ಕೇವಲ 2.16 ಲಕ್ಷಕ್ಕೆ ಸುಜುಕಿಯ ಬಹುನಿರೀಕ್ಷಿತ ವಿ-ಸ್ಟ್ರೋಮ್ ಎಸ್ಎಕ್ಸ್ ಬೈಕ್ ಬಿಡುಗಡೆ
2025ರ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ (2025 Suzuki V-Strom SX) ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಹೊಸ ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.16 ಲಕ್ಷಗಳಾಗಿದೆ. ಸುಜುಕಿ ಕಂಪನಿಯು ಈ ಬೈಕ್ ಅನ್ನು ಚಾಂಪಿಯನ್ ಯೆಲ್ಲೋ ನಂ.2, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಸೊನೊಮಾ ರೆಡ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡುತ್ತಿದೆ. ಸದ್ಯ 2025ರ ವಿ-ಸ್ಟ್ರೋಮ್ ಎಸ್ಎಕ್ಸ್ ಬೈಕಿನ ಬುಕಿಂಗ್ ಪ್ರಾರಂಭವಾಗಿದ್ದು, ಶೀಘ್ರದಲ್ಲೇ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.
ಈ ಕ್ವಾರ್ಟರ್-ಲೀಟರ್ ಅಡ್ವೆಂಚರ್ ಟೂರಿಂಗ್ ಮೋಟಾರ್ ಸೈಕಲ್ ಈಗ ಒಬಿಡಿ 2 ಕಾಂಪ್ಲೈಂಟ್ ಆಗಿದ್ದು, 2024 ರ ಬೈಕ್‌ಗಿಂತ ರೂ.5,000 ದುಬಾರಿಯಾಗಿದೆ. ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ವಿ-ಸ್ಟ್ರೋಮ್ ಎಸ್ಎಕ್ಸ್ ಎಲ್ಇಡಿ ಹೆಡ್ಲೈಟ್ ಮತ್ತು ಟೈಲ್ ಲೈಟ್, ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಬ್ಲೂಟೂತ್ ಸಕ್ರಿಯಗೊಳಿಸಿದ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ ಬೈಕಿನ ಸವಾರಿ ಮತ್ತು ನಿರ್ವಹಣೆ ಸಹ ಸಾಕಷ್ಟು ಉತ್ತಮವಾಗಿದೆ. ಆರಾಮದಾಯಕ ಎರ್ಗೊನಾಮಿಕ್ಸ್ ಹೊಂದಿರುವ ಸಾಮರ್ಥ್ಯದ ಟೂರಿಂಗ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಜನಪ್ರಿಯತೆ ಪಡೆದಿದೆ. ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9,500 ಆರ್ ಪಿಎಂನಲ್ಲಿ 26.5 ಬಿಹೆಚ್ ಪಿ ಪವರ್ ಮತ್ತು 7,500 ಆರ್ ಪಿಎಂನಲ್ಲಿ 22.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅದರ ಸಂಸ್ಕರಣೆ ಮತ್ತು ಇಂಧನ ದಕ್ಷತೆಗೆ ಹೆಸರುವಾಸಿಯಾಗಿದೆ. ಇದು ಎತ್ತರದ ಮೋಟಾರ್‌ಸೈಕಲ್ ಆಗಿದ್ದು, ಆಫ್‌ರೋಡಿಂಗ್ ಮಾಡುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಭಾರತದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುವ ಸಾಧ್ಯತೆ ಇದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

ಸ್ಪೋರ್ಟಿ ಪಲ್ಸರ್ ಕೂಡ ಬಿಡುಗಡೆ: ಹೊಸ 2025 ಪಲ್ಸರ್ RS200 ಕೂಡ ಬಿಡುಗಡೆಯಾಗಿದೆ. 2015 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಈ ಬೈಕ್, ಇದೀಗ ಹೊಸ ಅಪ್‌ಡೇಟ್‌ಗಳನ್ನು ಪಡೆದು ಬಿಡುಗಡೆಯಾಗಿದೆ. ಈಗ ಮತ್ತಷ್ಟು ಸ್ಪೋರ್ಟಿಯಾಗಿರುವುದರಿಂದ ಬೆಲೆ ಕೂಡ ತುಸು ಹೆಚ್ಚಾಗಿದೆ. ಹೊಸ ಪಲ್ಸರ್ ಆರ್ಎಸ್ 200 ಬೆಲೆಯು 1,84,115 (ಎಕ್ಸ್‌ಶೋರೂಂ) ಇದೆ.
ಹಾಗೆಯೇ ಗ್ಲಾಸಿ ರೇಸಿಂಗ್ ರೆಡ್, ಪರ್ಲ್ ಮೆಟಾಲಿಕ್ ವೈಟ್ ಮತ್ತು ಆಕ್ಟಿವ್ ಸ್ಯಾಟಿನ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಮೋಟಾರ್‌ಸೈಕಲ್ ಫ್ಯೂಯಲ್-ಇಂಜೆಕ್ಟೆಡ್, ಸಿಂಗಲ್-ಸ್ಪಾರ್ಕ್, 4-ವಾಲ್ವ್ 199.5cc BSVI ಎಂಜಿನ್ ಹೊಂದಿದೆ. ಪ್ರಭಾವಶಾಲಿ 24.5 PS ಪವರ್ ಮತ್ತು 18.7 Nm ಟಾರ್ಕ್ ಅನ್ನು ಹೊರಹಾಕುತ್ತದೆ.

ಡ್ಯುಯಲ್ - ಚಾನೆಲ್ ABS, ಹೊಸ ಅಗಲವಾದ ಟೈರ್‌ಗಳು (140/70-17 ಹಿಂಭಾಗ ಮತ್ತು 110/70-17 ಮುಂಭಾಗ), ಮತ್ತು ಕಸ್ಟಮೈಸ್ ಮಾಡಬಹುದಾದ ರೋಡ್, ರೈನ್ ಮತ್ತು ಆಫ್‌ರೋಡ್ ಎಂಬ ರೈಡ್ ಮೋಡ್‌ಗಳನ್ನು ಹೊಂದಿದೆ. ಜೊತೆಗೆ RS200 ಅಸಾಧಾರಣ ಗ್ರಿಪ್, ಬ್ರೇಕಿಂಗ್ ಮತ್ತು ವಿವಿಧ ಭೂಪ್ರದೇಶಗಳಲ್ಲಿ ಸುರಕ್ಷತೆಯನ್ನು ನೀಡುತ್ತದೆ.
ಹೊಸ ಪಲ್ಸರ್ RS200 ಮೋಟಾರ್‌ಸೈಕಲ್‌ನಲ್ಲಿ ಬ್ಲೂಟೂತ್ - ಸಕ್ರಿಯಗೊಳಿಸಿದ ಬಂಧಿತ ಗಾಜಿನ (Bluetooth - enabled bonded glass) LCD ಪ್ಯಾನಲ್ ಹೊಂದಿದ್ದು, ಇದು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್ ಮತ್ತು SMS ಎಚ್ಚರಿಕೆಗಳು, ಗೇರ್ ಇಂಡಿಕೇಟರ್ ಸೇರಿದಂತೆ ಹೆಚ್ಚಿನ ವಿವರಗಳನ್ನು ತೋರಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








