ಪೆಟ್ರೋಲ್‌ಗೆ ಹೇಳಿ ಗುಡ್ಬೈ: ಓಲಾ ಇ-ಬೈಕ್‌ಗಳ ಉತ್ಪಾದನೆ ಶುರು.. ಕಡಿಮೆ ಬೆಲೆಗೆ ಶೀಘ್ರ ಮಾರಾಟಕ್ಕೆ!
ಬೆಂಗಳೂರು (Bengaluru) ಮೂಲದ ಓಲಾ ಎಲೆಕ್ಟ್ರಿಕ್ (Ola Electric) ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಎಸ್1 ಸೀರೀಸ್ ಇ-ಸ್ಕೂಟರ್‌ಗಳನ್ನು ಮಾರಾಟಗೊಳಿಸುವುದರೊಂದಿಗೆ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದೆ. 2024ರ ಆಗಸ್ಟ್ 15ರಂದು ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 'ರೋಡ್‌ಸ್ಟರ್'ನ್ನು ಪರಿಚಯಿಸಿತ್ತು. ಜೊತೆಗೆ ಬೆಲೆಯನ್ನು ಘೋಷಣೆ ಮಾಡಿತ್ತು. ಆದರೆ ವಿತರಣೆಯನ್ನು 2025ರಿಂದ ಶುರು ಮಾಡುವುದಾಗಿ ಹೇಳಿತ್ತು. ಸದ್ಯ, ನೂತನ ಬೈಕ್ ಕುರಿತಂತೆ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.
ಈ ಬಗ್ಗೆ ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ (Bhavish Aggarwal) ತಮ್ಮ 'ಎಕ್ಸ್' ಖಾತೆಯಲ್ಲಿ ಸೋಮವಾರ ಪೋಸ್ಟ್ ಮಾಡಿದ್ದಾರೆ. ಉತ್ಪಾದನಾ ಹಂತದಲ್ಲಿರುವ ನೂತನ ರೋಡ್‌ಸ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ, 'ಇಂದು ಫ್ಯಾಕ್ಟರಿಯಲ್ಲಿ ಮೊದಲ ಬೈಕ್ ಮಾಡೆಲ್‌ಗಳನ್ನು ತಯಾರಿಸಲಾಗುತ್ತಿದೆ' ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.

ಎಲ್ಲವು ಅಂದುಕೊಂಡಂತೆ ನಡೆದರೆ, ಅತಿ ಶೀಘ್ರದಲ್ಲಿಯೇ ನೂತನ ಓಲಾ ರೋಡ್‌ಸ್ಟರ್ (Ola Roadster) ಎಲೆಕ್ಟ್ರಿಕ್ ಬೈಕ್‌ಗಳ ವಿತರಣೆಗಳು ಶುರುವಾಗಲಿದೆ. ಈ ಓಲಾ ರೋಡ್‌ಸ್ಟರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಮೂರು ವಿಧದಲ್ಲಿ ಲಭ್ಯವಾಗಲಿದೆ. ಒಂದ್ಕಕಿಂತ ಒಂದು ಅದ್ಬುತವಾಗಿದ್ದು, ಶೀಸಾಮನ್ಯರು ಕೂಡ ಸುಲಭವಾಗಿ ಖರೀದಿ ಮಾಡಬಹುದು.
ಓಲಾ ರೋಡ್‌ಸ್ಟರ್ ಎಕ್ಸ್: ಈ ಎಲೆಕ್ಟ್ರಿಕ್ ಬೈಕ್ ಮಾಡೆಲ್, ಕನಿಷ್ಠ ರೂ.75,000 ಮತ್ತು ಗರಿಷ್ಠ ರೂ.1 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 2.5 ಕೆಡಬ್ಲ್ಯೂಹೆಚ್, 3.5 ಕೆಡಬ್ಲ್ಯೂಹೆಚ್ & 4.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 200 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ.

ನೂತನ ಓಲಾ ರೋಡ್‌ಸ್ಟರ್ ಎಕ್ಸ್ ಇ-ಮೋಟಾರ್‌ಸೈಕಲ್, 124 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 4.3-ಇಂಚಿನ ಎಲ್‌ಸಿಡಿ ಸೆಗ್ಮೆಂಟ್ ಡಿಸ್‌ಪ್ಲೇ, ಓಲಾ ಮ್ಯಾಪ್ ನ್ಯಾವಿಗೇಷನ್ (ಟರ್ನ್- ಬೈ-ಟರ್ನ್) ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಓಲಾ ರೋಡ್‌ಸ್ಟರ್: ಇದು ರೂ.1.05 ಲಕ್ಷದಿಂದ ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 248 ಕಿಲೋಮೀಟರ್‌ಗೂ ಕ್ರಮಿಸುತ್ತದೆ. 126 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 6.8-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಪ್ರಾಕ್ಸಿಮಿಟಿ ಅನ್‌ಲಾಕ್ & ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಓಲಾ ರೋಡ್‌ಸ್ಟರ್ ಪ್ರೊ: ಇದು ಕನಿಷ್ಠ ರೂ.2 ಲಕ್ಷ ಹಾಗೂ ಗರಿಷ್ಠ ರೂ.2.50 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. 8 ಕೆಡಬ್ಲ್ಯೂಹೆಚ್ ಮತ್ತು 16 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ಗಳನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 579 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡುತ್ತದೆ.10-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಒಳಗೊಂಡನಂತೆ ಯುವ ಗ್ರಾಹಕರನ್ನು ಸೆಳೆಯುವ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








