾಗಿರುವ ಈ ಬೈಕ್, ಕಂಪನಿಗೆ ಮತ್ತೊಂದು ಮೈಲಿಗಲ್ಲನ್ನು ಸೂಚಿಸುತ್ತದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಹೊಸ ಪಲ್ಸರ್ RS200 ಮೋಟಾರ್‌ಸೈಕಲ್ ಈಗ ಮತ್ತಷ್ಟು ಸ್ಪೋರ್ಟಿಯಾಗಿರುವುದರಿಂದ ಬೆಲೆ ಕೂಡ ತುಸು ಹೆಚ್ಚಾಗಿದೆ. ಅಂದಹಾಗೆ ಹೊಚ್ಚ ಹೊಸ ಪಲ್ಸರ್ ಆರ್ಎಸ್ 200 ಬೆಲೆಯು 1,84,115 (ಎಕ್ಸ್‌ಶೋರೂಂ) ಇದೆ. ಹಾಗೆಯೇ ಗ್ಲಾಸಿ ರೇಸಿಂಗ್ ರೆಡ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ಆಕ್ಟಿವ್ ಸ್ಯಾಟಿನ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

new-pulsar-rs200-2025-model-upgrade-launched

1. 200cc ಶ್ರೇಣಿಯಲ್ಲಿ ಅತ್ಯುತ್ತಮ ಎಂಜಿನ್: ಹೊಸ ಪಲ್ಸರ್ RS200 ಮೋಟಾರ್‌ಸೈಕಲ್ ಫ್ಯೂಯಲ್-ಇಂಜೆಕ್ಟೆಡ್, ಸಿಂಗಲ್-ಸ್ಪಾರ್ಕ್, 4-ವಾಲ್ವ್ 199.5cc BSVI ಎಂಜಿನ್‌ ಹೊಂದಿದೆ. ಪ್ರಭಾವಶಾಲಿ 24.5 PS ಪವರ್ ಮತ್ತು 18.7 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದಲ್ಲದೆ, ಸುಧಾರಿತ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ತೀವ್ರ ಪರಿಸ್ಥಿತಿಗಳಲ್ಲಿಯೂ ಸಹ ಸ್ಥಿರವಾದ ಪರ್ಫಾಮೆನ್ಸ್ ಖಚಿತಪಡಿಸುತ್ತದೆ ಎಂದು ಬಜಾಜ್ ಹೇಳಿದೆ.

2. ಹೊಸ ವಿನ್ಯಾಸ ಮತ್ತು ಗ್ರಾಫಿಕ್ಸ್: ಹೊಸ ಪಲ್ಸರ್ RS200 ಮೋಟಾರ್‌ಸೈಕಲ್‌ನ ತೀಕ್ಷ್ಣವಾದ ವಿನ್ಯಾಸ, ಆಕ್ರಮಣಕಾರಿ ಮುಂಭಾಗದ ಪ್ರೊಫೈಲ್, ಸಂಯೋಜಿತ LED ಟೈಲ್ ಲ್ಯಾಂಪ್‌ಗಳು ಮತ್ತು ನೇಕೆಡ್ ಹಿಂಭಾಗದ ವಿಭಾಗದೊಂದಿಗೆ RS200 ಬೀದಿಗಳಲ್ಲಿ ಎಲ್ಲರ ಗಮನ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಂಪನಿ ಭರವಸೆ ನೀಡಿದೆ.

new-pulsar-rs200-2025-model-upgrade-launched

3. ಉನ್ನತ ನಿರ್ವಹಣೆ: ಡ್ಯುಯಲ್ - ಚಾನೆಲ್ ABS, ಹೊಸ ಅಗಲವಾದ ಟೈರ್‌ಗಳು (140/70-17 ಹಿಂಭಾಗ ಮತ್ತು 110/70-17 ಮುಂಭಾಗ), ಮತ್ತು ಕಸ್ಟಮೈಸ್ ಮಾಡಬಹುದಾದ ರೋಡ್, ರೈನ್ ಮತ್ತು ಆಫ್‌ರೋಡ್ ಎಂಬ ರೈಡ್ ಮೋಡ್‌ಗಳನ್ನು ಹೊಂದಿದೆ. ಜೊತೆಗೆ RS200 ಅಸಾಧಾರಣ ಗ್ರಿಪ್, ಬ್ರೇಕಿಂಗ್ ಮತ್ತು ವಿವಿಧ ಭೂಪ್ರದೇಶಗಳಲ್ಲಿ ಸುರಕ್ಷತೆಯನ್ನು ನೀಡುತ್ತದೆ.

4. ಸಂಪರ್ಕಿತ ಕನ್ಸೋಲ್: ಹೊಸ ಪಲ್ಸರ್ RS200 ಮೋಟಾರ್‌ಸೈಕಲ್‌ನಲ್ಲಿ ಬ್ಲೂಟೂತ್ - ಸಕ್ರಿಯಗೊಳಿಸಿದ ಬಂಧಿತ ಗಾಜಿನ (Bluetooth - enabled bonded glass) LCD ಪ್ಯಾನಲ್ ಹೊಂದಿದ್ದು, ಇದು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ ಮತ್ತು SMS ಎಚ್ಚರಿಕೆಗಳು, ಗೇರ್ ಇಂಡಿಕೇಟರ್ ಸೇರಿದಂತೆ ಹೆಚ್ಚಿನ ವಿವರಗಳನ್ನು ತೋರಿಸುತ್ತದೆ.

new-pulsar-rs200-2025-model-upgrade-launched

5. ಹೊಸ ಮುಂಭಾಗ ಮತ್ತು ಹಿಂಭಾಗದ ಲೈಟ್‌ಗಳು: ಅತ್ಯಾಧುನಿಕ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಹಗಲಿನ ವೇಳೆಯಲ್ಲಿ ಚಾಲನೆಯಲ್ಲಿರುವ LED ಗಳು, ಹೆಚ್ಚುವರಿ ಸುರಕ್ಷತೆಗಾಗಿ ವರ್ಧಿತ ಗೋಚರತೆ ಮತ್ತು ಏಕರೂಪದ ಬೆಳಕನ್ನು ನೀಡುತ್ತವೆ. ಹೊಸದಾಗಿ ವಿನ್ಯಾಸಗೊಳಿಸಲಾದ ಸಂಯೋಜಿತ ಹಿಂಭಾಗದ ಟೈಲ್‌ಲ್ಯಾಂಪ್ ಹೊಸ RS200 ಗೆ ಭವ್ಯವಾದ ಹಿಂಭಾಗದ ನೋಟ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

6. ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್: ಸುಗಮ ಗೇರ್ ಶಿಫ್ಟ್‌ಗಳು ಮತ್ತು ಉತ್ತಮ ನಿಯಂತ್ರಣವು ಡೈನಾಮಿಕ್ ರೈಡಿಂಗ್ ಅನುಭವವನ್ನು ಹೆಚ್ಚಿಸಲು ಹೊಸ ಪಲ್ಸರ್ RS200 ಮೋಟಾರ್‌ಸೈಕಲ್‌ನಲ್ಲಿ ಈಗ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ನೀಡಲಾಗಿದೆ. ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾದ ಈ ಮೋಟಾರ್‌ಸೈಕಲ್‌ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Thursday, January 9, 2025, 18:29 [IST]
English summary
New pulsar rs200 2025 model upgrade launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+