TVS Jupiter CNG: ಜುಪಿಟರ್ CNG ಸ್ಕೂಟರ್ ವಿಶೇಷತೆಗಳು: ಮೈಲೇಜ್ ಕೇಳಿ ಸ್ಪ್ಲೆಂಡರ್‌ಗೆ ನಡುಕ!

ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಜುಪಿಟರ್ ಸಿಎನ್‌ಜಿ ಸ್ಕೂಟರ್ (TVS Jupiter CNG Scooter) ಅನ್ನು ಟಿವಿಎಸ್ ಮೋಟಾರ್‌ ಕಂಪನಿಯು ಕೊನೆಗೂ ಅನಾವರಣಗೊಳಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಆಟೋ ಎಕ್ಸ್‌ಪೋ 2025 (Auto Expo 2025) ರಲ್ಲಿ ಟಿವಿಎಸ್ ಕಂಪನಿಯು ಅಧಿಕೃತವಾಗಿ ಪ್ರದರ್ಶನಕ್ಕೆ ಇಟ್ಟಿದೆ. ಜುಪಿಟರ್ ಸಿಎನ್‌ಜಿ ಮಾದರಿಯು ಪೆಟ್ರೋಲ್ ಚಾಲಿತ ಜುಪಿಟರ್ 125 ಸ್ಕೂಟರ್‌ನಂತೆಯೇ ಇದೆ. ಆದರೆ ಪೆಟ್ರೋಲ್‌ ಟ್ಯಾಂಕ್‌ ಜಾಗದಲ್ಲಿ ಸಿಎನ್‌ಜಿ ಟ್ಯಾಂಕ್ ಅಳವಡಿಕೆಗೆ ಮಾತ್ರ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಉಳಿದಂತೆ ವಿನ್ಯಾಸ, ವೈಶಿಷ್ಟ್ಯ, ಡಿಸೈನ್ ಎಲ್ಲವೂ ಹಾಗೆಯೇ ಇದೆ.

ಹೊಸ ಜುಪಿಟರ್ 125 ಸಿಎನ್‌ಜಿ ಸ್ಕೂಟರ್ ಕಾನ್ಸೆಪ್ಟ್ ಹಂತದಲ್ಲಿದ್ದು, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇನ್ನು ಹೊರಬಿಟ್ಟಿಲ್ಲ. ಈಗಾಗಲೇ ಸಿಎನ್‌ಜಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಬಜಾಜ್ ಫ್ರೀಡಂ ಬೈಕ್ ಬಿಡುಗಡೆಯಾಗಿದೆ. ಇದರ ನಂತರ ಸ್ಕೂಟರ್ ವಿಭಾಗದಲ್ಲಿ ಜುಪಿಟರ್ ಎಂಟ್ರಿ ಕೊಟ್ಟಿದ್ದು, ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿದೆ.

tvs-jupiter-cng-scooter-top-things-you-should-now

ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಟಿವಿಎಸ್ ಜುಪಿಟರ್ ಸಿಎನ್‌ಜಿ ಟ್ಯಾಂಕ್ ಅನ್ನು 1.4 ಕೆ.ಜಿ ತುಂಬಿಸಬಹುದಾದ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಜುಪಿಟರ್ ಸಿಎನ್‌ಜಿ ಒಂದು ಕೆ.ಜಿ ಸಿಎನ್‌ಜಿ ತುಂಬಿದರೆ ಬರೋಬ್ಬರಿ 84 ಕಿ.ಮೀ ಮೈಲೇಜ್ ನಿಡುವುದಾಗಿ ಕಂಪನಿ ಹೇಳಿದೆ. ವಿಶೆಷತೆ ಏನೆಂದರೆ ಸಿಎನ್‌ಜಿ ಜೊತೆಗೆ ಪೆಟ್ರೋಲ್‌ ಟ್ಯಾಂಕ್‌ ಕೂಡ ನೀಡಲಾಗಿದೆ.

ಹೌದು, ಒಂದು ವೇಳೆ ಸಿಎನ್‌ಜಿ ಖಾಲಿಯಾದಲ್ಲಿ ಪೆಟ್ರೋಲ್‌ ತುಂಬಲು ಇದರಲ್ಲಿ ಸಿಎನ್‌ಜಿ ಟ್ಯಾಂಕ್‌ ಜೊತೆಗೆ 2 ಲೀಟರ್‌ನ ಪೆಟ್ರೋಲ್‌ ಟ್ಯಾಂಕ್‌ ಕೂಡ ನೀಡಲಾಗಿದೆ. ಈ ಮೂಲಕ ಪೆಟ್ರೋಲ್‌ನಲ್ಲಿಯೂ ಸ್ಕೂಟರ್ ಓಡಲಿದೆ. ಒಮ್ಮೆ ಎರಡೂ ಟ್ಯಾಂಕ್‌ಗಳನ್ನು ಸಂಪೂರ್ಣವಾಗಿ ತುಂಬಿಸಿದರೆ 226 ಕಿ.ಮೀ ಮೈಲೇಜ್ ಪಡೆಯಬಹುದು ಎಂದು ಟಿವಿಎಸ್ ಕಂಪನಿ ಹೇಳಿದೆ.

tvs-jupiter-cng-scooter-top-things-you-should-now

ಟಿವಿಎಸ್ ಮೋಟಾರ್' ಸಿಎನ್‌ಜಿ ಟ್ಯಾಂಕ್ ಅನ್ನು ಸಾಮಾನ್ಯ ಜುಪಿಟರ್ 125 ನಲ್ಲಿ ಕಾಣುವ ಅಂಡರ್ ಸೀಟ್ ಬೂಟ್ ಸ್ಥಳದಲ್ಲಿ ಇರಿಸಲಾಗಿದೆ. ಸಿಎನ್‌ಜಿ ಪ್ರೆಶರ್ ಗೇಜ್ ಅನ್ನು ತೋರಿಸಲು ಐಲೆಟ್ ಮತ್ತು ಅದರ ಸುತ್ತಲೂ ಫಿಲ್ಲರ್ ನಾಜಿಲ್ ಅನ್ನು ಅಳವಡಿಸಲಾಗಿದೆ. ಒಟ್ಟಾರೆ ಬೂಟ್ ಜಾಗವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿರುವ ಟಿವಿಎಸ್ ಕಂಪನಿಯು ಟ್ಯಾಂಕ್ ಅನ್ನು ಪ್ಲಾಸ್ಟಿಕ್ ಪ್ಯಾನಲ್‌ನಿಂದ ಮುಚ್ಚಿದೆ.

ಮುಂಬರಲಿರುವ ಟಿವಿಎಸ್ ಜುಪಿಟರ್ ಸಿಎನ್‌ಜಿ ಸ್ಕೂಟರ್ ಎಂಜಿನ್‌ ವಿಷಯಕ್ಕೆ ಬಂದರೆ, ಇದು 5.3Kw ಪವರ್ ಹಾಗೂ 9.4Nm ಪೀಕ್‌ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸಂಪೂರ್ಣ OBD2B ಮಾನದಂಡಗಳಿಗೆ ಅನುಸಾರವಾಗಿ ನವೀಕರಣಗೊಂಡ 124.8cc ಎಂಜಿನ್‌ ಅನ್ನು ಹೊಂದಿದೆ ಎಂದು ಟಿವಿಎಸ್ ಮೋಟಾರ್ ತಿಳಿಸಿದೆ.

tvs-jupiter-cng-scooter-top-things-you-should-now

ಹೊಸ ಟಿವಿಎಸ್ ಜುಪಿಟರ್ ಸಿಎನ್‌ಜಿ ಸ್ಕೂಟರ್ ಗಂಟೆಗೆ 84 ಕಿ.ಮೀ ಟಾಪ್‌ ಸ್ಪೀಡ್ ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಕಾನ್ಸೆಪ್ಟ್ ಮಾಡಲ್‌ ಆಗಿ ಪ್ರದರ್ಶಿಸಲಾಗಿದ್ದರೂ, ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿ ಸದ್ಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಸ್ಕೂಟರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 20, 2025, 13:48 [IST]
English summary
Tvs jupiter cng scooter top things you should now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+