ಕಣ್ಮರೆಯಾಗುತ್ತಿವೆ ಎಲೆಕ್ಟ್ರಿಕ್ ವಾಹನ ಕಂಪನಿಗಳು: ನೀವು ಈ ಬ್ರಾಂಡ್‌ನ ಸ್ಕೂಟರ್ ಖರೀದಿಸಿದ್ದಾರಾ?

ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆಗಾಗಿ (FAME-II) ಸರ್ಕಾರವು ಸಬ್ಸಿಡಿ ನೀಡಿ ಪ್ರೋತ್ಸಾಹಿಸಿತ್ತು. ಆದರೆ ಇದೀಗ ಸರ್ಕಾರ ನೀಡಿದ್ದ ಸಬ್ಸಿಡಿ ಗಡುವು ನಿಧಾನವಾಗಿ ಕಣ್ಮರೆಯಾಗುತ್ತಿದ್ದು, ಹಲವಾರು ಸಣ್ಣ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳು ಮಾರುಕಟ್ಟೆಯಿಂದ ವೇಗವಾಗಿ ಮರೆಯಾಗುತ್ತಿವೆ. ಬೆಲೆಗಳನ್ನು ಆಕರ್ಷಕವಾಗಿಡಲು ಸಬ್ಸಿಡಿಗಳನ್ನು ಹೆಚ್ಚು ಅವಲಂಬಿಸಿದ್ದ ಸಣ್ಣ ಕಂಪನಿಗಳಿಗೆ ಇದು ತೀವ್ರವಾಗಿ ಹೊಡೆತ ಬಿದ್ದಿದೆ. ಸಬ್ಸಿಡಿ ಕಡಿತವು ಹಲವು ಸವಾಲುಗಳನ್ನು ತಂದೊಡ್ಡಿದ್ದು, ಸಣ್ಣ ಎಲೆಕ್ಟ್ರಿಕ್ ಸ್ಕೂಟರ್ ತಯಾರಕರನ್ನು ಮಾರುಕಟ್ಟೆಯಿಂದ ಹೊರಬರಲು ಒತ್ತಾಯಿಸಬಹುದು ಎಂದು ಉದ್ಯಮ ತಜ್ಞರು ಹೇಳುತ್ತಿದ್ದಾರೆ.

ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಾಯರಕರಾದ 'ಒಕಿನಾವಾ ಆಟೋಟೆಕ್' 2023 ರಲ್ಲಿ ಸಬ್ಸಿಡಿಯೊಂದಿಗೆ ಗ್ರಾಹಕರಿಗೆ 31,618 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ 2024 ರಲ್ಲಿ ಕಡಿಮೆ ಸಬ್ಸಿಡಿಯೊಂದಿಗೆ ಈ ಮಾರಾಟವು 4,855 ಕ್ಕೆ ವಾರ್ಷಿಕ ಮಾರಾಟ ಕುಸಿದಿದೆ. ಈ ವರ್ಷ ಜುಲೈ ವರೆಗೆ ಕೇವಲ 1,422 ಯುನಿಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.

subsidy-unplugged-smaller-two-wheeler-ev-brands-in-trouble

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಒಡೆತನದಲ್ಲಿರುವ ಮತ್ತೊಂದು ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿರುವ 'ಆಂಪಿಯರ್', 2023 ರಲ್ಲಿ 66,958 ವಾಹನಗಳು, 2024 ರಲ್ಲಿ 36,148 ವಾಹನಗಳು ಹಾಗೂ 2025 ರಲ್ಲಿ ಇಲ್ಲಿಯವರೆಗೆ 26,963 ಯುನಿಟ್‌ ವಾಹನಗಳಿಗೆ ಇಳಿದಿದೆ. ಹಾಗೆಯೇ AMO ಮೊಬಿಲಿಟಿ ಕಂಪನಿಯು 2025 ರಲ್ಲಿ ಕೇವಲ 25 ವಾಹನಗಳನ್ನು ಮಾರಾಟ ಮಾಡಿದೆ.

ಕಾರಣವೇನು: FAME - II ನ ಭಾಗವಾಗಿರುವ ಹಂತ ಹಂತದ ಉತ್ಪಾದನಾ ಕಾರ್ಯಕ್ರಮ (PMP) ಅಡಿಯಲ್ಲಿ ಹಲವಾರು ಕಂಪನಿಗಳು ಸ್ಥಳೀಕರಣ ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಲೆಕ್ಕಪರಿಶೋಧನೆಗಳು ಕಂಡುಕೊಂಡ ನಂತರ, ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯವು ಸಬ್ಸಿಡಿಗಳ ಮೇಲಿನ ನಿರ್ಬಂಧವನ್ನು ಹೇರಿದ ನಂತರ ಈ ಕುಸಿತ ಸಂಭವಿಸಿದೆ.

subsidy-unplugged-smaller-two-wheeler-ev-brands-in-trouble

ಸರ್ಕಾರವು ಮರುಪಾವತಿಯನ್ನು ಕೋರಿತ್ತು, ಒಟ್ಟು ಸಾಲಗಳು 469 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ. ರಿವೋಲ್ಟ್, ಗ್ರೀವ್ಸ್ ಮತ್ತು AMO ಮೊಬಿಲಿಟಿ ಒಟ್ಟಾಗಿ 170 ಕೋಟಿ ರೂ.ಗಳನ್ನು ಹಿಂದಿರುಗಿಸಿವೆ. ಹೀರೋ ಎಲೆಕ್ಟ್ರಿಕ್, ಒಕಿನಾವಾ ಮತ್ತು ಬೆನ್ಲಿಂಗ್ ಸೇರಿದಂತೆ ಇತರ ಕಂಪನಿಗಳು ಕಾನೂನು ಮಾರ್ಗವನ್ನು ತೆಗೆದುಕೊಂಡಿವೆ.

ಈಗಾಗಲೇ ಕೆಲವು ಸಣ್ಣ ಕಂಪನಿಗಳು ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸಿವೆ, ಸಬ್ಸಿಡಿಗಳು ನಿಂತ ನಂತರ ಏಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆಗಳು ಒಟ್ಟಾರೆಯಾಗಿ 9,000 ಕೋಟಿ ರೂ.ಗಳಿಗಿಂತ ಹೆಚ್ಚು ನಷ್ಟ ಅನುಭವಿಸಿವೆ ಎಂಬ ವರದಿಗಳಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಬ್ಸಿಡಿಗಳನ್ನು ತೆಗೆದುಹಾಕುವುದರಿಂದ ಮಾರುಕಟ್ಟೆ ಅಲುಗಾಡುವಿಕೆಗೆ ಕಾರಣವಾಗಿದೆ.

subsidy-unplugged-smaller-two-wheeler-ev-brands-in-trouble

ಸಣ್ಣ EV ದ್ವಿಚಕ್ರ ವಾಹನ ಮಾರಾಟಗಾರರು ಸರ್ಕಾರದ ಬೆಂಬಲವಿಲ್ಲದೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ನಿರ್ಗಮಿಸುವಂತೆ ಒತ್ತಾಯಿಸಲ್ಪಡುತ್ತಿವೆ. ಸಬ್ಸಿಡಿ - ಮುಕ್ತ ಮಾರುಕಟ್ಟೆಯಲ್ಲಿ ಬದುಕುಳಿಯಲು ನಾವೀನ್ಯತೆ ಮತ್ತು ವೆಚ್ಚ - ದಕ್ಷತಾ ತಂತ್ರಗಳ ಮೂಲಕ ಹೊಂದಿಕೊಳ್ಳುತ್ತಿರುವ ದೊಡ್ಡ ಕಂಪನಿಗಳ ಸುತ್ತ ಉದ್ಯಮವು ಏಕೀಕರಣಗೊಳ್ಳುತ್ತಿದೆ ಎಂಬುದು ಸಾಭೀತಾಗಿದೆ.

ಟಿವಿಎಸ್ ಮೋಟಾರ್, ಬಜಾಜ್ ಆಟೋ, ಓಲಾ ಎಲೆಕ್ಟ್ರಿಕ್ ಮತ್ತು ಎಥರ್ ಎನರ್ಜಿ ಕಂಪನಿಗಳು ಬಲಿಷ್ಠ ಪೂರೈಕೆ ಸರಪಳಿಗಳು ಮತ್ತು ಹೆಚ್ಚಿನ ಗ್ರಾಹಕ ನಂಬಿಕೆಯಿಂದ ಈ ವಿಭಾಗದಲ್ಲಿ ತಮ್ಮ ಹಿಡಿತವನ್ನು ಉಳಿಸಿಕೊಂಡಿವೆ. ಅಗ್ರ ನಾಲ್ಕು ಬ್ರ್ಯಾಂಡ್‌ಗಳು ಈಗ EV ಮಾರುಕಟ್ಟೆಯ ಶೇ 80 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿವೆ. ಇದು ಸಣ್ಣ ಕಂಪನಿಗಳ ಮಾರುಕಟ್ಟೆ ನಿರ್ಗಮನವನ್ನು ಸೂಚಿಸುತ್ತದೆ.

Article Published On: Monday, July 14, 2025, 12:52 [IST]
English summary
Subsidy unplugged smaller two wheeler ev brands in trouble
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+