Honda: ನಿನ್ನೆಯಷ್ಟೆ ಬಿಡುಗಡೆಯಾದ ಹೋಂಡಾ ಡಿಯೋ 125 ಸ್ಕೂಟರ್ ವಿಶೇಷತೆಗಳು!
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ, ತನ್ನ 2025 ರ ಹೊಸ ಡಿಯೋ ಸ್ಕೂಟರ್ 125 ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಹೋಂಡಾ ಕಂಪನಿಯು ಡಿಯೋದ ಐಕಾನಿಕ್ ವಿನ್ಯಾಸವನ್ನು ಹಾಗೆಯೇ ಉಳಿಸಿಕೊಂಡಿದ್ದು, ಕೆಲವು ಹೊಸ ಗ್ರಾಫಿಕ್ಸ್ ಜೊತೆಗೆ ಈಗ ಸ್ಪೋರ್ಟಿ ಮತ್ತು ಸ್ಟೈಲಿಶ್ ಸ್ಕೂಟರ್ ಆಗಿ ತನ್ನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಹಾಗೆಯೇ ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ನವೀಕರಿಸಿದೆ. ಹೊಸ 2025 ರ ಡಿಯೋ 125 ಸ್ಕೂಟರ್ ಅನ್ನು ಭಾರತದಾದ್ಯಂತದ ಹೋಂಡಾ ಡೀಲರ್ ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ.
ಕಳೆದ 21 ವರ್ಷಗಳಿಂದ ಟ್ರೆಂಡಿ ಮತ್ತು ವಿಶ್ವಾಸಾರ್ಹ ಮೋಟೋ - ಸ್ಕೂಟರ್ ಅನ್ನು ಹುಡುಕುತ್ತಿರುವ ಗ್ರಾಹಕರಿಗೆ ಇದು ನಿರಂತರವಾಗಿ ಮೊದಲ ಆಯ್ಕೆಯಾಗಿದೆ. ಡಿಯೋ ಭಾರತೀಯ ಮಾರುಕಟ್ಟೆಯಲ್ಲಿ ಅಪ್ರತಿಮ ಹೆಸರು, ಡಿಸೈನ್, ಪರ್ಫಾಮೆನ್ಸ್ ಮತ್ತು ನಂಬಿಕೆಯ ಸಂಕೇತವಾಗಿ ನಿಂತಿದೆ ಎಂದು ನಮ್ಮ ಗ್ರಾಹಕರಿಗೆ ಹೆಚ್ಚುವರಿ ಮೌಲ್ಯ ಮತ್ತು ಉತ್ಸಾಹದೊಂದಿಗೆ ಅದರ ಅಪ್ರತಿಮ ಪರಂಪರೆಯನ್ನು ಮುಂದುವರಿಸಲು ನಾವು ಉತ್ಸುಕರಾಗಿದ್ದೇವೆ.

ಹೊಸ ಒಬಿಡಿ 2 ಬಿ ಡಿಯೋ 125 ಬಿಡುಗಡೆಯೊಂದಿಗೆ, ಮೋಟೋ - ಸ್ಕೂಟರ್ ನ ಪ್ರಮುಖ ಪರಿಕಲ್ಪನೆಯನ್ನು ಹಾಗೆಯೇ ಉಳಿಸಿಕೊಂಡು ಇದೀಗ ಹೊಸ ಗ್ರಾಫಿಕ್ಸ್ ಹಾಗೂ ಫೀಚರ್ಸ್ ನವೀಕರಣದೊಂದಿಗೆ ಸ್ಕೂಟರ್ ಬಿಡುಗಡೆಯಾಗಿದೆ ಎಂದು ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಸುಟ್ಸುಮು ಒಟಾನಿ ಹೇಳಿದರು.
ಇದು ಮ್ಯಾಟ್ ಮಾರ್ವೆಲ್ ಇಂಪೀರಿಯಲ್ ರೆಡ್, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಬ್ಲೂ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಪರ್ಲ್ ಸ್ಪೋರ್ಟ್ಸ್ ಯೆಲ್ಲೋ, ಎಂಬ ಐದು ಬಣ್ಣಗಳಲ್ಲಿ ಗ್ರಾಹಕರು ಸ್ಕೂಟರ್ ಖರೀದಿಸಬಹುದು. ಹೊಸ ಫೀಚರ್ಸ್ ಬಗ್ಗೆ ಹೇಳುವುದಾದ್ರೆ, ಮೈಲೇಜ್, ಇಕೋ ಇಂಡಿಕೇಟರ್, ಟ್ರಿಪ್ ಮೀಟರ್, ರೇಂಜ್‌ಗಳಂತಹ ನೈಜ-ಸಮಯದ ಡೇಟಾದೊಂದಿಗೆ ಹೊಸ 4.2-ಇಂಚಿನ ಟಿಎಪ್‌ಟಿ ಡಿಸ್ಪ್ಲೇ ಹೊಸ ಸ್ಕೂಟರ್‌ನಲ್ಲಿ ಪ್ರಮುಖ ಸೇರ್ಪಡೆಗಳಾಗಿವೆ.

ಇದು ಉತ್ತಮ ಇಂಧನ ಮಿತವ್ಯಯಕ್ಕಾಗಿ ಐಡ್ಲಿಂಗ್ ಸ್ಟಾಪ್ ಸಿಸ್ಟಮ್ ಸಹ ಹೊಂದಿದೆ. ಅಲ್ಲದೆ ಕಾಲ್ / ಮೆಸೇಜ್ ನೋಟಿಫಿಕೇಷನ್‌ಗಳು ಮತ್ತು ನ್ಯಾವಿಗೇಷನ್ ನೀಡಲಾಗಿದೆ. ಇದರ ಜೊತೆಗೆ ಎಂಜಿನ್ ಸ್ಟಾರ್ಟ್ / ಸ್ಟಾಪ್ ಸಿಸ್ಟಮ್, ಸ್ಮಾರ್ಟ್ ಕೀ, ಯುಎಸ್‌ಬಿ ಟೈಪ್ - ಸಿ ಚಾರ್ಜರ್ ನಂತಹ ವೈಶಿಷ್ಟ್ಯಗಳು ಅನುಕೂಲತೆ ಮತ್ತು ಪರ್ಫಾಮೆನ್ಸ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಹೊಸ ಡಿಯೋ 125 ಸ್ಕೂಟರ್ 123.92 ಸಿಸಿ ಸಿಂಗಲ್ ಸಿಲಿಂಡರ್ ಪಿಜಿಎಂ-ಫೈ ಎಂಜಿನ್ ಹೊಂದಿದ್ದು, ಇದು 6.11 ಕಿಲೋವ್ಯಾಟ್ ಮತ್ತು 10.5 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಹೊಸ ಮಾದರಿಯು ಹೋಂಡಾ ರೋಡ್ ಸಿಂಕ್ ಅಪ್ಲಿಕೇಶನ್ ನೊಂದಿಗೆ ಹೊಂದಿಕೆಯಾಗುತ್ತದೆ.

ಒಟ್ಟಾರೆ ಯುವಕರ ಆದ್ಯತೆಗಳಿಗೆ ಅನುಗುಣವಾಗಿ ನವೀಕರಿಸಿದ ಡಿಯೋ 125 ಹೊಸ ಡಿಸೈನ್, ಆಕರ್ಷಕ ಫೀಚರ್‌ಗಳು ಮತ್ತು ಸುಧಾರಿತ ಮೈಲೇಜ್‌ನೊಂದಿಗೆ ಬರಲಿದೆ. ಇದು DLX ಹಾಗೂ H-ಸ್ಮಾರ್ಟ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಡಿಎಲ್ಎಕ್ಸ್ ಮಾದರಿಯು 96,749 ರೂ. ಹಾಗೂ ಎಚ್-ಸ್ಮಾರ್ಟ್ ಮಾದರಿಯು 1,02,144 ರೂ. (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications