ಪಕ್ಕಾ ಫ್ಯಾಮಿಲಿ ಸ್ಕೂಟರ್: ಆಕ್ಟಿವಾಗೆ ಸರಿಯಾದ ಪ್ರತಿಸ್ಪರ್ಧಿ: 50 ಕಿ.ಮೀ ಮೈಲೇಜ್

ಪ್ರಸ್ತುತ ಯುವಜನತೆ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳ ಬದಲಾಗಿ ಪವರ್‌ಫುಲ್‌ ಎಂಜಿನ್‌ ಜೊತೆಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್‌ಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇವು ಗೇರ್‌ ಬದಲಿಸುವ ಮೋಟಾರ್‌ಸೈಕಲ್‌ಗಳಿಗಿಂತ ಆರಾಮದಾಯಕವಾದ ಚಾಲನಾ ಅನುಭವ ನೀಡುತ್ತವೆ. ಹಾಗೆಯೇ ಉತ್ತಮ ಪರ್ಫಾಮೆನ್ಸ್ ಕೂಡ ಇರುವುದರಿಂದ ನಗರದ ಟ್ರಾಫಿಕ್‌ ಜಾಮ್‌ಗಳಲ್ಲಿ ಉತ್ತಮವಾಗಿ ಓಡಿಸಬಹುದು. ಇಂತಹ ಸ್ಕೂಟರ್‌ಗಳಲ್ಲಿ ಕೆಲವೇ ಜನಪ್ರಿಯತೆ ಪಡೆದಿದ್ದು, ಅವುಗಳಲ್ಲಿ ಮುಖ್ಯವಾಗಿ ಸುಜುಕಿ ಆಕ್ಸೆಸ್ 125 ಸಿಸಿ ಸ್ಕೂಟರ್ ಬಗ್ಗೆ ಹೇಳಲೇಬೇಕು. ಇದು ಪಕ್ಕಾ ಫ್ಯಾಮಿಲಿ ಸ್ಕೂಟರ್ ಆಗಿದ್ದರೂ ಪರ್ಫಾಮೆನ್ಸ್ ವಿಷಯದಲ್ಲೂ ಹೇಳಿಮಾಡಿಸಿದಂತಿರುತ್ತದೆ.

ನಿರ್ವಹಣೆಯ ಸುಲಭತೆಯಿಂದ ಹಿಡಿದು ಅತ್ಯುತ್ತಮ ಮೈಲೇಜ್ ಮತ್ತು ದೈನಂದಿನ ಪ್ರಾಯೋಗಿಕತೆಯವರೆಗೆ, ಸುಜುಕಿ ಆಕ್ಸೆಸ್ 125 ಸಿಸಿ ಕುಟುಂಬ ಬಳಕೆಗೆ ಸೂಕ್ತವಾದ ಸ್ಕೂಟರ್ ಎಂದು ಸಾಬೀತಾಗಿದೆ. ಇದು ವಿಶ್ವಾಸಾರ್ಹ, ಸ್ಟೈಲಿಶ್, ವಿಶಾಲವಾದ ಮತ್ತು ಬಜೆಟ್ ಸ್ನೇಹಿಯಾಗಿದ್ದು, ಕುಟುಂಬದ ವ್ಯಕ್ತಿಯು ದ್ವಿಚಕ್ರ ವಾಹನದಲ್ಲಿ ಬಯಸುವ ಎಲ್ಲವನ್ನೂ ಹೊಂದಿದೆ.

suzuki-access-125-price-features-mileage-details

ಉತ್ತಮ ನಿರ್ಮಾಣ: ವ್ಯಾಪಕ ಸೇವಾ ಲಭ್ಯತೆ ಮತ್ತು ಕೈಗೆಟುಕುವ ಬಿಡಿಭಾಗಗಳು ಮತ್ತು ದೀರ್ಘಕಾಲೀನ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಕುಟುಂಬಕ್ಕೆ ಸೂಕ್ತವಾದ ಸ್ಕೂಟರ್ ಆಗಿ ಆಕ್ಸಿಸ್ ಗುರ್ತಿಸಿಕೊಂಡಿದೆ. ಬಾಳಿಕೆ ಮತ್ತು ಕಡಿಮೆ-ನಿರ್ವಹಣಾ ಯಂತ್ರಗಳಿಗೆ ಸುಜುಕಿಯ ಖ್ಯಾತಿಯು ಆಕ್ಸೆಸ್ 125 ಅನ್ನು ದೀರ್ಘಕಾಲ ಉಳಿಯುವಂತೆ ನಿರ್ಮಿಸಲಾಗಿದೆ.

ಪವರ್‌ಫುಲ್ ಎಂಜಿನ್ ಜೊತೆಗೆ ಮೈಲೇಜ್: ಸುಜುಕಿ ಆಕ್ಸೆಸ್ 125 ತನ್ನ ಪರ್ಫಾಮೆನ್ಸ್ ಹೊರತಾಗಿಯೂ, ಉತ್ತಮ ಮೈಲೇಜ್ ಕೂಡ ಹಿಂದಿರುಗಿಸುತ್ತದೆ. ಇದರ ರಿಫೈನ್ಡ್, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್, 8.7 ಬಿಹೆಚ್ ಪವರ್ ಮತ್ತು 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಸುಮಾರು 50-55 ಕಿ.ಮೀ / ಲೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

suzuki-access-125-price-features-mileage-details

ಪ್ರಾಯೋಗಿಕ ಸಂಗ್ರಹಣೆ: ಕುಟುಂಬ ಜನರಿಗೆ ಆಗಾಗ್ಗೆ ಸ್ಥಳಾವಕಾಶದ ಅಗತ್ಯವಿರುತ್ತದೆ, ಇದೇ ಕಾರಣಕ್ಕೆ ಆಕ್ಸೆಸ್ 125 ಐಚ್ಛಿಕ ಫ್ರಂಟ್ ಪಾಕೆಟ್ ಹಾಗೂ 21.8-ಲೀಟರ್ ಅಂಡರ್-ಸೀಟ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಇದು ಹೆಲ್ಮೆಟ್ ಅಥವಾ ದಿನಸಿ ವಸ್ತುಗಳನ್ನು ಹಿಡಿದಿಡುವಷ್ಟು ದೊಡ್ಡದಾಗಿದೆ. ಇವಿಷ್ಟೇ ಅಲ್ಲದೇ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಬಾಹ್ಯ ಇಂಧನ ಫಿಲ್ಲರ್ ಕ್ಯಾಪ್ ಅನ್ನು ಸಹ ಒಳಗೊಂಡಿದೆ.

ಆರಾಮದಾಯಕ ಸವಾರಿ: ಆಕ್ಸೆಸ್ 125 ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆಂಷನ್ ಉಬ್ಬುಗಳುಲ್ಲ ರಸ್ತೆಗಳಲ್ಲಿಯೂ ಉತ್ತಮವಾಗಿ ಸಾಗಬಲ್ಲದು. ದೊಡ್ಡ ಸೀಟ್ ಮತ್ತು ಉದ್ದವಾದ ವ್ಹೀಲ್ ಬೇಸ್ ನೊಂದಿಗೆ ನಿರ್ಮಿಸಲಾಗಿದೆ. ಹಾಗಾಗಿ ಪ್ರಯಾಣಿಕರಿಗೆ ಇದು ಅಸಮ ರಸ್ತೆಗಳಲ್ಲಿಯೂ ಸವಾರಿಯನ್ನು ಸುಗಮವಾಗಿಸುತ್ತದೆ. ಮುಖ್ಯವಾಗಿ ಸ್ಕೂಟರ್ ನಗರ ಪ್ರಯಾಣವನ್ನು ಸುಲಭವಾಗಿ ನಿರ್ವಹಿಸುತ್ತದೆ.

suzuki-access-125-price-features-mileage-details

ಆಕರ್ಷಕ ವಿನ್ಯಾಸ: ಆಕ್ಸೆಸ್ 125 ಕ್ರೋಮ್ ಫಿನಿಶ್‌ಗಳು, ರೆಟ್ರೋ-ಮಾಡರ್ನ್ ವಿನ್ಯಾಸ ಮತ್ತು ಅನೇಕ ಬಣ್ಣ ಆಯ್ಕೆಗಳೊಂದಿಗೆ ಸ್ಟೈಲಿಷ್ ಆಗಿ ಕಾಣುತ್ತದೆ. ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರನ್ನು ಆಕರ್ಷಿಸುವ ಸ್ಲಿಮ್ ಬಾಡಿ ಡಿಸೈನ್‌ ಹೊಂದಿದೆ. ಹಗುರವಾದ ಇದರ ತೂಕವು ಸುಲಭವಾಗಿ ಓಡಿಸಲು ಅನುವು ಮಾಡಿಕೊಡುವುದರಿಂದ ಮಹಿಳೆಯರಿಗೂ ಸೂಕ್ತ ಆಯ್ಕೆಯಾಗಿದೆ.

ಬೆಲೆ: ಸುಜುಕಿ ಆಕ್ಸೆಸ್ 125 ಸ್ಕೂಟರ್ ಮೂರು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರ ಬೆಲೆಯು ವೇರಿಯೆಂಟ್‌ಗೆ ತಕ್ಕಂತೆ ಬದಲಾಗುತ್ತದೆ. ಭಾರತದ ಎಕ್ಸ್ ಶೋರೂಂ ದರದಂತೆ ಆರಂಭಿಕ ಬೆಲೆಯು ರೂ.86,481ಗಳಾದರೆ, ಟಾಪ್ ಮಾದರಿಯ ಬೆಲೆಯು ರೂ.98,083ಗಳಾಗಿದೆ. ಇವು ಎಕ್ಸ್‌ ಶೋರೂಂ ಬೆಲೆಗಳು ಎಂಬುದನ್ನು ಗಮನಿಸಬೇಕು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 8, 2025, 18:30 [IST]
English summary
Suzuki access 125 price features mileage details
Read more on suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+