sankranti offer: ಬಂಪರ್ ಆಫರ್ ಘೋಷಣೆ: ಸ್ಕೂಟರ್ ಮೇಲೆ ದುಬಾರಿ ಮೊಬೈಲ್ ಫೋನ್ ಫ್ರೀ!
ಪ್ರಮುಖ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ಅಪ್ ಕಂಪನಿಯಾಗಿರುವ ಕ್ವಾಂಟಮ್ ಎನರ್ಜಿ (Quantum Energy), ಹಬ್ಬದ ಕೊಡುಗೆಗಳನ್ನು ಘೋಷಿಸಿದೆ. ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿರುವುದರಿಂದ, ಕ್ವಾಂಟಮ್ ಎನರ್ಜಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಶ್ರೇಣಿಯಲ್ಲಿ ಅತ್ಯಾಕರ್ಷಕ ಬಹುಮಾನಗಳನ್ನು ನೀಡುವ ಮೂಲಕ ಈ ಹಬ್ಬವನ್ನು ತನ್ನ ಗ್ರಾಹಕರಿಗೆ ವಿಶೇಷವಾಗಿಸುತ್ತಿರುವುದಾಗಿ ಹೇಳಿದೆ. ಈ ಸೀಮಿತ ಅವಧಿಯ ಕೊಡುಗೆಯ ಭಾಗವಾಗಿ ಕಂಪನಿಯ ಪ್ರಮುಖ ಮಾಡಲ್‌ಗಳಾದ ಪ್ಲಾಸ್ಮಾ, ಮಿಲನ್ ಮತ್ತು ಬಿಜಿನೆಸ್ ಸಿರೀಸ್ ವಾಹನಗಳನ್ನು ಒಳಗೊಂಡಂತೆ ಆಯ್ದ ಕ್ವಾಂಟಮ್ ಇವಿ ಮಾದರಿಗಳ ಖರೀದಿಯೊಂದಿಗೆ ರೂ.15,000 ಮೌಲ್ಯದ ಉಚಿತ ಮೊಬೈಲ್ ಫೋನ್ ಪಡೆಯಬಹುದು ಎಂದು ಹೇಳಿದೆ.
ಈ ವಿಶೇಷ ಕೊಡುಗೆಯೊಂದಿಗೆ ಗ್ರಾಹಕರು ಅಮೂಲ್ಯವಾದ ಬಹುಮಾನಗಳನ್ನು ಪಡೆಯುವ ಜೊತೆಗೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಈ ಆಫರ್ ಜನವರಿ 18, 2025 ರವರೆಗೆ ಇರಲಿದ್ದು, ಭಾರತದಲ್ಲಿ ಹೊಸದಾಗಿ ತೆರೆಯಲಾದ ಔಟ್‌ಲೆಟ್‌ಗಳು ಸೇರಿದಂತೆ ಎಲ್ಲಾ ಕ್ವಾಂಟಮ್ ಎನರ್ಜಿ ಶೋರೂಮ್‌ಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಕ್ವಾಂಟಮ್ ಎನರ್ಜಿ ಲಿಮಿಟೆಡ್‌ನ ನಿರ್ದೇಶಕಿ ಚೇತನ ಚುಕ್ಕಪಲ್ಲಿ ಮಾತನಾಡಿ, ನಮ್ಮ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ತರಲು ನಾವು ರೋಮಾಂಚನಗೊಂಡಿದ್ದೇವೆ. ಜನರು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವಂತೆ ಮಾಡಲು ಉತ್ತಮ ಪರ್ಫಾಮೆನ್ಸ್ ಮತ್ತು ಸುಸ್ಥಿರತೆ ಎರಡನ್ನೂ ನೀಡುವ ಅತ್ಯಾಧುನಿಕ, ಪರಿಸರ ಸ್ನೇಹಿ ವಾಹನಗಳನ್ನು ಒದಗಿಸಲು ನಾವು ಸಮರ್ಪಿತರಾಗಿದ್ದೇವೆ ಎಂದರು.
ಈ ವಿಶೇಷ ಕೊಡುಗೆಯೊಂದಿಗೆ, ಗ್ರಾಹಕರು ಸ್ವಚ್ಛ ಸಾರಿಗೆ ವಿಧಾನಕ್ಕೆ ಪರಿವರ್ತನೆಗೊಳ್ಳಲು ನಾವು ಸಹಾಯ ಮಾಡುವುದಲ್ಲದೆ, ನಂಬಲಾಗದ ಪ್ರತಿಫಲಗಳೊಂದಿಗೆ ಆಚರಿಸಲು ಅವರಿಗೆ ಅವಕಾಶವನ್ನು ನೀಡುತ್ತಿದ್ದೇವೆ. ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಕ್ವಾಂಟಮ್ ಎನರ್ಜಿ ಭಾರತೀಯ ಪ್ರಯಾಣಿಕರನ್ನು ಸುಧಾರಿತ ಎಲೆಕ್ಟ್ರಿಕ್ ವಾಹನಗಳೊಂದಿಗೆ ಸಬಲೀಕರಣಗೊಳಿಸುವ ಮೂಲಕ ಹಸಿರು ಭವಿಷ್ಯಕ್ಕೆ ಕೊಡುಗೆ ನೀಡಲು ಬದ್ಧವಾಗಿದ್ದೇವೆ ಎಂದು ಹೇಳಿದರು.

ಕಂಪನಿಯ ಪ್ರಮುಖ ಸ್ಕೂಟರ್‌ಗಳು: ಪ್ಲಾಸ್ಮಾ X, ಪ್ಲಾಸ್ಮಾ XR, ಮಿಲನ್, ಬಿಝಿನೆಸ್ X, ಬಿಝಿನೆಸ್ XP ಪ್ರಮುಖ ಮಾಡಲ್‌ಗಳಾಗಿವೆ. ಇವುಗಳಲ್ಲಿ ಪ್ಲಾಸ್ಮಾ X ಇವಿ ಸ್ಕೂಟರ್ ದೃಢವಾದ 1500W ಮೋಟಾರ್ ಹೊಂದಿದ್ದು, 65 ಕಿ.ಮೀ/ಗಂಟೆಯ ಗರಿಷ್ಠ ವೇಗ ಹಾಗೂ ಒಂದೇ ಚಾರ್ಜ್‌ನಲ್ಲಿ 120 ಕಿ.ಮೀ ರೇಂಜ್ ನೀಡುತ್ತದೆ.
ಮಿಲನ್ ಇವಿ ಸ್ಕೂಟರ್ 1000W ಮೋಟಾರ್ ಹೊಂದಿದ್ದು, 60 ಕಿಮೀ/ಗಂಟೆಯ ಗರಿಷ್ಠ ವೇಗ ಹಾಗೂ ಪ್ರತಿ ಚಾರ್ಜ್‌ಗೆ 100 ಕಿಮೀ ರೇಂಜ್ ನೀಡುತ್ತದೆ. ಹಾಗೆಯೇ ಪ್ಲಾಸ್ಮಾ XR ಇವಿ ಸ್ಕೂಟರ್ 1500W ಮೋಟಾರ್‌ನಿಂದ ಚಾಲಿತವಾಗಿದ್ದು, 60 km/h ಗರಿಷ್ಠ ವೇಗ ಮತ್ತು ಸಿಂಗಲ್ ಚಾರ್ಜ್‌ನಲ್ಲಿ 100 km ವರೆಗೆ ರೇಂಜ್ ನೀಡುತ್ತದೆ.

ಇನ್ನು ಬಿಝಿನೆಸ್ X ಇವಿ ಸ್ಕೂಟರ್ 1200W ಮೋಟಾರ್ ಹೊಂದಿದ್ದು, 60 km/h ಗರಿಷ್ಠ ವೇಗ ಮತ್ತು 110 km ರೇಂಜ್ ನೀಡುತ್ತದೆ. ಕೊನೆಯದಾಗಿ ಬಿಝಿನೆಸ್ XP ಮಾಡೆಲ್ 1200W ಮೋಟಾರ್ ಹೊಂದಿದ್ದು, 45 km/h ಗರಿಷ್ಠ ವೇಗ ಮತ್ತು 135 km ರೇಂಜ್ ನೀಡುತ್ತದೆ. ಈ ಮಾದರಿಗಳನ್ನು ಭಾರತೀಯ ಪ್ರಯಾಣಿಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
ಕ್ವಾಂಟಮ್ ಎನರ್ಜಿಯ ಶೋರೂಮ್‌ಗಳು ಸಮಗ್ರ 3S (ಮಾರಾಟ, ಸೇವೆ ಮತ್ತು ಬಿಡಿಭಾಗಗಳು) ಸೌಲಭ್ಯಗಳನ್ನು ಹೊಂದಿದ್ದು, ಆಸಕ್ತ ಖರೀದಿದಾರರು ಕ್ವಾಂಟಮ್ ಎನರ್ಜಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪರೀಕ್ಷಾ ಸವಾರಿಯನ್ನು ನಿಗದಿಪಡಿಸಬಹುದು. ಭಾರತದಾದ್ಯಂತ ಕಂಪನಿಯ ಯಾವುದೇ ಶೋರೂಮ್‌ಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








