TVS: 150 Km ರೇಂಜ್.. ಸದ್ದಿಲ್ಲದೇ ಟಿವಿಎಸ್‌ನಿಂದ ಹೊಸ ಇ-ಸ್ಕೂಟರ್ ಬಿಡುಗಡೆಗೆ ಸಿದ್ಧತೆ, ಯಾವುದು.. ವಿಶೇಷತೆಗಳೇನು?

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಟಿವಿಎಸ್ ಮೋಟಾರ್ (TVS Motor), ಐಕ್ಯೂಬ್ (iQube) ಸ್ಕೂಟರ್ ಮಾರಾಟದೊಂದಿಗೆ ಹೆಚ್ಚಿನ ಪ್ರಾಬಲ್ಯ ಸಾಧಿಸುತ್ತಿದೆ. ಆದರೆ, ಅಂತರರಾಷ್ಟ್ರೀಯವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಇನ್ನೂ ಸಾಧ್ಯವಾಗಿಲ್ಲ. ಅದರ ಭಾಗವಾಗಿ, ಕಂಪನಿಯು ಇಂಡೋನೇಷ್ಯಾದಲ್ಲಿ 'ಎಂ1-ಎಸ್' ಹೆಸರಿನ ಹೊಚ್ಚ ಹೊಸ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಳುತ್ತಿದೆ. ನೂತನ ಸ್ಕೂಟರ್ ಸಂಬಂಧ ಟಿವಿಎಸ್‌ನ ಇಂಡೋನೇಷ್ಯಾ ವೆಬ್‌ಸೈಟ್‌ನಲ್ಲಿ ಟೀಸರ್‌ವೊಂದನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ ಟಿವಿಎಸ್ ಎಂ1-ಎಸ್ (TVS M1-S) ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ವಿಭಿನ್ನವಾದ ಪ್ಲಾಟ್‌ಫಾರ್ಮ್‌ನಡಿ ತಯಾರಿಸಲಾಗಿದೆ. ಟ್ವಿನ್ ಹೆಡ್‌ಲೈಟ್‌ಗಳು ಐಬ್ರೋ ಸ್ಟೈಲ್ ಎಲ್‌ಇಡಿ ಡಿಆರ್‌ಎಲ್‌ಗಳು, ಫ್ಲಾಟ್ ಫ್ಲೋರ್‌ಬೋರ್ಡ್, ರೇರ್ ಗ್ರಾಬ್ ರೈಲ್ ಹಾಲ್ ಹಾಗೂ ಸಿಂಗಲ್ ಪೀಸ್ ಸೀಟ್‌ನ್ನು ಪಡೆದಿದೆ.

New TVS M1-S Maxi Electric Scooter Teased Launch Soon 150 Km Range Details

ಈ ನೂತನ ಎಂ1-ಎಸ್ ಸ್ಕೂಟರ್ ಹೆಚ್ಚು ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 4.3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಹೀಗಾಗಿ, ದೂರದ ಪ್ರದೇಶಗಳಿಗೆ ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗಲಿದೆ.

ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಸ್ಕೂಟರ್, 16.76 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 45 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 105 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 3.7 ಸೆಕೆಂಡುಗಳಲ್ಲಿ 0 ರಿಂದ 50 ಕೆಎಂಪಿಹೆಚ್ ವೇಗವನ್ನು ಪಡೆದಿದೆ.

ಹೊಸ ಟಿವಿಎಸ್ ಎಂ1-ಎಸ್ ಎಲೆಕ್ಟ್ರಿಕ್ ಸ್ಕೂಟರ್, 7-ಇಂಚಿರುವ ಟಿಎಫ್‌ಟಿ ಸ್ಕ್ರೀನ್‌ನ್ನು ಹೊಂದಿದೆ. ಇದು ಮ್ಯೂಸಿಕ್ ಕಂಟ್ರೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಎಸ್ಎಂಎಸ್ & ಕಾಲ್ ಅಲರ್ಟ್‌ನ್ನು ಬೆಂಬಲಿಸುತ್ತದೆ. ಹಾಗೆಯೇ ರಿವರ್ಸ್ ಮೋಡ್, ಸ್ಮಾರ್ಟ್ ಕೀ ಹಾಗೂ 26-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಪ್ರಿ-ಲೋಡ್ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಬಿಎಸ್ (ಕಾಂಬಿ ಬ್ರೇಕಿಗ್ ಸಿಸ್ಟಮ್‌) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಇದು ವಿಶಾಲ ಗಾತ್ರದ ಮ್ಯಾಕ್ಸಿ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. 1,960 ಎಂಎಂ ಉದ್ದ ಹಾಗೂ 730 ಎಂಎಂ ಅಗಲವಿದೆ. ಆಸನ ಎತ್ತರ (ಸೀಟ್ ಹೈಟ್) 765 ಎಂಎಂ ಇದೆ. ಜೊತೆಗೆ 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,350 ವೀಲ್‌ಬೇಸ್‌ನ್ನು ಪಡೆದಿದೆ. ಸರಿ ಸುಮಾರು 152 ಕೆಜಿ ತೂಕವಿದೆ.

ಹೊಸ ಟಿವಿಎಸ್ ಎಂ1-ಎಸ್ ಎಲೆಕ್ಟ್ರಿಕ್ ಸ್ಕೂಟರ್, ಮೊದಲಿಗೆ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳ್ಳಲಿದೆ. ಸದ್ಯಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವುದಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಮುಂಬರುವ ತಿಂಗಗಳಲ್ಲಿ ಭಾರತದಲ್ಲೂ ಈ ಸ್ಕೂಟರ್‌ನ್ನು ಪರಿಚಯ ಮಾಡಬಹುದು ಎಂಬ ಆಶಾಭಾವ ಗ್ರಾಹಕರಲ್ಲಿದೆ.

ದೇಶೀಯವಾಗಿ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೇಗಿದೆ:

ಈ 2025ರ ಜುಲೈ ತಿಂಗಳು ಟಿವಿಎಸ್ ಮೋಟಾರ್ ಒಟ್ಟು 23,605 ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿದೆ. ಇದರೊಂದಿಗೆ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 10% ಪ್ರಗತಿಯಾಗಿದೆ. 2024 ಇದೇ ಅವಧಿಯಲ್ಲಿ 21,442 ಯುನಿಟ್‌ಗಳನ್ನು ಮಾರಲಾಗಿತ್ತು. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಂಪನಿಯು ಬೆಳವಣಿಗೆ ಸಾಧಿಸಲು 'ಐಕ್ಯೂಬ್' ಎಲೆಕ್ಟ್ರಿಕ್ ಸ್ಕೂಟರ್ ಪ್ರಮುಖವಾದ ಕಾರಣವಾಗಿದೆ.

More from DriveSpark

Article Published On: Friday, August 8, 2025, 11:39 [IST]
English summary
New tvs m1 s maxi electric scooter teased launch soon 150 km range details
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+