Kinetik DX EV: 80ರ ದಶಕದ ಐಕಾನಿಕ್ ಕೈನೆಟಿಕ್ ಫ್ಯಾಮಿಲಿ ಸ್ಕೂಟರ್ ಬಿಡುಗಡೆ: ವಿಶೇಷತೆಗಳೇನು?

ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ (Kinetik DX EV) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, 1980 ಮತ್ತು 1990 ರ ದಶಕದ ಐಕಾನಿಕ್ ಕೈನೆಟಿಕ್ ಡಿಎಕ್ಸ್‌ನ ಪರಂಪರೆಯನ್ನು ಮುಂದುವರಿಸಲು ಆಧುನಿಕ ಎಲೆಕ್ಟ್ರಿಕ್ ಅವತಾರದಲ್ಲಿ ಮತ್ತೆ ಬಿಡುಗಡೆ ಮಾಡಲಾಗಿದೆ. ಹೊಸ ಸ್ಕೂಟರ್ ನಗರ ಪ್ರಯಾಣಿಕರು ಮತ್ತು ಫ್ಯಾಮಿಲಿಗಳನ್ನು ಗುರಿಯಾಗಿರಿಸಿಕೊಂಡಿದ್ದು, ರೆಟ್ರೊ ವಿನ್ಯಾಸ ಅಂಶಗಳನ್ನು ಸಮಕಾಲೀನ ಎಲೆಕ್ಟ್ರಿಕ್ ತಂತ್ರಜ್ಞಾನ ಮತ್ತು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸುತ್ತದೆ. ಈ ಹೊಸ ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖ ವಿವರಗಳು ಇಲ್ಲಿವೆ.

ಕೈನೆಟಿಕ್ ಎಂಜಿನಿಯರಿಂಗ್ ಲಿಮಿಟೆಡ್ ತನ್ನ ಮೀಸಲಾದ ಇವಿ ಉತ್ಪಾದನಾ ಅಂಗಸಂಸ್ಥೆಯಾದ ಕೈನೆಟಿಕ್ ವ್ಯಾಟ್ಸ್ ಮತ್ತು ವೋಲ್ಟ್ಸ್ ಲಿಮಿಟೆಡ್ (ಕೆಡಬ್ಲ್ಯೂವಿ) ಮೂಲಕ ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಡಿಎಕ್ಸ್ ಹಾಗು ಡಿಎಕ್ಸ್+ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಪರಿಚಯಿಸಲಾಗಿದ್ದು, ಡಿಎಕ್ಸ್ ಬೆಲೆ ರೂ. 1,11,499 (ಎಕ್ಸ್-ಶೋರೂಂ) ಮತ್ತು ಡಿಎಕ್ಸ್+ ರೂ. 1,17,499 (ಎಕ್ಸ್-ಶೋರೂಂ) ಇದೆ.

newly-launched-kinetic-dx-electric-scooter-top-things

ಬುಕಿಂಗ್‌ಗಳು ಪ್ರಾರಂಭವಾಗಿದ್ದು, ಡೆಲಿವರಿಗಳು ಸೆಪ್ಟೆಂಬರ್ 2025 ರಲ್ಲಿ ಪ್ರಾರಂಭವಾಗುತ್ತವೆ. ಇದರ ಡಿಸೈನ್ ವಿಷಯಕ್ಕೆ ಬಂದರೆ ಮೂಲ ಕೈನೆಟಿಕ್ ಡಿಎಕ್ಸ್ ಅನ್ನು ನೆನಪಿಸುವ ರೆಟ್ರೊ - ಪ್ರೇರಿತ ಆಲ್ - ಮೆಟಲ್ ಬಾಡಿನಲ್ಲಿ ನಿರ್ಮಿಸಲಾಗಿದೆ. ರೆಡ್, ಬ್ಲೂ, ಬ್ಲಾಕ್, ಗ್ರೇ ಮತ್ತು ವೈಟ್ ಎಂಬ 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಆಧುನಿಕ ಎಲ್ಇಡಿ ಲೈಟಿಂಗ್, ಬೆಳಗುವ ಕೈನೆಟಿಕ್ ಬ್ಯಾಡ್ಜ್ ಮತ್ತು 12-ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ಪರ್ಫಾಮೆನ್ಸ್ ಮತ್ತು ಬ್ಯಾಟರಿ ವಿಷಯಕ್ಕೆ ಬಂದರೆ, DX+ 4.8 kW ಮೋಟಾರ್ ಹೊಂದಿದ್ದರೆ, DX 4.7 kW ಮೋಟಾರ್ ಹೊಂದಿದೆ. ಹಾಗೆಯೇ 2.5 kWh (IP67 ರೇಟಿಂಗ್) ಬ್ಯಾಟರಿ ಅಳವಡಿಸಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ 102 ಕಿಮೀ (DX) ಹಾಗೂ, 116 ಕಿಮೀ (DX+) ರೇಂಜ್ ನೀಡುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.

newly-launched-kinetic-dx-electric-scooter-top-things

ಕೈನೆಟಿಕ್ ಡಿಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ವೇಗವು 80 ಕಿ.ಮೀ/ಗಂ (DX), 90 ಕಿಮೀ/ಗಂ (DX+) ಇದೆ. ವೇಗದ ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿದ್ದು, 2 ಗಂಟೆಗಳಲ್ಲಿ ಶೇ 50% ರಷ್ಟು ಹಾಗೂ 4 ಗಂಟೆಗಳಲ್ಲಿ ಶೇ 100 ರಷ್ಟು ಜಾರ್ಜ್ ಆಗುತ್ತದೆ. ರೇಂಜ್, ಪವರ್ ಮತ್ತು ಟರ್ಬೊ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ವಿವಿಧ ಟೆಲಿಮ್ಯಾಟಿಕ್ಸ್ ವೈಶಿಷ್ಟ್ಯಗಳೊಂದಿಗೆ (ಜಿಯೋ-ಫೆನ್ಸಿಂಗ್, ಇನ್ಟ್ರೂಡರ್ ಅಲರ್ಟ್, ಫೈಂಡ್ ಮೈ ವೆಹಿಕಲ್, ಇತ್ಯಾದಿ - DX+ ಟ್ರಿಮ್‌ನಲ್ಲಿ) 8.8-ಇಂಚಿನ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗದೆ. ಹಾಗೆಯೇ ಕೀಲೆಸ್ ಇಗ್ನಿಷನ್, ಕ್ರೂಸ್ ಕಂಟ್ರೋಲ್, ರಿವರ್ಸ್ ಮೋಡ್, ರೀಜೆನ್ ಬ್ರೇಕಿಂಗ್, ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಆಟೋ-ಓಪನಿಂಗ್ ಫುಟ್‌ಪೆಗ್‌ಗಳು ಇವೆ.

newly-launched-kinetic-dx-electric-scooter-top-things

ಬೃಹತ್ 37 - ಲೀಟರ್ ಅಂಡರ್ ಸೀಟ್ ಸ್ಟೋರೇಜ್, USB ಚಾರ್ಜಿಂಗ್ ಪೋರ್ಟ್, ಆನ್‌ಬೋರ್ಡ್ ಸ್ಪೀಕರ್‌ಗಳ ಮೂಲಕ ಸಂಗೀತ ಮತ್ತು ನ್ಯಾವಿಗೇಷನ್ ಕಂಟ್ರೋಲ್‌ಗಳು (DX+), ಮುಂಭಾಗದ ಡಿಸ್ಕ್, ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ (CBS) ಜೊತೆಗೆ ಹಿಂಭಾಗದ ಡ್ರಮ್ ಬ್ರೇಕ್‌ಗಳನ್ನು ಈ ಸ್ಕೂಟರ್‌ನಲ್ಲಿ ನೀಡಲಾಗಿದೆ.

ಸ್ಕೂಟರ್ ಮೇಲೆ 3-ವರ್ಷ ಅಥವಾ 30,000 ಕಿ.ಮೀ ಪ್ರಮಾಣಿತ ವಾರೆಂಟಿ, 9 ವರ್ಷಗಳು ಅಥವಾ 100,000 ಕಿ.ಮೀ ವರೆಗೆ ಇದನ್ನು ವಿಸ್ತರಿಸಬಹುದು. ಟಿವಿಎಸ್ ಐಕ್ಯೂಬ್, ಬಜಾಜ್ ಚೇತಕ್, ಅಥರ್ ರಿಜ್ತಾ ಮತ್ತು ಓಲಾ S1 ಕುಟುಂಬದಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ. ಕೈನೆಟಿಕ್ ಅಸ್ಕೂಟರ್ ದೃಢವಾದ ಪರ್ಫಾಮೆನ್ಸ, ಸಾಕಷ್ಟು ವೈಶಿಷ್ಟ್ಯಗಳು ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಯಾವ ಮಟ್ಟಿಗೆ ಜನರನ್ನು ಆಕರ್ಷಿಸಲಿದೆ ಕಾದುನೋಡಬೇಕಿದೆ.

More from DriveSpark

Article Published On: Tuesday, July 29, 2025, 12:17 [IST]
English summary
Newly launched kinetic dx electric scooter top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+