ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಮುಖ್ಯಾಂಶಗಳು
ಟಿವಿಎಸ್ ಕಂಪನಿಯು ತನ್ನ ಜನಪ್ರಿಯ ಮಾದರಿಯಾದ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಅಂದಹಾಗೆ ಆರ್‌ಟಿಆರ್ ಸಿರೀಸ್ ಕಂಪನಿಯ ಜನಪ್ರಿಯ ಮಾದರಿಗಳನ್ನು ಹೊಂದಿದ್ದು, ಈ ಸಿರೀಸ್ ಭಾರತದಲ್ಲಿ ಲಗ್ಗೆಯಿಟ್ಟು 20 ವರ್ಷಗಳಾಗಿದೆ. ಇದನ್ನು ಆಚರಿಸಿಕೊಳ್ಳುವ ಸಲುವಾಗಿ ಅಪಾಚೆ ಆರ್‌ಟಿಆರ್ 200 4ವಿ ಬೈಕನ್ನು ಆಕರ್ಷಕ ಗ್ರಾಫಿಕ್ಸ್, ನೂತನ ಫೀಚರ್ಸ್ ಹಾಗೂ ಹೊಸ ಎಮಿಷನ್ ಮಾನದಂಡಗಳೊಂದಿಗೆ ಪರಿಚಯಿಸಲಾಗಿದೆ. ಈ ಬೈಕ್‌ನ ಟಾಪ್ 3 ಮುಖ್ಯಾಂಶಗಳನ್ನು ಇಲ್ಲಿ ನೋಡೋಣ.
ಆರ್‌ಟಿಆರ್ ಸರಣಿಯಲ್ಲಿ ಈ ಎಂಜಿನ್ ಒಂದು ಪ್ರಮುಖ ಅಂಶವಾಗಿದ್ದು, ನವೀಕರಿಸಿದ ಮಾದರಿಯೊಂದಿಗೆ ಒಬಿಡಿ -2 ಬಿ ಕಾಂಪ್ಲೈಂಟ್ ಮಾಡಿ ಬದಲಾಯಿಸಲಾಗಿದೆ. ಈ ಬೈಕಿನಲ್ಲಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಸ್ಪರ್ಧೆಯ ವಿಷಯದಲ್ಲಿ ಬಜಾಜ್, ಹೋಂಡಾ, ಹೀರೋ ಮೋಟೊಕಾರ್ಪ್ ಮತ್ತು ಕೆಟಿಎಂನ ಹಲವು ಬೈಕ್‌ಗಳು ಪೈಪೋಟಿ ನೀಡುತ್ತವೆ.

ಹೊಸ ಆರ್‌ಟಿಆರ್ 200 4ವಿ ಬೈಕಿನಲ್ಲಿ ಅದೇ ಚಾಸಿಸ್ ಅನ್ನು ಮುಂದುವರೆಸಲಾಗಿದ್ದು, ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಉಳಿದಂತೆ 2025ರ ಅಪ್‌ಡೇಟ್ ನೊಂದಿಗೆ ಟಿವಿಎಸ್ ಕಂಪನಿಯು ಅಪಾಚೆ ಬೈಕ್ ಅನ್ನು ಗ್ಲಾಸಿ ಬ್ಲ್ಯಾಕ್, ಮ್ಯಾಟ್ ಬ್ಲ್ಯಾಕ್ ಮತ್ತು ಗ್ರಾನೈಟ್ ಗ್ರೇ ಎಂಬ ಮೂರು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸಿರುವುದು ವಿಶೇಷವಾಗಿದೆ.
ವಿನ್ಯಾಸದ ಬಗ್ಗೆ ಹೇಳುವುದಾದರೆ, ಆರ್ ಟಿಆರ್ 200 4ವಿ ತನ್ನ ಅದೇ ತೀಕ್ಷ್ಣವಾದ ಮತ್ತು ಸ್ಪೋರ್ಟಿ ವಿನ್ಯಾಸದೊಂದಿಗೆ ಮಸ್ಕುಲರ್ ಫ್ಯೂಲ್ ಟ್ಯಾಂಕ್, ಚೂಪಾದ ಟ್ಯಾಂಕ್ ಕವರ್ ಗಳು ಮತ್ತು ಸೈಡ್ - ಮೌಂಟೆಡ್ ಎಕ್ಸಾಸ್ಟ್ ನೊಂದಿಗೆ ಹೊಸ ಗ್ರಾಫಿಕ್ಸ್ ಡಿಸೈನ್‌ನೊಂದಿಗೆ ಎಂಟ್ರಿ ಕೊಟ್ಟಿದೆ.
ಹೊಸ ಆರ್‌ಟಿಆರ್ 200 4ವಿ ಬೈಕ್ ಸ್ಲಿಪ್ಪರ್ ಕ್ಲಚ್, ಅಡ್ಜಸ್ಟ್ ಮಾಡಬಹುದಾದ ಬ್ರೇಕ್ ಮತ್ತು ಕ್ಲಚ್ ಲಿವರ್‌ಗಳು ಮತ್ತು ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಡ್ಯುಯಲ್ ಚಾನೆಲ್ ಎಬಿಎಸ್, ಅರ್ಬನ್, ಸ್ಪೋರ್ಟ್ ಮತ್ತು ರೈನ್ ಎಂಬ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ.
2025ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಫ್ರಂಟ್ ಸಸ್ಪೆಂಷನ್ ವಿಷಯದಲ್ಲಿ ದೊಡ್ಡ ಅಪ್ ಡೇಟ್ ಮಾಡಲಾಗಿದೆ. ಹಿಂಭಾಗದಲ್ಲಿ ಮೊನೊಶಾಕ್ ಆಗಿ ಮುಂದುವರಿದರೆ, ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ. ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಅಳವಡಿಸಲಾಗಿದೆ.
ಹೊಸ ಅಪಾಚೆ ಹೈಡ್ರೋಫಾರ್ಮ್ಡ್ ಹ್ಯಾಂಡಲ್ ಬಾರ್ ಅನ್ನು ಸಹ ಪಡೆಯುತ್ತದೆ. ಇವು ಬೈಕ್‌ಗೆ ತನ್ನ ಹಳೆಯ ಮಾಡಲ್‌ಗಿಂತ ಭಿನ್ನವಾಗಿ ಹೊಸ ಅಪ್‌ಡೇಟ್‌ಗಳೊಂದಿಗೆ ಹೆಚ್ಚು ಆಕರ್ಷಕವಾಗಿಸಿವೆ. ಇನ್ನು ಪರ್ಫಾಮೆನ್ಸ್ ನಲ್ಲಿ ಈ ಬೈಕ್ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಹೊಸ 2025ರ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








