181 ಕಿ.ಮೀ ರೇಂಜ್.. ಹೊಸ 'Simple OneS' ಇ-ಸ್ಕೂಟರ್ ಬಿಡುಗಡೆ, ಭಾರೀ ವಿಶೇಷತೆಗಳಿವೆ.. ಬೆಲೆ ಇಷ್ಟೇನಾ?
ಬೆಂಗಳೂರು ಮೂಲದ ಸಿಂಪಲ್ ಎನರ್ಜಿ (Simple Energy) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಿಂಪಲ್ ಒನ್ (Simple One) ಹೆಸರಿನ ಇ-ಸ್ಕೂಟರ್‌ನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇದು ಹೆಚ್ಚು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವುದರಿಂದ ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಕಂಪನಿಯು ಹೊಚ್ಚ ಹೊಸ 'ಒನ್ಎಸ್' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ನೂತನ ಸಿಂಪಲ್ ಒನ್ಎಸ್ ಇ-ಸ್ಕೂಟರ್ (Simple OneS E-Scooter), ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ರೀತಿಯಲ್ಲಿರುವ ದ್ವಿಚಕ್ರ ವಾಹನವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದೆ. ರೂ.1,39,999 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದ್ದು, ದಿನನಿತ್ಯದ ಬಳಕೆಗೆ ಅತ್ಯುತ್ತಮವಾದ ಆಯ್ಕೆಯಾಗಲಿದೆ ಎಂದು ಹೇಳಬಹುದು.

ಈ ಸಿಂಪಲ್ ಒನ್ಎಸ್ ಎಲೆಕ್ಟ್ರಿಕ್ ಸ್ಕೂಟರ್ ಶಕ್ತಿಯುತವಾದ 3.7 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 181 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿ 8.5 ಕೆಡಬ್ಲ್ಯೂ ಮೋಟಾರ್‌ನ್ನು ಬಳಕೆ ಮಾಡಲಾಗಿದೆ. 105 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.
ಹೊಸ ಸಿಂಪಲ್ ಒನ್ಎಸ್ ಇ-ಸ್ಕೂಟರ್ ಕೇವಲ 2.55 ಸೆಕೆಂಡುಗಳಲ್ಲಿ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಇಕೋ (Eco), ರೈಡ್ (Ride), ಡ್ಯಾಶ್ (Dash) ಹಾಗೂ ಸೋನಿಕ್ (Sonic) ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಇದು 35 ಲೀಟರ್ ಸಾಮರ್ಥ್ಯದ ಅಂಡರ್-ಸೀಟ್ ಸ್ಟೋರೇಜ್ ಹೊಂದಿದ್ದು, ಸೀಟ್ ಹೈಟ್ 770 ಎಂಎಂ ಇದೆ.
ನೂತನ ಸಿಂಪಲ್ ಒನ್ಎಸ್ ಎಲೆಕ್ಟ್ರಿಕ್ ಸ್ಕೂಟರ್ ಹೊರಭಾಗದಲ್ಲಿ ಹೆಚ್ಚು ಸ್ಪೋಟಿಯಾಗಿರುವ ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಅಂಗುಲರ್ ಹೆಡ್‌ಲೈಟ್, ಸ್ಲೋಪಿಂಗ್ ಸೀಟ್ ಹಾಗೂ ಶಾರ್ಪ್ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಬ್ರೇಜನ್ ಬ್ಲಾಕ್, ಗ್ರೇಸ್ ವೈಟ್ ಹಾಗೂ ಅಜುರೆ ಬ್ಲೂ ಒಳಗೊಂಡಂತೆ ನಾಲ್ಕು ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.
ಈ ಒನ್ಎಸ್ ಇ-ಸ್ಕೂಟರ್ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬಹುಮುಖ್ಯವಾಗಿ 7-ಇಂಚಿನ ಟಚ್‌ಸ್ಕ್ರೀನ್ ಟಿಎಫ್‌ಟಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಫೈಂಡ್ ಮೈ ವೆಹಿಕಲ್, ರಾಪಿಡ್ ಬ್ರೇಕಿಂಗ್ ಸಿಸ್ಟಮ್, ವೈ-ಫೈ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಪಾರ್ಕ್ ಅಸಿಸ್ಟ್ ಫಂಕ್ಷನ್ ಮತ್ತು ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರು, ಪುಣೆ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣ, ಕೊಚ್ಚಿ ಹಾಗೂ ಮಂಗಳೂರಿನಲ್ಲಿರುವ ಕಂಪನಿಯ 15 ವಿವಿಧ ಶೋರೂಂಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಸಿಂಪಲ್ ಎನರ್ಜಿ ತಮಿಳುನಾಡಿನ ಹೊಸೂರಿನಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದ್ದು, ಅಲ್ಲಿ ವಾರ್ಷಿಕವಾಗಿ 1,50,000 ಯುನಿಟ್ ದ್ವಿಚಕ್ರ ವಾಹನಗಳನ್ನು ಸಿದ್ಧಪಡಿಸಬಹುದು. ಜೊತೆಗೆ 23 ರಾಜ್ಯಗಳಲ್ಲಿ 150 ಹೊಸ ಶೋರೂಂ ಹಾಗೂ 200 ಸರ್ವಿಸ್ ಸೆಂಟರ್‌ಗಳನ್ನು ತೆರೆಯಲು ಕೂಡ ಕಂಪನಿಯು ಉದ್ದೇಶಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








