ರಸ್ತೆಗಳ ರಾಜ ರಾಯಲ್ ಎನ್‌ಫೀಲ್ಡ್ ಪ್ರಾಬಲ್ಯ: ಮಾರಾಟವಾದ ಬೈಕ್‌ಗಳ ಸಂಖ್ಯೆ ಕೇಳಿದ್ರೆ ಬೆಚ್ಚಿಬೀಳ್ತಿರಾ!

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದ್ದು, ಇದರ ಬೈಕ್ ಗಳು ದಾಖಲೆಯ ಮಾರಾಟವಾಗುತ್ತಿದೆ. ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಭರ್ಜರಿ ಮಾರಾಟವನ್ನು ವರದಿ ಮಾಡಿದೆ. 2024ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಒಟ್ಟು 79,466 ಬೈಕುಗಳನ್ನು ಮಾರಾಟ ಮಾಡಿವೆ. ಇನ್ನು ಕಳೆದ ವರ್ಷದ ಡಿಸೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.25 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ 11,575 ಬೈಕುಗಳನ್ನು ರಫ್ತು ಮಾಡಿದೆ.

ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 6,096 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು. ಕಳೆದ ತಿಂಗಳು ರಫ್ತಿನಲ್ಲೂ ಭಾರೀ ಏರಿಕೆಯನ್ನು ಕಂಡಿದೆ. 2024ರ ವರ್ಷದಲ್ಲಿ ರಾಯಲ್ ಎನ್‌ಫೀಲ್ಡ್ 7,27,077 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇನ್ನು 2023ರ ವರ್ಷದಲ್ಲಿ 6,85,059 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದನ್ನು ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಶೇ.6 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

Royal Enfield

ದೇಶೀಯ ಮಾರುಕಟ್ಟೆಯ ಮಾರಾಟದಲ್ಲಿ ಕ್ಲಾಸಿಕ್ 350 ಮತ್ತು ಅದರ ಇತ್ತೀಚಿನ ಹೊಸ ಬೈಕುಗಳು ಹೆಚ್ಚಿನ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ. ಜಾಗತಿಕ ವ್ಯಾಪ್ತಿಯನ್ನು ಹೆಚ್ಚಿಸಲು, ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಸಂಪೂರ್ಣ ಸ್ವಾಮ್ಯದ CKD ಅಸೆಂಬ್ಲಿ ಸೌಲಭ್ಯವನ್ನು ಭಾರತದ ಹೊರಗೆ ಥೈಲ್ಯಾಂಡ್‌ನ ಸಮುತ್ ಪ್ರಕಾನ್‌ನಲ್ಲಿ ಉದ್ಘಾಟಿಸಿತು. ಈ ಸ್ಥಾವರವು 57,000 ಚದರ ಅಡಿಗಳನ್ನು ವ್ಯಾಪಿಸಿದೆ ಮತ್ತು ವಾರ್ಷಿಕ 30,000 ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಇದು ಅರ್ಜೆಂಟೀನಾ, ಬ್ರೆಜಿಲ್ ಮತ್ತು ಕೊಲಂಬಿಯಾದಂತಹ ಮಾರುಕಟ್ಟೆಗಳಲ್ಲಿ ರಾಯಲ್ ಎನ್‌ಫೀಲ್ಡ್‌ನ ಅಸ್ತಿತ್ವದಲ್ಲಿರುವ CKD ಘಟಕಗಳನ್ನು ಸೇರುತ್ತದೆ. ವರ್ಷವು REOWN ಪೂರ್ವ-ಮಾಲೀಕತ್ವದ ಬೈಕ್ ಪ್ಲಾಟ್‌ಫಾರ್ಮ್‌ನ ವಿಸ್ತರಣೆಗೆ ಸಾಕ್ಷಿಯಾಗಿದೆ, ಇದು ಈಗ 24 ರಾಜ್ಯಗಳಾದ್ಯಂತ 475 ಡೀಲರ್‌ಶಿಪ್‌ಗಳೊಂದಿಗೆ 236 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಇಂಟರ್‌ಸೆಪ್ಟರ್ ಬೇರ್ 650, ಗೋನ್ ಕ್ಲಾಸಿಕ್ 650 ಮತ್ತು ಇತರವುಗಳನ್ನು ಒಳಗೊಂಡಂತೆ ಹೊಸ ಮೋಟಾರ್‌ಸೈಕಲ್‌ಗಳನ್ನು ತಂದಿತು.

ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು ಕೆಲವು ತಿಂಗಳುಗಳ ಹಿಂದೆ ಹೊಸ ಬೇರ್ 650 ಬೈಕ್ ಅನ್ನು ತಿಂಗಳು ಹಿಂಡೆ ಬಿಡುಗಡೆಗೊಳಿಸಿತು. ಈ ಇಂಟರ್‌ಸೆಪ್ಟರ್ 650 , ಕಾಂಟಿನೆಂಟಲ್ GT 650 , ಸೂಪರ್ Meteor 60 ನಂತರ 650 ಟ್ವಿನ್ ಪ್ಲಾಟ್‌ಫಾರ್ಮ್ ಆಧಾರಿಸಿರುವ ಹೊಸ ಬೇರ್ ಮಾದರಿಯು ಐದನೇ 650 cc ಬೈಕ್ ಆಗಿದೆ.

ರಾಯಲ್ ಎನ್‌ಫೀಲ್ಡ್ ಬೈಕ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕ್ ಮುಂಭಾಗದ ಯುಎಸ್‌ಡಿ ಫೋರ್ಕ್ ಸೆಟಪ್ ಅನ್ನು ಹೊಂದಿದ್ದರೆ, ಹಿಂಭಾಗದಲ್ಲಿ ಟ್ವಿನ್ ಶಾಕ್ ಗಳನ್ನು ಹೊಂದಿದೆ. ಇನ್ನು ಈ ಬೈಕ್ MRF ಅಭಿವೃದ್ಧಿಪಡಿಸಿದ ಡ್ಯುಯಲ್-ಪರ್ಪಸ್ ಟೈರ್‌ಗಳು ಹೆಚ್ಚು ಒರಟಾದ ನೋಟವನ್ನು ನೀಡುತ್ತದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಇನ್ನು ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸರಣಿಯಲ್ಲಿ ಹಲವಾರು ವಿಭಿನ್ನ ರೀತಿಯ ಬೈಕ್‌ಗಳಿವೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 (Royal Enfield Scram 440) ಬೈಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತು. ಈ ಹೊಸ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 440 ಬೈಕ್ ಮಾದರಿಯು ಸ್ಕ್ರಾಮ್ 411 ಮಾದರಿಯಿಂದ ಹಲವಾರು ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, January 3, 2025, 16:49 [IST]
English summary
Royal enfield sales in december 2024 details
Read more on royal enfield india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+