ಭಾರತದ ಟಾಪ್-3 ಎಲೆಕ್ಟ್ರಿಕ್ ಸ್ಕೂಟರ್‌ಗಳು: ಫುಲ್ ಡಿಮ್ಯಾಂಡ್, 150+ ಕಿ.ಮೀ ರೇಂಜ್!

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ, ಈ ಹಿಂದೆ ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ವಿಶ್ವಾಸ ಕಳೆದುಕೊಂಡಿದ್ದ ಇವಿಗಳು ಈಗ ಮತ್ತೆ ಅಬ್ಬರಿಸುತ್ತಿವೆ. ಸದ್ಯ ದೇಶದಲ್ಲಿ ಬೆಂಕಿ ಅವಘಡಗಳು ಬಹುತೇಕ ನಿಂತಿದೆ. ನಿಧಾನವಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಜನರಲ್ಲಿ ವಿಶ್ವಾಸ ಗಳಿಸುತ್ತಿದ್ದು, ಮಾರಾಟದಲ್ಲಿ ಏರಿಕೆಯಾಗಿದೆ. ದ್ವಿಚಕ್ರ ವಾಹನ ಇವಿ ವಿಭಾಗವು ಗಮನಾರ್ಹವಾಗಿ ಸ್ಪರ್ಧಾತ್ಮಕವಾಗಿ ಬೆಳೆದಿದೆ. ಸದ್ಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಬೆಸ್ಟ್‌ ರೇಂಜ್ ನೀಡುವ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳಿವೆ. ಇವು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ.ಗಿಂತ ಹೆಚ್ಚಿನ ರೇಂಜ್ ನೀಡುತ್ತವೆ.

ಬಜಾಜ್ ಚೇತಕ್ 35 ಸೀರಿಸ್: 2025ರ ಬಜಾಜ್ ಚೇತಕ್ 35 ಸರಣಿಯ ಸ್ಕೂಟರ್ 3.5 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದ್ದು, ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.20 ಲಕ್ಷಗಳಾಗಿದೆ. ಇದರ 950-ವ್ಯಾಟ್ ಆನ್ಬೋರ್ಡ್ ಚಾರ್ಜರ್ನೊಂದಿಗೆ ಕೇವಲ ಮೂರು ಗಂಟೆಗಳಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ 153 ಕಿ.ಮೀ ಓಡಿಸಬಹುದು. ಇದರ ಟಾಪ್ ಸ್ಪೀಡ್ 73 ಕಿ.ಮೀ. ಇದೆ.

top-3-electric-scooters-with-best-range-ola-chetak-simple-one

ಸಿಂಪಲ್ ಒನ್: ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಸಿಂಪಲ್ ಎನರ್ಜಿಯು, ತನ್ನ ಸಿಂಪಲ್ ಒನ್ ಎಂಬ ಸ್ಕೂಟರ್ ಅನ್ನು ಹೊಂದಿದೆ. ಇದು ದೈನಂದಿನ ಅಗತ್ಯ ವಸ್ತುಗಳನ್ನು ಸಾಗಿಸಲು ವಿಶಾಲವಾದ 30 ಲೀಟರ್ ಅಂಡರ್‌ಸೀಟ್ ಸ್ಟೋರೇಜ್ ಹೊಂದಿದೆ. ಎಲ್ಇಡಿ ಲೈಟ್ ಸೆಟಪ್, 7 ಇಂಚಿನ ಟಿಎಫ್‌ಟಿ ಟಚ್ಸ್ಕ್ರೀನ್, ಬ್ಲೂಟೂತ್ ಕನೆಕ್ಟಿವಿಟಿಯಂತಹ ಫೀಚರ್ಸ್ ಹೊಂದಿದೆ.

ಹೊಸ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.66 ಲಕ್ಷಗಳಾಗಿದೆ. ಸ್ಕೂಟರ್ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಇದು 8.5 ಕಿಲೋವ್ಯಾಟ್ ಮೋಟರ್ ನೊಂದಿಗೆ ಬರುತ್ತದೆ. 5.0 ಕಿಲೋವ್ಯಾಟ್ ಬ್ಯಾಟರಿಯನ್ನು ಎರಡು ಪ್ಯಾಕ್‌ಗಳಾಗಿ ವಿಂಗಡಿಸಲಾಗಿದ್ದು, ಒಂದು ಸ್ಥಿರವಾಗಿದ್ದರೇ ಮತ್ತೊಂದನ್ನು ತೆಗೆದುಹಾಕಬಹುದು. ಒಟ್ಟಾರೆ ಒಮ್ಮೆ ಚಾರ್ಜ್ ಮಾಡಿದರೆ 212 ಕಿ.ಮೀ ಓಡಿಸಬಹುದು.

top-3-electric-scooters-with-best-range-ola-chetak-simple-one

ಓಲಾ ಎಸ್ 1 ಪ್ರೊ: ಓಲಾ ಎಸ್ 1 ಪ್ರೊ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.35 ಲಕ್ಷಗಳಾಗಿದ್ದು, ಸದ್ಯ ಭಾರತದಲ್ಲಿ ಅತಿಹೆಚ್ಚು ಮಾರಾಟ ಕಾಣುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್‌ನಲ್ಲಿ ರಿಜನರೇಟಿವ್ ಬ್ರೇಕಿಂಗ್, ಗೂಗಲ್ ಮ್ಯಾಪ್ಸ್ ಕನೆಕ್ಟಿವಿಟಿ, ಪಾರ್ಟಿ ಮೋಡ್, ಮಲ್ಟಿಪಲ್ ಟ್ರಾಕ್ಷನ್ ಕಂಟ್ರೋಲ್ ಮೋಡ್‌ಗಳು ಮತ್ತು ಬ್ಲೂಟೂತ್ ಇಂಟಿಗ್ರೇಷನ್ ಜೊತೆಗೆ ನಾಲ್ಕು ರೈಡಿಂಗ್ ಮೋಡ್‌ಗಳಿವೆ.

ಹೊಸ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4 ಕಿಲೋವ್ಯಾಟ್ ಬ್ಯಾಟರಿ ಅಳವಡಿಸಲಾಗಿದ್ದು, ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದ್ರೆ 195 ಕಿ.ಮೀ ರೇಂಜ್ ನೀಡುತ್ತದೆ. ದೈನಂದಿನ ಪ್ರಯಾಣಕ್ಕೆ ಇದು ಅತ್ಯುತ್ತಮ ಆಯ್ಕೆಯಾಗಿದೆ. 805 ಎಂಎಂ ಸೀಟ್ ಎತ್ತರ ಮತ್ತು 12 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿರುವ ಎಸ್ 1 ಪ್ರೊ ಭಾರತದಲ್ಲಿ ಅತ್ಯುತ್ತಮ ಮಾರಾಟ ಕಾಣುತ್ತಿದೆ.

top-3-electric-scooters-with-best-range-ola-chetak-simple-one

ಮೇಲಿನ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇಂಧನ ಚಾಲಿತ ವಾಹನಗಳಿಗೆ ಪ್ರತಿಸ್ಪರ್ಧಿಯಾಗುವ ಮಟ್ಟಕ್ಕೆ ಬಂದಿವೆ. ತ್ವರಿತ ತಾಂತ್ರಿಕ ಪ್ರಗತಿ ಮತ್ತು ನಾವೀನ್ಯತೆಗೆ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದಾಗಿ ದ್ವಿಚಕ್ರ ವಾಹನ ಇವಿ ವಿಭಾಗವು ಗಮನಾರ್ಹವಾಗಿ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, January 15, 2025, 10:00 [IST]
English summary
Top 3 electric scooters with best range ola chetak simple one
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+