1 ಲಕ್ಷ ರೂಪಾಯಿಕ್ಕಿಂತ ಅಗ್ಗ.. 68.75 Km ಮೈಲೇಜ್, ಈ ಪಾಪುಲರ್ ಸ್ಕೂಟರ್‌ಗಳನ್ನು ತೆಗೆದುಕೊಳ್ಳಬಹುದು!

ದಿನನಿತ್ಯದ ಬಳಕೆಗೆ ದ್ವಿಚಕ್ರ ವಾಹನಗಳು ತೀರಾ ಅನಿವಾರ್ಯವಾಗಿವೆ. ಆದರಲ್ಲೂ ಸ್ಕೂಟರ್‌ಗಳನ್ನು ಮಹಿಳೆಯರು ಹಾಗೂ ಪುರುಷರು ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಟಿವಿಎಸ್ ಜುಪಿಟರ್ 110, ಹೋಂಡಾ ಆಕ್ಟಿವಾ 110 ಹಾಗೂ ಯಮಹಾ ಫ್ಯಾಸಿನೊ 125 ಎಫ್ಐ ಹೈಬ್ರಿಡ್ ಮಾಡೆಲ್‌ಗಳು ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಇವುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ಟಿವಿಎಸ್ ಜುಪಿಟರ್ 110 (TVS Jupiter 110):

ಇದು ಜನಪ್ರಿಯ ಬೈಕ್ ಆಗಿದೆ. ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ಆರಾಮದಾಯಕವಾದ ಪ್ರಯಾಣವನ್ನು ಒದಗಿಸುತ್ತದೆ. ಅದಕ್ಕೆ ತಕ್ಕಂತೆ ರೂ.78,631 ರಿಂದ ರೂ.91,781 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಡಾನ್ ಬ್ಲೂ, ಗ್ಯಾಲಕ್ಟಿಕ್ ಕಾಪರ್ ಮ್ಯಾಟ್ ಹಾಗೂ ಸ್ಟಾರ್ಲೈಟ್ ಬ್ಲೂ ಗ್ಲೋಸ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Popular Scooters Under Rs 1 Lakh With Good Mileage TVS Jupiter Honda Activa And Yamaha Fascino

ಈ ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 113 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿ ಆಯ್ಕೆಯನ್ನು ಪಡೆದಿದೆ. 7.91 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 9.8 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 53 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 82 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ನೂತನ ಜುಪಿಟರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಇಂಟಲಿಜೆಂಟ್ ಸ್ಟಾರ್ಟ್/ಸ್ಟಾಪ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಮತ್ತು ಯುಎಸ್‌‍ಬಿ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಗ್ಯಾಸ್ ಫೀಲ್ಡ್ ಡ್ಯಾಂಪರ್ ಸಸ್ಪೆನ್ಷನ್ ಸೆಟಪ್‌ಗಳನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Popular Scooters Under Rs 1 Lakh With Good Mileage TVS Jupiter Honda Activa And Yamaha Fascino

ಹೋಂಡಾ ಆಕ್ಟಿವಾ 110 (Honda Activa 110):

ಇದೊಂದು ಜನಪ್ರಿಯ ಸ್ಕೂಟರ್ ಆಗಿದ್ದು, ನಿರ್ಮಾಣ ಗುಣಮಟ್ಟ ಹಾಗೂ ದೀರ್ಘಕಾಲಿಕ ಬಾಳಿಕೆಗೆ ಹೆಸರುವಾಗಿದೆ. ರೂ.81,000 (ಎಕ್ಸ್-ಶೋರೂಂ) ಬೆಲೆಗೆ ಖರೀದಿಗೆ ದೊರೆಯುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಪಡೆದಿದೆ. ರೆಬೆಲ್ ರೆಡ್ ಮೆಟಾಲಿಕ್ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಸ್ಕೂಟರ್ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಹೊಂದಿದೆ. 09.51 ಸಿಸಿ ಒಬಿಡಿ-2ಬಿ ಏರ್-ಕೋಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 50 ರಿಂದ 55 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 4.2-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯಿಂದ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.

Popular Scooters Under Rs 1 Lakh With Good Mileage TVS Jupiter Honda Activa And Yamaha Fascino

ಯಮಹಾ ಫ್ಯಾಸಿನೊ 125 ಎಫ್ಐ ಹೈಬ್ರಿಡ್ (Yamaha Fascino 125 Fi Hybrid):

ಇದು ಕೂಡ ಜನಪ್ರಿಯ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಳ್ಳಬಹುದು. ರೂ.80,750 ರಿಂದ ರೂ.1.03 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಅತ್ಯಾಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಮೆಟಾಲಿಕ್ ಬ್ಲ್ಯಾಕ್, ಡಾರ್ಕ್ ಮ್ಯಾಟ್ ಬ್ಲೂ, ಸಯಾನ್ ಬ್ಲೂ, ಸಿಲ್ವರ್, ವಿವಿಡ್ ರೆಡ್, ಮ್ಯಾಟ್ ಕಾಪರ್, ಮೆಟಾಲಿಕ್ ವೈಟ್, ಕೂಲ್ ಬ್ಲೂ ಮೆಟಾಲಿಕ್ ಹಾಗೂ ಡಾರ್ಕ್ ಮ್ಯಾಟ್ ಬ್ಲೂ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಹೊಸ ಫ್ಯಾಸಿನೊ 125 ಎಫ್ಐ ಹೈಬ್ರಿಡ್ ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. ಮೈಲ್ಡ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಟೆಕ್ನಾಲಜಿ ಹೊಂದಿರುವ 125 ಸಿಸಿ ಏರ್-ಕೋಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 68.75 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 5-ಇಂಚಿನ ಟಿಎಫ್‌ಟಿ ಕನ್ಸೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Article Published On: Sunday, August 31, 2025, 15:51 [IST]
English summary
Popular scooters under rs 1 lakh with good mileage tvs jupiter honda activa and yamaha fascino
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+