ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾಗಿದೆ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್: ಯಾವಾಗ, ವಿಶೇಷತೆಗಳೇನು?
ಭವಿಷ್ಯವು ಎಲೆಕ್ಟ್ರಿಕ್ ವಾಹನಗಳಿಗೆ ಪ್ರಮುಖ ವೇದಿಕೆಯಾಗಲಿದ್ದು, ಇದರ ಲಾಭವನ್ನು ಪಡೆಯಲು ಈಗಾಗಲೇ ಬಹುತೇಕ ಎಲ್ಲಾ ಬ್ರಾಂಡ್‌ಗಳು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವಲ್ಲಿ ನಿರತವಾಗಿವೆ. ರಾಯಲ್ ಎನ್‌ಫೀಲ್ಡ್ ಕೂಡ ತಮ್ಮ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆಗೆ ಸಜ್ಜಾಗಿದೆ. ತನ್ನ ಮೊದಲ ಇವಿ ಮಾದರಿಗಳಾದ ಫ್ಲೈಯಿಂಗ್ ಫ್ಲೀ ಸಿ6 ಮತ್ತು ಎಸ್6 (Flying Flea C6 and S6) ಅನ್ನು ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ವಿಭಾಗಕ್ಕೆ ಪ್ರವೇಶಿಸಲು ಸಜ್ಜಾಗಿದೆ. ಇವುಗಳ ಬಿಡುಗಡೆ ದಿನಾಂಕಗಳನ್ನು ಕಂಪನಿ ಇತ್ತೀಚೆಗಷ್ಟೆ ಘೋಷಿಸಿದೆ.
ಇವುಗಳ ಆಗಮನದ ನಿರ್ದಿಷ್ಟ ದಿನಾಂಕವನ್ನು ಇನ್ನೂ ದೃಢಪಡಿಸಲಾಗಿಲ್ಲ. ಆದರೆ 2026 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸಿ6 ಪಾದಾರ್ಪಣೆ ಮಾಡಲಿದೆ ಎಂದು ಕಂಪನಿ ಘೋಷಿಸಿದೆ. ನಮ್ಮ ಪ್ರಕಾರ 2026 ರ ಜನವರಿ-ಮಾರ್ಚ್ ನಡುವೆ ಈ ಇವಿ ಬೈಕ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈಗಾಗಲೇ ರಸ್ತೆಗಳಲ್ಲಿ ಟೆಸ್ಟಿಂಗ್ ಮಾಡುವಾಗ ಈ ಎರಡೂ ಮಾದರಿಗಳು ಹಲವು ಬಾರಿ ಕಾಣಿಸಿಕೊಂಡಿವೆ.

ಫ್ಲೈಯಿಂಗ್ ಫ್ಲೀ ಸಿ6, ಎಸ್6 ವಿಶೇಷತೆಗಳು: ಇದು ಆಫ್-ರೋಡ್ ಸಾಮರ್ಥ್ಯಕ್ಕಾಗಿ ವಿನ್ಯಾಸಗೊಳಿಸಲಾದ ಸ್ಕ್ರಾಂಬ್ಲರ್-ಪ್ರೇರಿತ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಆಗಿದೆ. ಇದು ಫ್ಲಾಟ್ ಸೀಟ್, ಲಾಂಗ್ ಟ್ರಾವೆಲ್ ಸಸ್ಪೆಂಷನ್ ಮತ್ತು ಡ್ಯುಯಲ್ ಪರ್ಪಸ್ ಟೈರ್ ಗಳೊಂದಿಗೆ ಬರಲಿದೆ. ಇದರ ವಿನ್ಯಾಸವು ವೈರ್-ಸ್ಪೋಕ್ ವೀಲ್‌ಗಳು, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಸ್ಲಿಮ್ ಸಿಂಗಲ್ ಸೀಟ್ ಅನ್ನು ಸಹ ಒಳಗೊಂಡಿದೆ.
ಇದು ಆಂತರಿಕವಾಗಿ ಅಭಿವೃದ್ಧಿಪಡಿಸಿದ ಆಪರೇಟಿಂಗ್ ಸಿಸ್ಟಮ್ ಹೊಂದಿರಲಿದ್ದು, ಕ್ವಾಲ್ಕಾಮ್ನ ಸ್ನಾಪ್‌ಡ್ರಾಗನ್ QWM2290 ಪ್ರೊಸೆಸರ್‌ನಲ್ಲಿ ಚಲಿಸುತ್ತದೆ. ಟ್ರಾಕ್ಷನ್ ಕಂಟ್ರೋಲ್ ಮತ್ತು ಕಾರ್ನರಿಂಗ್ ಎಬಿಎಸ್, 4 ಜಿ, ಬ್ಲೂಟೂತ್ ಮತ್ತು ವೈ-ಫೈ ಸಂಪರ್ಕ, ರೌಂಡ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಂತರ್ನಿರ್ಮಿತ ನ್ಯಾವಿಗೇಷನ್ ಮತ್ತು ಮೀಸಲಾದ ವಾಯಿಸ್ ಅಸಿಸ್ಟ್ ಬಟನ್ ಅನ್ನು ಸಹ ಹೊಂದಿರಲಿದೆ.

ಫ್ಲೈಯಿಂಗ್ ಫ್ಲೀ ಸಿ 6 ಅನ್ನು ಅಲ್ಯೂಮಿನಿಯಂ ಫ್ರೇಮ್ ನಲ್ಲಿ ನಿರ್ಮಿಸಲಾಗಿದ್ದು, ಮುಂಭಾಗದಲ್ಲಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಹೊಂದಿದೆ. ಇದರ ಬ್ಯಾಟರಿಯನ್ನು ಮೆಗ್ನೀಸಿಯಮ್ ನಿಂದ ಮುಚ್ಚಲಾಗಿದೆ. ಎರಡನೇ ಮಹಾಯುದ್ಧದ ಸಮಯದಲ್ಲಿ ರಾಯಲ್ ಎನ್‌ಫೀಲ್ಡ್ ಅಭಿವೃದ್ಧಿಪಡಿಸಿದ ಐತಿಹಾಸಿಕ ಮೋಟಾರ್ ಸೈಕಲ್‌ಗಳಂತೆ ವಿನ್ಯಾಸಗೊಳಿಸಲಾಗಿದೆ.
ವೃತ್ತಾಕಾರದ ಹೆಡ್ ಲ್ಯಾಂಪ್, ಟಿಯರ್ ಡ್ರಾಪ್ ಆಕಾರದ ಇಂಧನ ಟ್ಯಾಂಕ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಬೆಂಬಲಿಸುವ ಸಿಂಗಲ್ ವೃತ್ತಾಕಾರದ ಟಿಎಫ್‌ಟಿ ಡಿಸ್ ಪ್ಲೇಯೊಂದಿಗೆ ವಿಂಟೇಜ್ ನೋಟವನ್ನು ಹೊಂದಿದೆ. ಇದು ಸ್ಟ್ಯಾಂಡರ್ಡ್ ಆಗಿ ಸೋಲೋ ಸೀಟ್ ಅನ್ನು ಹೊಂದಿದೆ, ಬೇಕೆಂದವರಿಗೆ ಪಿಲಿಯನ್ ಸೀಟ್ ಆಯ್ಕೆಯನ್ನು ಕೂಡ ನೀಡಲಿದೆ.

ಒಟ್ಟಾರೆ ಎಲ್ಲಾ ಬ್ರಾಂಡ್‌ಗಳಂತೆ ರಾಯಲ್ ಎನ್‌ಫೀಲ್ಡ್ ಕೂಡ ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾಗಿಬಿಟ್ಟಿದೆ. ಬೈಕ್ ಬ್ಯಾಟರಿ, ರೇಂಜ್, ಚಾರ್ಜಿಂಗ್ ಕುರಿತ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಈಗಿನ ಯುವಜನರಿಗೆ ಬೇಕಾದ ಎಲ್ಲಾ ಫೀಚರ್ಸ್ ನೀಡಿ ಸದ್ಯದ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಯಲ್ಲಿ ಗಟ್ಟಿ ಪೈಪೋಟಿ ನೀಡಲು ರಾಯಲ್ ಎನ್‌ಫೀಲ್ಡ್ ಸಜ್ಜಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








