ಮೊನ್ನೆಯಷ್ಟೆ ಬಿಡುಗಡೆ: 2025ರ ಟಿವಿಎಸ್ ಐಕ್ಯೂಬ್ S ಮತ್ತು ಐಕ್ಯೂಬ್ ST ವಿಶೇಷತೆಗಳು!
2025ರ ಟಿವಿಎಸ್ ಐಕ್ಯೂಬ್ ಎಸ್ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್‌ಗಳನ್ನು 15 ಮೇ 2025 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬಾರಿ ಕಂಪನಿಯು ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್ಚಿನ ರೇಂಜ್ ನೀಡಲು ಸ್ವಲ್ಪ ದೊಡ್ಡ ಬ್ಯಾಟರಿ ಪ್ಯಾಕ್ ನೀಡಿರುವುದರಿಂದ ಟಿವಿಎಸ್ ಐಕ್ಯೂಬ್ ಮಾದರಿಗಳು ಈ ಹಿಂದೆ ಇರುವುದಕ್ಕಿಂತ ಹೆಚ್ಚಿನ ರೇಂಜ್ ನೀಡಲಿವೆ. ದೊಡ್ಡ ಬ್ಯಾಟರಿಯ ಹೊರತಾಗಿ, ಟಿವಿಎಸ್ ಐಕ್ಯೂಬ್ ಎಸ್‌ಟಿ ಹೊಸ ಹೆಚ್ಚುವರಿ ಫೀಚರ್ಸ್ ಕೂಡ ಪಡೆದುಕೊಂಡಿದೆ. ಹೆಚ್ಚುವರಿ ವಿಶೇಷತೆಗಳನ್ನು ಇಲ್ಲಿ ನೋಡೋಣ.
ಬೆಲೆಗಳು ಈಗ 1.09 ಲಕ್ಷ ರೂ. (ಎಕ್ಸ್‌ಶೋರೂಂ) ಗಳಿಂದ ಪ್ರಾರಂಭವಾಗಿ 1.59 ಲಕ್ಷ ರೂ. (ಎಕ್ಸ್‌ಶೋರೂಂ) ವರೆಗೆ ಇದೆ. ನವೀಕರಿಸಿದ ಐಕ್ಯೂಬ್ ಎಸ್‌ನ ಬೆಲೆಗಳು ವೇರಿಯೆಂಟ್ ಅನ್ನು ಆಧರಿಸಿ ಬದಲಾಗುತ್ತವೆ. 5 ಇಂಚಿನ ಕಲರ್ ಟಿಎಫ್‌ಟಿ ಡಿಸ್ಪ್ಲೇ ಹೊಂದಿರುವ ವೇರಿಯೆಂಟ್ 1.09 ಲಕ್ಷ ರೂ. (ಎಕ್ಸ್ ಶೋರೂಂ) ಗಳಿಂದ ಪ್ರಾರಂಭವಾಗುತ್ತದೆ. 7 ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಹೊಂದಿರುವ ವೇರಿಯೆಂಟ್ ಬೆಲೆಯು 1.17 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.

ಈ ಬಾರಿ ಕಂಪನಿಯು ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್ಚಿನ ರೇಂಜ್ ನೀಡಲು ಸ್ವಲ್ಪ ದೊಡ್ಡ ಬ್ಯಾಟರಿ ಪ್ಯಾಕ್ ನೀಡಿರುವುದರಿಂದ ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾದರಿಯು ತನ್ನ ಬ್ಯಾಟರಿ ಸಾಮರ್ಥ್ಯದಲ್ಲಿ ಈ ಹಿಂದೆ ಇದ್ದ 5.1 ಕಿಲೋವ್ಯಾಟ್ ಬ್ಯಾಟರಿಯಿಂದ ಈಗ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 212 ಕಿ.ಮೀ ವರೆಗೆ ರೇಂಜ್ ನೀಡುವ 5.3 ಕಿಲೋವ್ಯಾಟ್ ಬ್ಯಾಟರಿಯನ್ನು ಪಡೆದುಕೊಂಡಿದೆ.
ಮತ್ತೊಂದೆಡೆ, ಟಿವಿಎಸ್ ಐಕ್ಯೂಬ್ ಎಸ್ ಸ್ಕೂಟರ್ ಈ ಹಿಂದೆ ಇದ್ದ 3.3 ಕಿಲೋವ್ಯಾಟ್ ನಿಂದ ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 145 ಕಿ.ಮೀ ರೇಂಜ್ ನೀಡುವ 3.5 ಕಿಲೋವ್ಯಾಟ್ ಇರುವ ಬ್ಯಾಟರಿ ಪ್ಯಾಕ್ ಪಡೆದಿದೆ. ನವೀಕರಿಸಿದ ಟಿವಿಎಸ್ ಐಕ್ಯೂಬ್ ಎಸ್‌ಟಿ 3.5 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಸ್ಕೂಟರ್ ಬೆಲೆಯು 1.28 ಲಕ್ಷ ರೂ. (ಎಕ್ಸ್ ಶೋರೂಂ) ಇದೆ.

5.3 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಸ್ಕೂಟರ್ ಬೆಲೆ 1.59 ಲಕ್ಷ ರೂ. ಇದೆ. ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದರಗಳು ಎಂಬುದನ್ನು ಗಮನಿಸಬೇಕು. ದೊಡ್ಡ ಬ್ಯಾಟರಿಯ ಹೊರತಾಗಿ, ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್ ಡ್ಯುಯಲ್ ಟೋನ್ ಸೀಟ್, ಬೀಜ್ ಬಣ್ಣದ ಒಳ ಪ್ಯಾನೆಲ್‌ಗಳು, ಅಚ್ಚುಕಟ್ಟಾಗಿ ಸಂಯೋಜಿಸಿದ ಪಿಲಿಯನ್ ಬ್ಯಾಕ್ ರೆಸ್ಟ್ ಸೇರಿದಂತೆ ಡಿಸೈನ್ ವಿಷಯದಲ್ಲಿ ಕೆಲ ಬದಲಾವಣೆಗಳನ್ನು ಸಹ ಮಾಡಲಾಗಿದೆ.
ಪ್ರತಿ ಬಾರಿಯಂತೆ ಕಂಪನಿಯ ಟಾಪ್ - ಸ್ಪೆಕ್ ಟಿವಿಎಸ್ ಐಕ್ಯೂಬ್ ಸಹ ಉತ್ತಮವಾಗಿ ಸಜ್ಜುಗೊಂಡಿದೆ. ಇದು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಸೇರಿದಂತೆ ಟಚ್ ಸ್ಕ್ರೀನ್ ಟಿಎಫ್‌ಟಿ ಡಿಸ್ ಪ್ಲೇ, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್‌ನಂತಹ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಈಗಾಗಲೇ ಮಾರಾಟದಲ್ಲಿರುವ ಐಕ್ಯೂಬ್ ಮಾದರಿಗಳಿಗೆ ಹೋಲಿಸಿಕೊಂರೆ ಹೊಸ ಫೀಚರ್ಸ್ ಹಾಗೂ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಈ ಸ್ಕೂಟರ್‌ಗಳು ಬಿಡುಗಡೆಯಾಗಿವೆ. ಈ ಮೂಲಕ ಹೊಸ ಸ್ಕೂಟರ್‌ಗಳು ಸಿಂಗಲ್ ಚಾರ್ಜ್‌ನಲ್ಲಿ ಹೆಚ್ಚಿನ ರೇಂಜ್ ನೀಡಲಿವೆ. ಹೊಸ ಸ್ಕೂಟರ್‌ಗಳ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶೋರೂಂಗೆ ಭೇಟಿ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








