ಸದ್ದಿಲ್ಲದೆ ಬಿಡುಗಡೆಗೆ ಸಜ್ಜಾಗುತ್ತಿದೆ ಎಲೆಕ್ಟ್ರಿಕ್ ಸುಜುಕಿ ಆಕ್ಸೆಸ್: ವಿಶೇಷತೆಗಳೇನು?

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಾಗುತ್ತಿದ್ದು, ಹೊಸ ಕಂಪನಿಗಳಿಂದ ಹಲವು ಇವಿ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ಮೂಲಗಳ ಪ್ರಕಾರ, ಸುಜುಕಿ ಕೂಡ ತಮ್ಮ ಮೊದಲ ಇವಿಯನ್ನು ಈಗಾಗಲೇ ಸಿದ್ಧಪಡಿಸಿದೆ, ಇದನ್ನು ಜಪಾನ್‌ನ ಎಂಜಿನಿಯರ್‌ಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇ-ಆಕ್ಸೆಸ್ ಎಂದು ಕರೆಯಲಾಗುತ್ತದೆ. ಒಟ್ಟಾರೆ ಸ್ಟೈಲಿಂಗ್ ಮತ್ತು ಬಾಡಿ ಡಿಸೈನ್ ಇಂಧನ ಚಾಲಿತ ಆಕ್ಸಿಸ್ ಸ್ಕೂಟರ್ ಅನ್ನು ಹೋಲುತ್ತದೆ. ಪ್ರಸ್ತುತ, ಮೋಟಾರು ಸಾಮರ್ಥ್ಯ, ಬ್ಯಾಟರಿ ಮತ್ತು ರೈಡಿಂಗ್ ರೇಂಜ್ ಬಗ್ಗೆ ಒಂದಷ್ಟು ಮಾಹಿತಿ ಹೊರಬಿದ್ದಿದೆ.

ಸುಜುಕಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2025 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2025) ದಲ್ಲಿ ಅನಾವರಣಗೊಳಿಸಲಾಗಿತ್ತು. ಹೊಸ ಸುಜುಕಿ ಇ-ಆಕ್ಸೆಸ್ (Suzuki e-Access) ಸ್ಥಿರ ಬ್ಯಾಟರಿಯನ್ನು ಹೊಂದಿದ್ದು, ತೆಗೆದುಹಾಕಬಹುದಾದ ಬ್ಯಾಟರಿಗಳಿಗಿಂತ ಭಿನ್ನವಾಗಿ ಸ್ಕೂಟರ್ ಹೆಚ್ಚು ಅಂಡರ್‌ ಸೀಟ್ ಸ್ಟೋರೇಜ್ ಪಡೆದಿದೆ.

suzuki-e-access-launch-date-and-specs-details

ಹೊಸ ಮುಂಬರಲಿರುವ ಸುಜುಕಿ ಇ-ಆಕ್ಸೆಸ್ ಈ ವರ್ಷದ ಕೊನೆಯಲ್ಲಿ ರಸ್ತೆಗಿಳಿಯುವ ನಿರೀಕ್ಷೆಯಿದೆ. ಇದು ಟ್ಯೂಬ್ ಲೆಸ್ ಟೈರ್ ಗಳೊಂದಿಗೆ 12-ಇಂಚಿನ ಅಲಾಯ್ ವೀಲ್‌ಗಳು (ಮುಂಭಾಗ: 90/90-12, ಹಿಂಭಾಗ: 100/80-12 56J), ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಹೊಂದಿರಲಿದೆ. ಇ-ಆಕ್ಸೆಸ್ ಹೆಡ್ ಲೈಟ್, ಟೈಲ್ ಲೈಟ್ ಮತ್ತು ಡಿಆರ್‌ಎಲ್ ಎಲ್‌ಇಡಿ ಲೈಟಿಂಗ್ ನೊಂದಿಗೆ ಬರುತ್ತದೆ.

ಇದು 3.072 ಕಿಲೋವ್ಯಾಟ್ ಸಾಮರ್ಥ್ಯದೊಂದಿಗೆ 51.2 ವಿ ಲಿಥಿಯಂ ಐರನ್ ಫಾಸ್ಫೇಟ್ (ಎಲ್ಎಫ್ಪಿ) ಬ್ಯಾಟರಿಯನ್ನು ಹೊಂದಿದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 95 ಕಿ.ಮೀ ರೇಂಜ್ ನೀಡುತ್ತದೆ. ಇದರ ಮೋಟಾರ್ 4.1 ಕಿಲೋವ್ಯಾಟ್ ಪವರ್ ಮತ್ತು 15 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಆಫ್-ಬೋರ್ಡ್, ಸಿಂಗಲ್-ಫೇಸ್ ಎಸಿ ಚಾರ್ಜರ್ ನೊಂದಿಗೆ ಚಾರ್ಜಿಂಗ್ ಬಹುಮುಖವಾಗಿದೆ.

suzuki-e-access-launch-date-and-specs-details

ಈ ಸ್ಕೂಟರ್ ಇಕೋ, ರೈಡ್ ಎ ಮತ್ತು ರೈಡ್ ಬಿ ಎಂಬ 3 ರೈಡಿಂಗ್ ಮೋಡ್‌ಗಳನ್ನು ಸಹ ಹೊಂದಿದೆ. ಅದೇ ರೀತಿ ಫಾಸ್ಟ್ ಚಾರ್ಜರ್‌ನೊಂದಿಗೆ ಶೇ80 ರಷ್ಟು ಚಾರ್ಜ್ ಆಗಲು 1 ಗಂಟೆ 12 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ರೀತಿ ಫಾಸ್ಟ್ ಚಾರ್ಜರ್‌ನೊಂದಿಗೆ ಶೇ80 ರಷ್ಟು ಚಾರ್ಜ್ ಆಗಲು 1 ಗಂಟೆ 12 ನಿಮಿಷ ತೆಗೆದುಕೊಳ್ಳುತ್ತದೆ.

ಫೀಚರ್ಸ್ ವಿಷಯಕ್ಕೆ ಬಂದರೆ, ಆಯತಾಕಾರದ ಎಲ್ಇಡಿ ಹೆಡ್ ಲೈಟ್, ಡಿಆರ್‌ಎಲ್‌ಗಳು ಮತ್ತು ಟರ್ನ್-ಇಂಡಿಕೇಟರ್ ಗಳೊಂದಿಗೆ ಸ್ಟೈಲಿಷ್ ಆಗಿ ಕಾಣುತ್ತಿದೆ. ಹಾಗೆಯೇ ಸುಜುಕಿ ಇ-ಆಕ್ಸೆಸ್ ದೊಡ್ಡ ಅಂಡರ್ ಸೀಟ್ ಸ್ಟೋರೇಜ್, ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಕಾಲ್ / ಎಸ್ಎಂಎಸ್ ಎಚ್ಚರಿಕೆಯಂತ ಫೀಚರ್ಸ್ ಹೊಂದಿದೆ.

Take a Poll

ಒಟ್ಟಾರೆಯಾಗಿ, ಸುಜುಕಿ ಇ-ಆಕ್ಸೆಸ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ಸುಜುಕಿ ಈಗಾಗಲೇ ವಿಶ್ವಾಸಾರ್ಹ ಕಾರ್ಯಕ್ಷಮತೆ ಹೊಂದಿರುವ ಸ್ಕೂಟರ್‌ಗಳಿಗೆ ಖ್ಯಾತಿಯನ್ನು ಹೊಂದಿರುವುದರಿಂದ, ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರಕ್ಕೆ ಪ್ರವೇಶಿಸುವ ಮೂಲಕ ಬ್ರಾಂಡ್ ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವ ಸಾಧ್ಯತೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 15, 2025, 16:13 [IST]
English summary
Suzuki e access launch date and specs details
Read more on suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+