ಸ್ಪ್ಲೆಂಡರ್‌ನಂತಹ 100 ಸಿಸಿ ಪೆಟ್ರೋಲ್ ಬೈಕ್‌ಗಳಿಗೆ ಸ್ಪರ್ಧೆಯೊಡ್ಡಲು ಮುಂದಾದ ಬೆಂಗಳೂರಿನ ಒಬೆನ್.. ಅದು ಹೇಗೆ?
ಬೆಂಗಳೂರಿನ ಒಬೆನ್ ಎಲೆಕ್ಟ್ರಿಕ್ (Oben Electric), ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ 'ರೋರ್' ಇ-ಬೈಕ್‌ನ್ನು ಮಾರಾಟಗೊಳಿಸುತ್ತಿದೆ. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, 'ಒಬೆನ್' ಕಂಪನಿಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೊಸ ಕ್ರಾಂತಿ ಮಾಡಲು ಅಣಿಯಾಗುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಹೋಂಡಾ ಶೈನ್ ಹಾಗೂ ಹೀರೋ ಸ್ಪ್ಲೆಂಡರ್‌ನಂತಹ 100 ಸಿಸಿ ಪೆಟ್ರೋಲ್ ಬೈಕ್‌ಗಳಿಗೆ ಪ್ರಬಲವಾದ ಪ್ರತಿಸ್ಪರ್ಧಿಯೊಡ್ಡಲು ಒಬೆನ್ ಎಲೆಕ್ಟ್ರಿಕ್, ಹೊಚ್ಚ ಹೊಸ ಇ-ಮೋಟಾರ್‌ಸೈಕಲ್‌ಗಾಗಿ ಪ್ಲಾಟ್‌ಫಾರ್ಮ್‌ವೊಂದನ್ನು ಸಿದ್ಧಪಡಿಸುತ್ತಿದೆ. ಈ ಬಗ್ಗೆ ಸ್ವತಃ ಕಂಪನಿಯೇ ಅಧಿಕೃತವಾಗಿ ಘೋಷಣೆ ಮಾಡಿದೆ. ನೂತನ ಎಲೆಕ್ಟ್ರಿಕ್ ಬೈಕ್ ಪ್ಲಾಟ್‌ಫಾರ್ಮ್‌ಗೆ ಒ100 (O100) ಎಂಬ ಹೆಸರನ್ನು ಇಡಲಾಗದೆ.

ಬೆಂಗಳೂರಿನಲ್ಲಿರುವ ಒಬೆನ್‌ನ ಸಂಶೋಧನೆ & ಅಭಿವೃದ್ಧಿ ಕೇಂದ್ರದಲ್ಲಿ (Oben Research & Development Center) ಹೊಸ ಪ್ಲಾಟ್‌ಫಾರ್ಮ್‌ನ್ನು ತಯಾರಿಸಲಾಗುತ್ತಿದೆ. ಸಾಮಾನ್ಯ ಭಾಷೆಯಲ್ಲಿ 'ಪ್ಲಾಟ್‌ಫಾರ್ಮ್' ಬಗ್ಗೆ ಹೇಳುವುದಾದರೆ, ಇದು ಮನೆಯ ಪಾಯದ ರೀತಿ.. ಹಾಗೆಯೇ ಪ್ಲಾಟ್‌ಫಾರ್ಮ್ ಎಂಬುದು ಅಡಿಪಾಯವಾಗಿರುತ್ತದೆ. ಮತ್ತಷ್ಟು ಸರಳೀಕರಿಸುವುದಾದರೆ 'ಚಾಸಿಸ್' ಎಂದು ಅರ್ಥ ಮಾಡಿಕೊಳ್ಳಬಹುದು.
ಪ್ರಸ್ತುತ ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 100 ಸಿಸಿ ಪೆಟ್ರೋಲ್ ಬೈಕ್‌ಗಳು, ಶೇಕಡ 30% ಪಾಲನ್ನು ಹೊಂದಿವೆ. ಒಬೆನ್ ಎಲೆಕ್ಟ್ರಿಕ್ ಈ ವಿಭಾಗಕ್ಕೆ ಲಗ್ಗೆ ಹಾಕಲು ಮುಂದಾಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಕ್ಕೆ ಸರಿ ಹೊಂದುವಂತೆ 'ಒ100' ಪ್ಲಾಟ್‌ಫಾರ್ಮ್ ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.
ಈ ಕುರಿತಂತೆ ಒಬೆನ್ ಎಲೆಕ್ಟ್ರಿಕ್‌ನ ಸಿಇಒ ಮಧುಮಿತಾ ಅಗರ್ವಾಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ದೇಶದ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಹೊಸ 'ಒ100' ಪ್ಲಾಟ್‌ಫಾರ್ಮ್‌ನ್ನು ವಿನ್ಯಾಸಗೊಳಿಸುತ್ತಿದ್ದೇವೆ. ಇದರಡಿ ಸಿದ್ಧಪಡಿಸಿದ ಇ-ಬೈಕ್‌ನ್ನು ನಗರ ಮಾತ್ರವಲ್ಲದೆ, ಸಾಮಾನ್ಯ ಹಳ್ಳಿಗಳಲ್ಲೂ ಬಳಕೆ ಮಾಡಲು ಸಾಧ್ಯವಾಗಲಿದೆ' ಎಂದು ಹೇಳಿದ್ದಾರೆ.
ಭಾರತದಾದ್ಯಂತ ಟೈರ್ 1, ಟೈರ್ 2 ಹಾಗೂ ಟೈರ್ 3 ನಗರಗಳಲ್ಲೂ ಒಬೆನ್ ಎಲೆಕ್ಟ್ರಿಕ್ ತನ್ನ ಕಾರ್ಯವ್ಯಾಪ್ತಿಯನ್ನು ವೇಗವಾಗಿ ವಿಸ್ತರಿಸುತ್ತಿದೆ. ಈ ವರ್ಷಾಂತ್ಯದ ವೇಳೆಗೆ 100ಕ್ಕೂ ಅಧಿಕ ಶೋರೂಂಗಳನ್ನು ತೆರೆಯಲು ಯೋಜಿಸಿದೆ. ಈಗ ಎಆರ್‌ಎಕ್ಸ್ (ARX) ಪ್ಲಾಟ್‌ಫಾರ್ಮ್ ಆಧಾರಿತ ರೋರ್ ಮತ್ತು ರೋರ್ ಇಝಡ್ ಎಂಬ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟಗೊಳಿಸುತ್ತಿದೆ.
ದೇಶೀಯವಾಗಿ ಖರೀದಿಗೆ ದೊರೆಯುವ ಒಬೆನ್ ರೋರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ರೂ.1.50 ಲಕ್ಷ ಬೆಲೆಯನ್ನು ಹೊಂದಿದೆ. 4.4 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 187 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಒಬೆನ್ ರೋರ್ ಇಝಡ್ ಇ-ಬೈಕ್ ರೂ.89,999 ರಿಂದ ರೂ.1.20 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಖರೀದಿಗೆ ದೊರೆಯುತ್ತದೆ. 2.6 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 110 ಕಿಲೋಮೀಟರ್ ಓಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications