ಹೊಸದಾಗಿ ಬಿಡುಗಡೆಯಾಗಿದೆ ಖರ್ಚಿಲ್ಲದೆ ನಿತ್ಯ 89 ಕಿ.ಮೀ ಓಡುವ ಸ್ಕೂಟರ್: ಕೇವಲ 42 ಸಾವಿರ ಬೆಲೆ

ಮುಂಬೈ ಮೂಲದ ಇವಿ ತಯಾರಕ ಕಂಪನಿಯಾದ ಒಡಿಸ್ಸೆ ಎಲೆಕ್ಟ್ರಿಕ್ ವೆಹಿಕಲ್ಸ್ 'ಹೈಫೈ' ಎಂಬ ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು ತೀರ ಅಗ್ಗದ ಬೆಲೆ ರೂ. 42,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಹಂತದ ಗ್ರಾಹಕರು ವಿಶೇಷ ರಿಯಾಯಿತಿಗಳು ಮತ್ತು ವಾರೆಂಟಿ ಪ್ರಯೋಜನಗಳನ್ನು ಪಡೆಯಬಹುದು. ಈ ಹೊಸ ಸ್ಕೂಟರ್ ನಾಳೆಯಿಂದ (ಮೇ 10, 2025) ಒಡಿಸ್ಸೆಯ ಡೀಲರ್‌ಶಿಪ್ ನೆಟ್‌ವರ್ಕ್ ಮತ್ತು ಇ - ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರತದಾದ್ಯಂತ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.

ಹೊಸ ಹೈಫೈ ಸ್ಕೂಟರ್ ಇ - ಸ್ಕೂಟರ್ ಅರೋರಾ ಮ್ಯಾಟ್ ಬ್ಲ್ಯಾಕ್, ಫ್ಲೇರ್ ರೆಡ್ ರಾಯಲ್ ಮ್ಯಾಟ್ ಬ್ಲೂ, ಸೆರಾಮಿಕ್ ಸಿಲ್ವರ್ ಮತ್ತು ಜೇಡ್ ಗ್ರೀನ್ ಎಂಬ ಐದು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಹೈಫೈ ಸ್ಕೂಟರ್ ಸೀಟಿನ ಕೆಳಗೆ ಸಂಗ್ರಹಣೆ, ಕ್ರೂಸ್ ಕಂಟ್ರೋಲ್ ಮತ್ತು ಎಲ್ಲಾ ಅಗತ್ಯ ಮಾಹಿತಿಯನ್ನು ಪ್ರದರ್ಶಿಸುವ ಎಲ್‌ಇಡಿ ಡಿಜಿಟಲ್ ಮೀಟರ್ ಅನ್ನು ಒಳಗೊಂಡಿದೆ.

Take a Poll

ಜೊತೆಗೆ ಕೀಲೆಸ್ ಸ್ಟಾರ್ಟ್ ಜೊತೆಗೆ ಸ್ಟಾರ್ಟ್/ಸ್ಟಾಪ್ ಬಟನ್ ಹೊಂದಿದೆ. ಇದು ನಗರ ಚಾಲನೆ, ರಿವರ್ಸ್ ಮತ್ತು ಪಾರ್ಕಿಂಗ್‌ಗಾಗಿ ಪ್ರತ್ಯೇಕ ರೈಡ್ ಮೋಡ್‌ಗಳನ್ನು ಒಳಗೊಂಡಿದೆ. ಒಟ್ಟಾರೆ ನಗರ ಚಾಲನೆಗೆ ಬೆಸ್ಟ್ ಆಯ್ಕೆಯಾಗಿದ್ದು, ಕಡಿಮೆ ವೇಗದಲ್ಲಿ ಸ್ಥಳೀಯ ಕೆಲಸ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲು ಈ ಸ್ಕೂಟರ್ ಸಹಕರಿಸುತ್ತದೆ ಎಂದು ಕಂಪನಿ ಹೇಳಿದೆ.

ಈ ಸ್ಕೂಟರ್ ಎಲ್ಲಾ ಇವಿ ಸ್ಕೂಟರ್‌ಗಳಂತೆ ಅಲ್ಲದೆ ಗಂಟೆಗೆ 25 ಕಿ.ಮೀ. ಗರಿಷ್ಟ ವೇಗ ಹಾಗೂ ಸಿಂಗಲ್ ಚಾರ್ಜ್‌ನಲ್ಲಿ ಬರೋಬ್ಬರಿ 89 ಕಿ.ಮೀ.ವರೆಗೆ ಓಡಿಸಬಹುದು. ಒಡಿಸ್ಸೆ ಹೈಫೈ ಕಡಿಮೆ-ವೇಗದ ಇ-ಸ್ಕೂಟರ್ ಆಗಿರುವ ಕಾರಣ ಇದನ್ನು ಓಡಿಸಲು ಡ್ರೈವಿಂಗ್ ಲೈಸೆನ್ಸ್ ಬೇಕಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

newly-launched-odysse-low-speed-e-scooter-top-things

250 W ಮೋಟಾರ್‌ ಹೊಂದಿರುವ ಸ್ಕೂಟರ್, ಇದಕ್ಕೆ ತಕ್ಕಂತೆ 48 V ಅಥವಾ 60 V ಬ್ಯಾಟರಿ ಕಾನ್ಫಿಗರೇಶನ್‌ಗಳೊಂದಿಗೆ ಜೋಡಿಸಬಹುದಾದ ಆಯ್ಕೆಯನ್ನು ಸಹ ನೀಡಿದೆ. ಇದರ ಬ್ಯಾಟರಿಯನ್ನು 4-8 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಒಡಿಸ್ಸೆ ಹೈಫೈ ಇ-ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 70 ಕಿ.ಮೀ ನಿಂದ 89 ಕಿ.ಮೀ ವರೆಗೆ ರೇಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ - ಪ್ರಜ್ಞೆಯ ಪ್ರಯಾಣಿಕರು ಮತ್ತು ಕೊನೆಯ ಮೈಲಿ ವಿತರಣಾ ಜಾಲಗಳ ಅಗತ್ಯಗಳನ್ನು ಪೂರೈಸುವ ಮೂಲಕ, ಸ್ವಚ್ಛ, ಚುರುಕಾದ ಚಲನಶೀಲತೆಯ ಕಡೆಗೆ ಭಾರತದ ಬದಲಾವಣೆಯನ್ನು ವೇಗಗೊಳಿಸುವುದು ನಮ್ಮ ಉದ್ದೇಶವಾಗಿದೆ. ನಮ್ಮ ಹೊಸ ಕಡಿಮೆ-ವೇಗದ ಸ್ಕೂಟರ್, ನಾವೀನ್ಯತೆ, ಸುಸ್ಥಿರತೆ ಮತ್ತು ಸುಸ್ಥಿರ ಚಲನಶೀಲತೆಯನ್ನು ವ್ಯಾಪಕ ಪ್ರೇಕ್ಷಕರಿಗೆ ಇನ್ನಷ್ಟು ಸುಲಭವಾಗಿಸುವ ಗುರಿಯನ್ನು ಹೊಂದಿರುವ ಒಡಿಸ್ಸೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಕಂಪನಿ ಹೇಳಿದೆ.

newly-launched-odysse-low-speed-e-scooter-top-things

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹೊಸ ವಾಹನ ತಯಾರಕ ಕಂಪನಿಗಳು ತಮ್ಮ ಆಕರ್ಷಕ ಇವಿಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಮುಂಬೈ ಮೂಲದ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿ ತೀರಾ ಅಗ್ಗದ ಬೆಲೆಗೆ ಬಿಡುಗಡೆ ಮಾಡಿರುವ ಈ ಹೊಸ ಸ್ಕೂಟರ್ ಯಾವ ಮಟ್ಟಿಗೆ ಸದ್ದು ಮಾಡಲಿದೆ ಕಾದುನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, May 9, 2025, 15:54 [IST]
English summary
Newly launched odysse low speed e scooter top things
Read more on electric scooter india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+