ಯುವಕರ ಹಾಟ್ ಫೇವರೆಟ್: ಟ್ರಯಂಫ್ ಸ್ಪೀಡ್ 400 VS ಕೆಟಿಎಂ 390 ಡ್ಯೂಕ್... ಯಾವುದು ಬೆಸ್ಟ್?
ಭಾರತದ ಮಧ್ಯಮ ಸಾಮರ್ಥ್ಯದ ನೇಕೆಡ್ ಬೈಕ್ ವಿಭಾಗದಲ್ಲಿ ಟ್ರಯಂಫ್ ಸ್ಪೀಡ್ 400 ಮತ್ತು ಕೆಟಿಎಂ 390 ಡ್ಯೂಕ್ ಎರಡು ಭರ್ಜರಿ ಪೈಪೋಟಿಯೊಂದಿಗೆ ಮುನ್ನುಗ್ಗುತ್ತಿರುವ ಮೋಟಾರ್ ಸೈಕಲ್‌ಗಳಾಗಿವೆ. ಎರಡೂ ಆಧುನಿಕ ವಿನ್ಯಾಸ, ಹೈ-ಪರ್ಫಾಮೆನ್ಸ್ ಮತ್ತು ದೈನಂದಿನ ಬಳಕೆಗೆ ಯುವಕರಿಗೆ ಸೂಕ್ತ ಆಯ್ಕೆಗಳಾಗಿವೆ. ಆದರೆ ಸ್ಪೀಡ್ 400 ಸಮತೋಲನ ಮತ್ತು ಸೌಕರ್ಯ ಹೊಂದಿರುವ ಹೆಚ್ಚು ಸಂಯಮದ ರೋಡ್‌ಸ್ಟರ್ ವಿನ್ಯಾಸ ಹೊಂದಿದ್ದರೆ, 390 ಡ್ಯೂಕ್ ಉತ್ಸಾಹಭರಿತ ಸವಾರಿ ಅನುಭವ ನೀಡುವ ಹೆಚ್ಚು ಆಕ್ರಮಣಕಾರಿ ಮೋಟಾರ್‌ಸೈಕಲ್ ಆಗಿದೆ. ಹಾಗಾದ್ರೆ ಎರಡರಲ್ಲಿ ಯಾವುದು ಬೆಸ್ಟ್? ಎಂಬುದನ್ನು ತಿಳಿಯಲು ಇಲ್ಲಿ ಹೋಲಿಕೆ ಮಾಡಿದ್ದೇವೆ.
ವಿನ್ಯಾಸ: ಟ್ರಯಂಫ್ ಸ್ಪೀಡ್ 400 ಸ್ಟೈಲಿಂಗ್‌ಗೆ ಸಂಬಂಧಿಸಿದಂತೆ, ದುಂಡಗಿನ ಹೆಡ್‌ಲೈಟ್, ಟಿಯರ್‌ಡ್ರಾಪ್ ಆಕಾರದ ಇಂಧನ ಟ್ಯಾಂಕ್ ಮತ್ತು ಸ್ಲಿಮ್ ಟೈಲ್ ವಿಭಾಗವು ಆಧುನಿಕ-ರೆಟ್ರೊ ವಿನ್ಯಾಸವನ್ನು ಹೊಂದಿದೆ. ಉತ್ತಮ ಸೌಕರ್ಯಕ್ಕಾಗಿ ಟ್ರಯಂಫ್ ಹೆಚ್ಚಿನ ಫೋಮ್ ಅನ್ನು ಸೇರಿಸುವ ಮೂಲಕ ಸೀಟಿನಲ್ಲಿ ಬದಲಾವಣೆಗಳನ್ನು ಮಾಡಿದೆ. ಸೀಟ್ ಎತ್ತರವು ಈಗ 803mm ಗೆ ಹೆಚ್ಚಿಸಲಾಗಿದೆ. ಹೊಂದಾಣಿಕೆ ಮಾಡಬಹುದಾದ ಲಿವರ್‌ಗಳು ಸಹ ಇವೆ.

ಹೊಸ 390 ಡ್ಯೂಕ್ ಮೊದಲಿಗಿಂತ ಅಗಲವಾಗಿ ಕಾಣುವ LED ಹೆಡ್‌ಲೈಟ್, ಬೂಮರಾಂಗ್-ಆಕಾರದ DRL ಗಳು ಹೆಚ್ಚು ಆಕ್ರಮಣಕಾರಿಯಾಗಿ ಕಾಣುತ್ತವೆ. ಇಂಧನ ಟ್ಯಾಂಕ್ ಶ್ರೌಡ್‌ಗಳು ಆಕರ್ಷಕವಾಗಿದ್ದು, ಟ್ಯಾಂಕ್ ವಿನ್ಯಾಸವನ್ನು ಸಹ ಬದಲಾಯಿಸಲಾಗಿದೆ. ಇದು ಹೊಸ ಸ್ಪ್ಲಿಟ್-ಸೀಟ್ ಸೆಟಪ್ ಮತ್ತು ಹಿಂಭಾಗದ ಸಬ್-ಫ್ರೇಮ್ ತೆರೆದಿರುತ್ತದೆ. ಒಟ್ಟಾರೆಯಾಗಿ ಹೊಸ KTM 390 ಡ್ಯೂಕ್ ಹಿಂದೆಂದಿಗಿಂತಲೂ ಹೆಚ್ಚು ಸ್ಪೋರ್ಟಿಯಾಗಿ ಕಾಣುತ್ತದೆ.
ಬೆಲೆ: ಟ್ರಯಂಫ್ ಸ್ಪೀಡ್ 400 ಬೇಸ್ ವೇರಿಯೆಂಟ್ ಮಾಡಲ್ ಬೆಲೆಯು ರೂ. 2,33,945 (ಎಕ್ಸ್ - ಶೋರೂಂ) ರಿಂದ ಪ್ರಾರಂಭವಾಗುತ್ತದೆ. ಇತ್ತ ಕೆಟಿಎಂ 390 ಡ್ಯೂಕ್ ವಿಷಯಕ್ಕೆ ಬಂದರೆ ಬೇಸ್ ವೇರಿಯೆಂಟ್ ಬೆಲೆ ರೂ. 2,98,291 (ಎಕ್ಸ್ - ಶೋರೂಂ) ರಿಂದ ಪ್ರಾರಂಭವಾಗುತ್ತದೆ. ಬೆಲೆ ವಿಷಯದಲ್ಲಿ ಹೋಲಿಕೆ ಮಾಡಿದರೆ ಟ್ರಯಂಫ್ ಸ್ಪೀಡ್ 400 ತುಸು ಅಗ್ಗವಾಗಿ ಸಿಗುತ್ತದೆ.

ಎಂಜಿನ್: ಟ್ರಯಂಫ್ ಸ್ಪೀಡ್ 400 ಮೋಟಾರ್‌ಸೈಕಲ್ 398.15cc, ಸಿಂಗಲ್ - ಸಿಲಿಂಡರ್ ಲಿಕ್ವಿಡ್ - ಕೂಲ್ಡ್ BS6 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 8,000rpm ನಲ್ಲಿ 39.5 bhp ಪವರ್ ಮತ್ತು 6,500rpm ನಲ್ಲಿ 37.5 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಟಾರ್ಕ್-ಅಸಿಸ್ಟ್ ಕ್ಲಚ್ ಪಡೆದಿದೆ.
ಹೊಸ 390 ಡ್ಯೂಕ್ ದೊಡ್ಡದಾದ 399cc, ಸಿಂಗಲ್ - ಸಿಲಿಂಡರ್, ಲಿಕ್ವಿಡ್ - ಕೂಲ್ಡ್ BS6 ಎಂಜಿನ್ ಹೊಂದಿದೆ. ಈ ಎಂಜಿನ್ 8500rpm ನಲ್ಲಿ 44.25bhp ಪವರ್ ಮತ್ತು 6500rpm ನಲ್ಲಿ 39Nm ಟಾರ್ಕ್ ಹೊರಹಾಕುತ್ತದೆ. ಇದು ಆಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ಪರ್ ಕ್ಲಚ್ ಮತ್ತು ಕ್ವಿಕ್‌ಶಿಫ್ಟರ್ ಅನ್ನು ಸಹ ಹೊಂದಿದೆ.

ಹೆಚ್ಚವರಿ ವಿಶೇಷತೆಗಳು: ಕೆಟಿಎಂ 390 ಡ್ಯೂಕ್ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ. 168.3 ಕೆಜಿ ತೂಗುತ್ತದೆ ಮತ್ತು 15 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ. ಟ್ರಯಂಫ್ ಸ್ಪೀಡ್ 400 ಮೋಟಾರ್‌ಸೈಕಲ್ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳೊಂದಿಗೆ, ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಬರುತ್ತದೆ. 179 ಕೆ.ಜಿ ತೂಗುತ್ತದೆ ಮತ್ತು 13 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಬೆಲೆಗೆ ತಕ್ಕ ಪರ್ಫಾಮೆನ್ಸ್ ಬೈಕ್ ಬೇಕೆಂದರೆ ಟ್ರಯಂಫ್ ಸ್ಪೀಡ್ 400 ನೋಡಬಹುದು. ಇದು ಆಧುನಿಕ ರೆಟ್ರೊ ಮೋಟಾರ್‌ಸೈಕಲ್ ಆಗಿದ್ದು, ರೋಡ್‌ಸ್ಟರ್ ವಿನ್ಯಾಸ ಮತ್ತು ಬೆಲೆಗೆ ತಕ್ಕ ಫೀಚರ್‌ಗಳನ್ನು ಹೊಂದಿದೆ. ಮತ್ತೊಂದೆಡೆ ಕೆಟಿಎಂ 390 ಡ್ಯೂಕ್ ಅತ್ಯಂತ ಶಕ್ತಿಶಾಲಿ ಬೈಕ್ ಆಗಿದ್ದು, ಇದು ಭಾರತದಲ್ಲಿ ಡ್ಯೂಕ್ ಶ್ರೇಣಿಯ ಮೇಲ್ಭಾಗದಲ್ಲಿದೆ. ಅತ್ಯಂತ ಪವರ್‌ಫುಲ್ ಸ್ಪೋರ್ಟಿ ಬೈಕ್ ಬೇಕೆಂದರೆ ಕೆಟಿಎಂ 390 ಡ್ಯೂಕ್ ಬೆಸ್ಟ್ ಆಯ್ಕೆಯಾಗಿದೆ.


Click it and Unblock the Notifications








