Numeros Diplos Max: ಹೊಸ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಇ-ಸ್ಕೂಟರ್ ವಿಡಿಯೋ ರಿವ್ಯೂ.. ನೀವೇ ನೋಡಿ!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ನ್ಯೂಮೆರೋಸ್ ಮೋಟಾರ್ಸ್ (Numeros Motors), ಹೊಚ್ಚ ಹೊಸ ಡಿಪ್ಲೋಸ್ ಮ್ಯಾಕ್ಸ್ (Diplos Max) ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಭಿವೃದ್ಧಿಪಡಿಸಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೇವಲ ದಿನದಲ್ಲಿ ಮಾರಾಟಕ್ಕೂ ಬರುವ ನಿರೀಕ್ಷೆಯಿದೆ. ನಮಗೆ ಈ ನೂತನ ಇ-ಸ್ಕೂಟರ್‌ನ್ನು ಟೆಸ್ಟ್ ಡ್ರೈವ್ ನಡೆಸಲು ಅವಕಾಶ ಲಭ್ಯವಾಯಿತು. ನಿಮಗಾಗಿ 'ಡಿಪ್ಲೋಸ್ ಮ್ಯಾಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ರಿವ್ಯೂ ವಿಡಿಯೋ..
ಈ ಹೊಸ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ಅತ್ಯುತ್ತಮವಾದ ವಿನ್ಯಾಸವನ್ನು ಒಳಗೊಂಡಿದೆ. ಮುಂಭಾಗ ರೌಂಡ್-ಹೆಡ್‌ಲೈಟ್, ಟರ್ನ್ ಸಿಗ್ನಲ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ನ್ನು ಪಡೆದಿದೆ. ಇದರ ಫ್ಲೋರ್ ಬೋರ್ಡ್ ಸಮತಟ್ಟಾಗಿದ್ದು, ಬಾಡಿ ಪ್ಯಾನೆಲ್‌ಗಳು ಕೂಡ ಗಟ್ಟಿಮುಟ್ಟಾಗಿವೆ. ಹಿಂಭಾಗ ಓವಲ್ ಎಲ್ಇಡಿ ಬ್ರೇಕ್ ಲೈಟಿಂಗ್ ಅನ್ನು ಒಳಗೊಂಡಿದೆ.
ನೂತನ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್, 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ತೆಗೆದು ಹಾಕಬಹುದಾದ ಡುಯಲ್-ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಿಂಗಲ್ ಚಾರ್ಜ್‌ನಲ್ಲಿ 140 ಕಿಲೋಮೀಟರ್‌ವರೆಗೂ ಓಡುತ್ತದೆ ಎಂದು ತಿಳಿದುಬಂದಿದೆ. ಇದು 137 ಕೆಜಿ ತೂಕವಿದ್ದು, 1,430 ಎಂಎಂ ಉದ್ದದ ವೀಲ್‌ಬೇಸ್‌ನ್ನು ಪಡೆದಿದೆ.
ಈ ಹೊಸ ಸ್ಕೂಟರ್ ಹಲವು ನವೀನವಾದ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಇನ್ಸ್ಟ್ರುಮೆಂಟ್ ಸ್ಕ್ರೀನ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನ್ನು ಹೊಂದಿದೆ. 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಲಿದೆ. ಇದರಲ್ಲಿ ಉಪಯೋಗ ಮಾಡಲಾಗಿರುವ ಬ್ಯಾಟರಿ ಪ್ಯಾಕ್‌ಗಳು, ಭರ್ತಿ ಚಾರ್ಜ್ ಆಗುವುದಕ್ಕೆ 3 ರಿಂದ 4 ಗಂಟೆ ಬೇಕಾಗುತ್ತದೆ.

ಹೊಚ್ಚ ಹೊಸ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್ ಎಲೆಕ್ಟ್ರಿಕ್ ಸ್ಕೂಟರ್, 3.7 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ತೆಗೆದು ಹಾಕಬಹುದಾದ ಡುಯಲ್-ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಿಂಗಲ್ ಚಾರ್ಜ್‌ನಲ್ಲಿ 140 ಕಿಲೋಮೀಟರ್‌ವರೆಗೂ ಓಡುತ್ತದೆ ಎಂದು ತಿಳಿದುಬಂದಿದೆ. ಇದು 137 ಕೆಜಿ ತೂಕವಿದ್ದು, 1,430 ಎಂಎಂ ಉದ್ದದ ವೀಲ್‌ಬೇಸ್‌ನ್ನು ಪಡೆದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) 220 ಎಂಎಂ ಮತ್ತು ಹಿಂಭಾಗ (ರೇರ್) 180 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಮುಂದೆ ಟೆಲಿಸ್ಕೋಪಿಕ್ & ಹಿಂದೆ ಅಡ್ಜೆಸ್ಟೇಬಲ್ ಡುಯಲ್ ಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. 12-ಇಂಚಿನ ವೀಲ್‌ಗಳು ಹಾಗೂ 90/90 ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








