ಬೆಂಗಳೂರಿನ River Indie ಇ-ಸ್ಕೂಟರ್‌ಗೆ ಭಾರೀ ಬೇಡಿಕೆ, ಮುಗುಬಿದ್ದ ಗ್ರಾಹಕರು.. 10,000 ಯುನಿಟ್ ಉತ್ಪಾದನೆ!

ಬೆಂಗಳೂರು ಮೂಲದ ರಿವರ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್ (River Mobility Private Limited), ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಇಂಡಿ (Indie) ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಈ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿ ಕಂಪನಿಯು ಹೊಸ ಇತಿಹಾಸವೊಂದನ್ನು ಬರೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ರಿವರ್ ಕಂಪನಿಯು ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ವಾರ್ಷಿಕ 1,00,000 ಯುನಿಟ್‌ ಸ್ಕೂಟರ್‌ಗಳನ್ನು ತಯಾರಿಸಬಹುದಾದ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದೆ. ಅಲ್ಲಿ ಆಗಸ್ಟ್ 25, 2023ರಲ್ಲಿ ಮೊದಲ 'ಇಂಡಿ' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಹೊರತಂದಿತ್ತು. ಇದೀಗ, 22 ತಿಂಗಳ ಬಳಿಕ 10,000ನೇ ಸ್ಕೂಟರ್‌ ಕಾರ್ಖಾನೆಯಿಂದ ಶೋರೂಂಗೆ ತಲುಪಲು ಸಿದ್ದವಾಗಿದೆ. ಈ ಮೂಲಕ ಕಂಪನಿಯು ಬಹುದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ.

River Indie Electric Scooter Achieve 10 000 Units Production Milestone Details

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿವರ್‌ನ ಸಹ ಸಂಸ್ಥಾಪಕ ಅರವಿಂದ್ ಮಣಿ ಅವರು, 'ಇಂದು 10,000ನೇ ಇಂಡಿ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕಾರ್ಖಾನೆಯಿಂದ ಹೊರತರುತ್ತಿರುವುದು ನಮಗೆ ತುಂಬಾ ಹೆಮ್ಮೆಯ ವಿಚಾರವಾಗಿದೆ. ಈ ಸಾಧನೆಯು ಇಂಡಿ ಇ-ಸ್ಕೂಟರ್‌ಗಿರುವ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ 2026ರ ಮಾರ್ಚ್ ಅಂತ್ಯದೊಳಗೆ 100ಕ್ಕೂ ಹೆಚ್ಚಿನ ಶೋರೂಂಗಳನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇವೆ' ಎಂದು ಹೇಳಿದ್ದಾರೆ.

ಪ್ರಸ್ತುತ ರಿವರ್ ಕಂಪನಿಯು ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್, ಕೊಚ್ಚಿ ಹಾಗೂ ವಿಶಾಖಪಟ್ಟಣ ಸೇರಿದಂತೆ 15 ಪ್ರಮುಖ ನಗರಗಳಲ್ಲಿ 27 ಶೋರೂಂಗಳನ್ನು ಹೊಂದಿದೆ. ಇದರೊಂದಿಗೆ ಕೆಲವೇ ದಿನಗಳ ಹಿಂದೆ ಪುಣೆ, ವಿಜಯವಾಡ ಹಾಗೂ ತಿರುವನಂತಪುರಂಗಳಲ್ಲಿಯೂ ಶೋರೂಂಗಳನ್ನು ಪ್ರಾರಂಭ ಮಾಡಿದೆ.

River Indie Electric Scooter Achieve 10 000 Units Production Milestone Details

ರಿವರ್ ಇಂಡಿ ಇ-ಸ್ಕೂಟರ್‌ ವಿಶೇಷತೆಗಳೇನು:

ಇದನ್ನು ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಸ್‌ಯುವಿ ಎಂದೇ ಬಣ್ಣಿಸಲಾಗಿದೆ. ಅದಕ್ಕೆ ತಕ್ಕಂತೆ ರೂ.1.44 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಸ್ಟಾರ್ಮ್ ಗ್ರೇ, ವಿಂಟರ್ ವೈಟ್, ಮಾನ್ಸೂನ್ ಬ್ಲೂ ಹಾಗೂ ಸ್ಪ್ರಿಂಗ್ ಯೆಲ್ಲೋ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯು ಸಿಗುತ್ತದೆ.

ಈ ರಿವರ್ ಇಂಡಿ ಇ-ಸ್ಕೂಟರ್‌ ಹೆಚ್ಚು ಶಕ್ತಿಯುತವಾದ 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. 161 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 6.7 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 26 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.

River Indie Electric Scooter Achieve 10 000 Units Production Milestone Details

ಇದು ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇಕೋ, ರೈಡ್ ಹಾಗೂ ರಶ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಹೊಂದಿದೆ. ಇದರಲ್ಲಿರುವ ಬ್ಯಾಟರಿ ಪ್ಯಾಕ್ ಶೇಕಡ 0 ರಿಂದ 80% ಚಾರ್ಜ್ ಆಗಲು 5 ಗಂಟೆ ತೆಗೆದುಕೊಳ್ಳುತ್ತದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳು ಹಾಗೂ ಸಿಬಿಎಸ್ (ಕಂಬೈನ್ಡ್ - ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಒಳಗೊಂಡಿದೆ.

ಒಟ್ಟಾರೆಯಾಗಿ, ರಿವರ್ ಇಂಡಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ. ಹೀಗಾಗಿ, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸ್ಕೂಟರ್‌ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡರೂ ಯಾವುದೇ ರೀತಿಯಲ್ಲಿ ಅಚ್ಚರಿಪಡಬೇಕಾಗಿಲ್ಲ.

Article Published On: Monday, June 30, 2025, 19:06 [IST]
English summary
River indie electric scooter achieve 10000 units production milestone details
Read more on india auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+