ಅಲಾಯ್ ವೀಲ್ ಪಡೆದಿರುವ 5 ಪಾಪ್ಯುಲರ್ 125 ಸಿಸಿ ಬೈಕ್‌ಗಳು.. 71 Km ವರೆಗೆ ಮೈಲೇಜ್.. ಬೆಲೆ ಇಷ್ಟೇನಾ?
ಈಚೆಗೆ ಸ್ಟೈಲಿಶ್ ಅಲಾಯ್ ವೀಲ್‌ಗಳನ್ನು ಹೊಂದಿರುವ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇಂತಹ ಬೈಕ್‌ಗಳು ಕಡಿಮೆ ತೂಕವನ್ನು ಹೊಂದಿದ್ದು, ಉತ್ತಮವಾದ ಇಂಧನ ದಕ್ಷತೆಯನ್ನು ಒದಗಿಸಬಲ್ಲವು. ನೀವು ಕೂಡ ಅಲಾಯ್ ವೀಲ್‌ಗಳಿರುವ 125 ಸಿಸಿ ಮೋಟಾರ್‌ಸೈಕಲ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಟಿವಿಎಸ್ ರೈಡರ್ 125, ಬಜಾಜ್ ಪಲ್ಸರ್ 125, ಹೋಂಡಾ ಎಸ್‌ಪಿ 125, ಹೀರೋ ಗ್ಲಾಮರ್ ಹಾಗೂ ಬಜಾಜ್ ಪಲ್ಸರ್ ಎನ್125 ಅತ್ಯುತ್ತಮವಾದ ಆಯ್ಕೆಯಾಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
ಟಿವಿಎಸ್ ರೈಡರ್ 125 (TVS Raider 125):
ಇದೊಂದು ವಿಶ್ವಾಸಾರ್ಹ ಬೈಕ್ ಆಗಿದೆ. ರೂ.84,450 ರಿಂದ ರೂ.95,900 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಲು ಸಾಧ್ಯವಾಗಲಿದೆ. ಅತ್ಯುತ್ತಮ ವಿನ್ಯಾಸವನ್ನು ಪಡೆದಿದೆ. ವಿಕೆಡ್ ಬ್ಲ್ಯಾಕ್, ಬ್ಲೇಜಿಂಗ್ ಬ್ಲೂ, ನಾರ್ಡೊ ಗ್ರೇ & ಫಿಯರಿ ಯೆಲ್ಲೋ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,326 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ರೈಡರ್ 125' ಮೋಟಾರ್‌ಸೈಕಲ್ 124.8-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 71 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್‌ಸಿಡಿ/ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್ & ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸವಾರರ ರಕ್ಷಣೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಬಜಾಜ್ ಪಲ್ಸರ್ 125 (Bajaj Pulsar 125):
ಇದು ಜನಪ್ರಿಯ ಬೈಕ್ ಎಂದೇ ಮನೆ ಮಾತಾಗಿದೆ. ರೂ.85,633 (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಜನರಿಗೆ ಬೆಸ್ಟ್ ಚಾಯ್ಸ್ ಆಗಲಿದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾವನ್ನು ಒಳಗೊಂಡಿದೆ. ಬ್ಲ್ಯಾಕ್-ಗ್ರೀನ್, ಬ್ಲ್ಯಾಕ್-ಬ್ಲೂ, ಬ್ಲ್ಯಾಕ್-ಸಿಲ್ವರ್, ರೆಡ್ ಕಾರ್ಬನ್ ಫೈಬರ್ ಹಾಗೂ ಬ್ಲ್ಯೂ ಕಾರ್ಬನ್ ಫೈಬರ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,320 ಎಂಎಂ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ 'ಪಲ್ಸರ್ 125' ಮೋಟಾರ್‌ಸೈಕಲ್, 124.4-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 55 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್ ಡಿಜಿಟಲ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಂತಹ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಹೋಂಡಾ ಎಸ್‌ಪಿ 125 (Honda SP 125):
ಈ ಬೈಕ್‌ನ್ನು ಖರೀದಿದಾರರು ಮೆಚ್ಚಿಕೊಂಡಿದ್ದಾರೆ. ರೂ.93,965 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 123.94-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 63 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ & ಸೈಲೆಂಟ್ ಸ್ಟಾರ್ಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಹೀರೋ ಗ್ಲಾಮರ್ ಎಕ್ಸ್‌ಟೆಕ್ (Hero Glamour XTEC):
ಇದೊಂದು ಪ್ರಖ್ಯಾತ ಮೋಟಾರ್‌ಸೈಕಲ್ ಆಗಿದೆ. ರೂ.84,106 ರಿಂದ ರೂ.88,346 (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 124.7-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 60 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.

ಬಜಾಜ್ ಪಲ್ಸರ್ ಎನ್125 (Bajaj Pulsar N125):
ಈ ಬೈಕ್‌ನ್ನು ಯುವ ಗ್ರಾಹಕರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ರೂ.91,692 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 124.58-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 58 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಕನ್ಸೋಲ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.


Click it and Unblock the Notifications








