ಹೊಸ ಸ್ಕೂಟರ್ ಖರೀದಿಸುತ್ತಿದ್ದೀರಾ? ಸದ್ಯ ಬೆಸ್ಟ್ ಮೈಲೇಜ್ ನೀಡುವ ಸ್ಕೂಟರ್‌ಗಳು!
ಭಾರತದಲ್ಲಿ ದ್ವಿಚಕ್ರ ವಾಹನಗಳಿಲ್ಲದೆ ದಿನ ಮುಗಿಯುವುದಿಲ್ಲ, ಅದೆಷ್ಟೋ ಮಂದಿ ಸ್ಕೂಟರ್, ಬೈಕ್‌ಗಳನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಸ್ವಿಗ್ಗಿ, ಝೊಮ್ಯಾಟೊ, ರಾಪಿಡೊನಂತಹ ಕೆಲಸಗಳಿಗೆ ತಮ್ಮ ದ್ವಿಚಕ್ರ ವಾಹನಗಳನ್ನು ಬಳಸಿ ಹಣ ಸಂಪಾದಿಸುತ್ತಿದ್ದಾರೆ. ಇವರು ಮಾತ್ರವಲ್ಲ, ಸಾಮಾನ್ಯ ಜನರಿಗು ಕೂಡ ನಿತ್ಯ ಜೀವನದಲ್ಲಿ ದ್ವಿಚಕ್ರ ವಾಹನಗಳು ಅಷ್ಟೇ ಮುಖ್ಯವಾಗಿಬಿಟ್ಟಿವೆ. ಪ್ರತಿಯೊಬ್ಬರು ಮೈಲೇಜ್ ಹೆಚ್ಚಾಗಿ ನೀಡುವ ಸ್ಕೂಟರ್ ಅಥವಾ ಬೈಕ್‌ಗಳನ್ನು ಹೆಚ್ಚಾಗಿ ಪರಿಗಣಿಸುತ್ತಿದ್ದಾರೆ. ಬನ್ನಿ ಹಾಗಾದ್ರೆ ಭಾರತದಲ್ಲಿ ಬೆಸ್ಟ್ ಮೈಲೇಜ್ ನೀಡುವ ಅಗ್ಗದ ಸ್ಕೂಟರ್‌ಗಳ ಬಗ್ಗೆ ತಿಳಿಯೋಣ.
ಸ್ಕೂಟರ್‌ಗಳು ಅನುಕೂಲತೆ ಮತ್ತು ಮೈಲೇಜ್‌ನಿಂದಾಗಿ ಅನೇಕರಿಗೆ ಆದ್ಯತೆಯ ಆಯ್ಕೆಯಾಗಿ ಮುಂದುವರೆದಿವೆ. ತಂತ್ರಜ್ಞಾನದ ಪ್ರಗತಿ ಮತ್ತು ಕಠಿಣ ಕಾರ್ಬನ್ ಹೊರಸೂಸುವಿಕೆಯ ಮಾನದಂಡಗಳೊಂದಿಗೆ, ಗ್ರಾಹಕರ ನಿರೀಕ್ಷೆಗಳನ್ನು ತಲುಪುವ ಒಂದಷ್ಟು ಸ್ಕೂಟರ್‌ಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಸುಜುಕಿ, ಹೋಂಡಾ, ಯಮಹಾ, ಟಿವಿಎಸ್, ಹೀರೋ ಬ್ರಾಂಡ್‌ಗಳ ವಾಹನಗಳು ಈ ವಿಭಾಗದಲ್ಲಿ ಮಿಂಚುತ್ತಿವೆ.

ಹೋಂಡಾ ಆಕ್ಟಿವಾ 6ಜಿ: ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ ಮುಂದುವರಿಯುತ್ತಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಇದರ ಆನ್ ರೋಡ್ ಬೆಲೆಯು ರೂ. 97,558 ದಿಂದ ಆರಂಭವಾಗುತ್ತದೆ. ಪ್ರತಿ ಲೀಟರ್‌ಗೆ 60 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೋಂಡಾ ಕಂಪನಿ ಹೇಳಿಕೊಂಡಿದೆ.
ಸುಜುಕಿ ಆಕ್ಸೆಸ್ 125: ಸುಜುಕಿ ಆಕ್ಸಿಸ್ ಸ್ಕೂಟರ್ ಬೆಂಗಳೂರಿನಲ್ಲಿ ಇದರ ಆನ್ ರೋಡ್ ಬೆಲೆಯು ರೂ. 1,03,929 ನಿಂದ ಆರಂಭವಾಗುತ್ತದೆ. ತನ್ನ ಸ್ಟೈಲಿಶ್ ವಿನ್ಯಾಸದೊಂದಿಗೆ 125 ಸಿಸಿ ವಿಭಾಗದಲ್ಲಿ ಉತ್ತಮ ಪರ್ಫಾಮೆನ್ಸ್ ಸ್ಕೂಟರ್ ಎಂಬ ಖ್ಯಾತಿ ಪಡೆದಿದೆ. ಈ ಸ್ಕೂಟರ್ ಪ್ರತಿ ಲೀಟರ್‌ಗೆ 64 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ತಿಳಿಸಿದೆ.

ಯಮಹಾ ಫ್ಯಾಸಿನೊ 125: ಬೆಂಗಳೂರಿನಲ್ಲಿ ಯಮಹಾ ಫ್ಯಾಸಿನೊ 125 ಆನ್ ರೋಡ್ ಬೆಲೆಯು ರೂ. 1,04,179 ನಿಂದ ಆರಂಭವಾಗುತ್ತದೆ. ಯಮಹಾ ಫ್ಯಾಸಿನೊ 125 ಸ್ಕೂಟರ್ ಪ್ರತಿ ಲೀಟರ್‌ಗೆ 68 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮೂಲಕ 125 ಸ್ಕೂಟರ್ ವಿಭಾಗದಲ್ಲಿ ಮೈಲೇಜ್ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ.
ಹೀರೋ ಪ್ಲೆಷರ್ ಪ್ಲಸ್: ಈ ಸ್ಕೂಟರ್ ಹೀರೋನ ಪ್ರಮುಖ ಸ್ಕೂಟರ್ ಆಗಿದ್ದು, ಗ್ರಾಹಕರಿಗೆ ಮತ್ತೊಂದು ಜನಪ್ರಿಯ ಆಯ್ಕೆಯಾಗಿದೆ. ಬೆಂಗಳೂರಿನಲ್ಲಿ ಇದರ ಆನ್‌ರೋಡ್ ಬೆಲೆಯು ರೂ. 1,00,082 ನಿಂದ ಆರಂಬವಾಗುತ್ತದೆ. ಇದು ಪ್ರತಿ ಲೀಟರ್‌ಗೆ ಸರಿಸುಮಾರು 63 ಕಿ.ಮೀ ಮೈಲೇಜ್ ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

ಟಿವಿಎಸ್ ಜುಪಿಟರ್: ಟಿವಿಎಸ್ ಕಂಪನಿಯು ಸ್ಕೂಟರ್ ವಿಭಾಗದಲ್ಲಿ ಇತರ ಬ್ರಾಂಡ್‌ಗಳಂತೆಯೇ ಜುಪಿಟರ್‌ನೊಂದಿಗೆ ಉತ್ತಮ ಮಾರಾಟವನ್ನು ಕಾಣುತ್ತಿದೆ. ಪ್ರತಿ ಲೀಟರ್‌ಗೆ 62 ಕಿ.ಮೀ ಮೈಲೇಜ್ ನೀಡುವುದಾಗಿ ಟಿವಿಎಸ್ ಮೋಟಾರ್ಸ್ ಕ್ಲೈಮ್ ಮಾಡಿದೆ. ಬೆಂಗಳೂರಿನಲ್ಲಿ ಇದರ ಆನ್ ರೋಡ್ ಬೆಲೆಯು ರೂ. 96,757 ನಿಂದ ಆರಂಭವಾಗುತ್ತದೆ.
ದ್ವಿಚಕ್ರ ವಾಹನ ಮಾರುಕಟ್ಟೆಯ ಬೆಳವಣಿಗೆಗೆ ಸ್ಕೂಟರ್‌ಗಳು ಗಮನಾರ್ಹ ಕೊಡುಗೆ ನೀಡಿವೆ. ಕಾರು, ಬೈಕ್ ಅಥವಾ ಸ್ಕೂಟರ್ ಯಾವುದೇ ವಾಹನವಾಗಿರಲಿ ಮೈಲೇಜ್ ಎಂಬ ಅಂಶ ಭಾರತೀಯ ಖರೀದಿದಾರರಿಗೆ ಪ್ರಮುಖ ಪರಿಗಣನೆಯಾಗಿದೆ. ಇದರ ಜೊತೆಗೆ ಸುಧಾರಿತ ತಂತ್ರಜ್ಞಾನದೊಂದಿಗೆ ಹೊಸ ಮಾದರಿಗಳ ಪರಿಚಯ, ಮಹಿಳಾ ಖರೀದಿದಾರರ ಹೆಚ್ಚಳ, ಗ್ರಾಮೀಣ ಆರ್ಥಿಕ ಬೆಳವಣಿಗೆ ಇವೆಲ್ಲವೂ ಸದ್ಯ ಸ್ಕೂಟರ್ ಮಾರಾಟದಲ್ಲಿನ ಏರಿಕೆಗೆ ಕಾರಣವಾಗಿವೆ ಎಂದು ಹೇಳಬಹುದು.


Click it and Unblock the Notifications