1 ಕಿ.ಮೀಗೆ ಕೇವಲ 15 ಪೈಸೆ ಖರ್ಚು: ಇತ್ತೀಚೆಗೆ ಬಿಡುಗಡೆಯಾಗಿದೆ ಅಗ್ಗದ ಹೊಸ ಸ್ಕೂಟರ್!

ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಆಲ್ಫಾವೆಕ್ಟರ್ಸ್ ಪ್ರೈವೇಟ್ ಲಿಮಿಟೆಡ್ ಬ್ರಾಂಡ್ ನೈಂಟಿ ಒನ್, ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ XE ಸಿರೀಸ್ ಅನ್ನು ಕೇವಲ ರೂ. 27,999 (ಜಿಎಸ್‌ಟಿ ಸೇರಿದಂತೆ) ಕ್ಕೆ ಬಿಡುಗಡೆ ಮಾಡಿದೆ. ಇದು ಪ್ರತಿ ಕಿಲೋಮೀಟರ್‌ಗೆ 15 ಪೈಸಾಕ್ಕಿಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ. ಸುಧಾರಿತ ತಂತ್ರಜ್ಞಾನ, ಸುರಕ್ಷತಾ ವೈಶಿಷ್ಟ್ಯಗಳು ಮತ್ತು ದೀರ್ಘಕಾಲೀನ ಖಾತರಿಗಳಿಂದ ಬೆಂಬಲಿತವಾದ ಉನ್ನತ-ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ಸ್ಕೂಟರ್‌ಗೆ ಅಸಾಧಾರಣ ಮೌಲ್ಯವನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

7 ರಿಂದ 8 ಗಂಟೆಗಳ ಚಾರ್ಜಿಂಗ್ ಸಮಯ ಮತ್ತು ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ, ಈ ಅತ್ಯಾಧುನಿಕ ಮಾದರಿಯು ದಕ್ಷ BLDC ಮೋಟಾರ್ ಹೊಂದಿದೆ. ಈ ಹೊಸ ಎಲೆಕ್ಟ್ರಿಕ್ ವಾಹನವು ವಿಶ್ವಾಸಾರ್ಹ ಮತ್ತು ಪರಿಸರ ಸ್ನೇಹಿ ಸಾರಿಗೆ ವಿಧಾನವನ್ನು ಹುಡುಕುತ್ತಿರುವ ನಗರ ಪ್ರಯಾಣಿಕರಿಗೆ ಪರ್ಫಾಮೆನ್ಸ್, ಸುಸ್ಥಿರತೆ ಮತ್ತು ಅನುಕೂಲತೆಯ ಪರಿಪೂರ್ಣ ಸಮತೋಲನವನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ninety-one-xe-series-electric-scooter-top-things

ಹೊಸ ಎಲೆಕ್ಟ್ರಿಕ್ ಸ್ಕೂಟರ್ ದೈನಂದಿನ ಪ್ರಯಾಣ ಮತ್ತು ದೀರ್ಘ ಪ್ರಯಾಣಗಳನ್ನು ಸುಲಭವಾಗಿ ನಿರ್ವಹಿಸುತ್ತದೆ. ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಪ್ರತಿ ಚಾರ್ಜ್‌ಗೆ 80+ ಕಿ.ಮೀ ರೇಂಜ್ ನೀಡುತ್ತದೆ. ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಆಯ್ಕೆಗಳು, ವೇಗದ ಚಾರ್ಜಿಂಗ್ ತಂತ್ರಜ್ಞಾನ ಮತ್ತು ವರ್ಧಿತ ಸೌಕರ್ಯವನ್ನು ಒಳಗೊಂಡಂತೆ ವಿವಿಧ ಪ್ರೀಮಿಯಂ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳಿದೆ.

ಹೊಸ ಸ್ಕೂಟರ್ ಹೆಚ್ಚಿನ ಸಾಮರ್ಥ್ಯದ ಲಿಥಿಯಂ-ಅಯಾನ್ ಮತ್ತು ಲೀಡ್ ಆಸಿಡ್ ಬ್ಯಾಟರಿ ಆಯ್ಕೆಗಳನ್ನು ಹೊಂದಿದೆ, ಎರಡೂ ಆಯ್ಕೆಗಳು ವಿಸ್ತೃತ ಖಾತರಿಗಳಿಂದ ಬೆಂಬಲಿತವಾಗಿದ್ದು, ಲಿಥೀಯಂ-ಅಯಾನ್ ಬ್ಯಾಟರಿಗಳ ಮೇಲೆ 3 ವರ್ಷಗಳು ಮತ್ತು ಲೀಡ್ ಆಸಿಡ್ ಬ್ಯಾಟರಿ ಮೇಲೆ 1 ವರ್ಷ ವಾರೆಂಟಿ ನೀಡಲಾಗಿದೆ.

ಆಟೋ ಕಟ್-ಆಫ್‌ನೊಂದಿಗೆ ದಕ್ಷ 4 AMP ಚಾರ್ಜರ್‌ನೊಂದಿಗೆ ಸಜ್ಜುಗೊಂಡಿರುವ ಈ ವಾಹನವು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಚಾರ್ಜ್ ಆಗುತ್ತದೆ. ನಗರ ಪ್ರಯಾಣಕ್ಕೆ ಬೇಕಾದ ವೇಗವನ್ನು ಒದಗಿಸಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ವಾಹನವು 25 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ. ಇದು ಸವಾರರಿಗೆ ಅವರ ಶ್ರೇಣಿಯ ಅವಶ್ಯಕತೆಗಳು ಮತ್ತು ಬಜೆಟ್ ಆಧರಿಸಿ ಆಯ್ಕೆ ನೀಡುತ್ತದೆ.

ವಾಹನವನ್ನು ಕಡಿಮೆ-ವೇಗದ ಸುರಕ್ಷತಾ ಭರವಸೆಯೊಂದಿಗೆ ವಿನ್ಯಾಸಗೊಳಿಸಲಾಗಿರುವುದರಿಂದ ಎಲ್ಲಾ ರೀತಿಯ ಬಳಕೆದಾರರಿಗೆ ಸುರಕ್ಷಿತ ಮತ್ತು ಆನಂದದಾಯಕ ಸವಾರಿಯನ್ನು ಒದಗಿಸುತ್ತದೆ. ಸುಧಾರಿತ ಹಿಂಭಾಗದ ಸಸ್ಪೆನ್ಷನ್ ಹೊಂದಿರುವ ಈ ವಾಹನವು ಅಸಮ ರಸ್ತೆ ಮೇಲ್ಮೈಗಳಲ್ಲಿಯೂ ಸಹ ಸುಗಮ ಮತ್ತು ಸ್ಥಿರವಾದ ಸವಾರಿಯನ್ನು ನೀಡುತ್ತದೆ, ಇದು ನಗರ ಪರಿಸರಕ್ಕೆ ಸೂಕ್ತವಾಗಿದೆ.

ಒಟ್ಟಾರೆ ಹೆಚ್ಚಾಗುತ್ತಿರುವ ಇಂಧನ ಬೆಲೆಗಳಿಂದಾಗಿ ಬೇಸತ್ತಿರುವ ಸಾರ್ವಜನಿಕರು ಈ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ತಮ್ಮ ನಿತ್ಯಾವಸರ ಪ್ರಯಾಣಗಳನ್ನು ಖರ್ಚಿಲ್ಲದೆ ಮಾಡಬಹುದು. ಅಲ್ಲದೇ ಪರಿಸರ ಕಾಳಜಿಯೊಂದಿಗೆ ಕಾರ್ಬನ್ ಹೊರ ಸೂಸುವಿಕೆಯನ್ನು ತಡೆಗಟ್ಟುವಲ್ಲಿ ತಮ್ಮ ಕೊಡುಗೆ ನೀಡಬಹುದು ಎಂದು ಕಂಪನಿ ಹೇಳಿದೆ. ಈ ವಾಹನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, February 24, 2025, 12:30 [IST]
English summary
Ninety one xe series electric scooter top things
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+