Royal Enfield: ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 650 ಕುರಿತ ಪ್ರಮುಖಾಂಶಗಳು.. ಯಾರು ಹೇಳಲ್ಲ!
ಅಂತರರಾಷ್ಟ್ರೀಯ ಮಟ್ಟದ ದ್ವಿಚಕ್ರ ವಾಹನ ಪ್ರದರ್ಶನ EICMA-2025ರಲ್ಲಿ ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 650 (Royal Enfield Bullet 650) ಬೈಕ್‌ನ್ನು ಅನಾವರಣಗೊಳಿಸಲಾಗಿತ್ತು. ವಿಶೇಷವಾಗಿ ಮೋಟಾರ್‌ಸೈಕಲ್‌ನ್ನು ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಅದಕ್ಕೆ ತಕ್ಕಂತೆ ಹೆಚ್ಚು ಅತ್ಯಾಧುನಿಕವಾಗಿದ್ದು, ಸಖತ್ ಸ್ಟೈಲಿಶ್ ಆಗಿದೆ. ನಾವಿಲ್ಲಿ ಈ ಬೈಕ್‌ನ ನಿರೀಕ್ಷಿತ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ (Price)
ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುವ ಎಲ್ಲ ಸಾಧ್ಯತೆಗಳಿವೆ. ರೂ.3.40 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿಯೂ ಹೆಚ್ಚು - ಕಮ್ಮಿ ಈ ತಿಂಗಳೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ, ಈ ಬಗ್ಗೆ ಕಂಪನಿ ಕಡೆಯಿಂದ ಯಾವುದೇ ಖಚಿತ ವಿವರಗಳು ಲಭ್ಯವಾಗಿಲ್ಲ.

ವಿನ್ಯಾಸ ಬಣ್ಣಗಳು (Design & Colors):
ನೂತನ 'ರಾಯಲ್ ಎನ್‌ಫೀಲ್ಡ್ ಬುಲೆಟ್ 650' ಬೈಕ್, ಸಾಕಷ್ಟು ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಅದು 'ರಾಯಲ್ ಎನ್‌ಫೀಲ್ಡ್ ಬುಲೆಟ್ 350'ಗೂ ಹೋಲಿಕೆಯಾಗುತ್ತದೆ. ಅತ್ಯುತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಟರ್ನ್ ಸಿಗ್ನಲ್ ಲ್ಯಾಂಪ್ ಮತ್ತು ಸಿಂಗಲ್ - ಪೀಸ್ ಸೀಟ್‌ನ್ನು ಒಳಗೊಂಡಿದೆ. ಜೊತೆಗಿದು ಕ್ಯಾನನ್ ಬ್ಲ್ಯಾಕ್ ಮತ್ತು ಬ್ಯಾಟಲ್‌ಶಿಪ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.
ಸುತ್ತಳತೆ (Dimensions):
ಈ ಮೋಟಾರ್‌ಸೈಕಲ್ ಬಲು ದೊಡ್ಡ ಗಾತ್ರದಲ್ಲಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. 2,318 ಎಂಎಂ ಉದ್ದ, 892 ಎಂಎಂ ಅಗಲ ಮತ್ತು 1,137 ಎಂಎಂ ಎತ್ತರವಿದೆ. 154 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,475 ಎಎಂ ವೀಲ್‌ಬೇಸ್‌ನ್ನು ಹೊಂದಿದೆ. ಬರೋಬ್ಬರಿ 243 ಕೆಜಿ ತೂಕವಿದೆ.
ಕಾರ್ಯಕ್ಷಮತೆ (Performance):
ಇದು ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 648 ಸಿಸಿ ಏರ್/ ಆಯಿಲ್ ಕೂಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 47 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 52 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 14.8 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 30 ಕಿ.ಮೀ ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ವೈಶಿಷ್ಟ್ಯಗಳು (Features):
ಹೊಸ 'ಬುಲೆಟ್' ಬೈಕ್ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಚಾರ್ಜಿಂಗ್ ಪೋರ್ಟ್ ಹಾಗೂ ಎಲೆಕ್ಟ್ರಿಕ್ ಸ್ಟಾರ್ಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಗಟ್ಟಿಮುಟ್ಟಾದ ಟೈರ್‌ಗಳನ್ನು ತನ್ನದಾಗಿಸಿಕೊಂಡಿದೆ. 140 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿರುವ ನಿರೀಕ್ಷೆಯಿದೆ. ಅದೇ ರೀತಿಯಲ್ಲಿ ಕೇವಲ 12 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಬಹುದು ಎನ್ನಲಾಗಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ಈ ಮೋಟಾರ್‌ಸೈಕಲ್ ಸವಾರರ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಟ್ವಿನ್ - ಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಪ್ರತಿಸ್ಪರ್ಧಿ ಬೈಕ್‌ಗಳು (Rival Bikes):
ನೂತನ 'ರಾಯಲ್ ಎನ್‌ಫೀಲ್ಡ್ ಬುಲೆಟ್ 650' ಸಾಲು - ಸಾಲು ಎದುರಾಳಿಗಲಿವೆ. ವಿಶೇಷವಾಗಿ ಕವಾಸಕಿ ಜಡ್650 (Kawasaki Z650), ಹೋಂಡಾ ರೆಬೆಲ್ 500 (Honda Rebel 500), ಬೆನೆಲ್ಲಿ 502ಸಿ (Benelli 502C), ಜಾವಾ ಪೆರಾಕ್ (Jawa Perak) ಹಾಗೂ ಬಜಾಜ್ ಅವೆಂಜರ್ ಕ್ರೂಸ್ 220 (Bajaj Avenger Cruise 220) ಮೋಟಾರ್‌ಸೈಕಲ್‌ಗಳು ಪ್ರಬಲವಾಗಿ ಸ್ಪರ್ಧೆಯೊಡ್ಡಲಿವೆ.


Click it and Unblock the Notifications








