90 ಕಿ.ಮೀ ಮೈಲೇಜ್ ನೀಡುವ ಸ್ಕೂಟರ್ ಬಿಡುಗಡೆ ಸಜ್ಜು! ಹೋಂಡಾ ಆಕ್ಟಿವಾ ಕಥೆ ಮುಗೀತಾ?
ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತುಂಬಾ ಜನಪ್ರಿಯತೆ ಪಡೆದಿರುವ ಸ್ಕೂಟರ್‌ಗಳಲ್ಲಿ ಟಿವಿಎಸ್ ಬ್ರಾಂಡ್‌ನ 'ಜುಪಿಟರ್' ಕೂಡ ಒಂದು. ಹೋಂಡಾ ಆಕ್ಟೀವಾ ಹಾಗೂ ಸುಜುಕಿ ಆಕ್ಸಿಸ್ ನಂತಹ ಬಲಿಷ್ಟ ಪ್ರತಿಸ್ಪರ್ಧಿಗಳಿಗೆ ನೇರ ಪೈಪೋಟಿ ನೀಡುತ್ತಾ ಪ್ರತಿ ತಿಂಗಳು ಉತ್ತಮ ಮಾರಾಟ ಕಾಣುತ್ತಿದೆ. ಕಳೆದ ಅಕ್ಟೋಬರ್ ತಿಂಗಳ ಮಾರಾಟ ವಿಷಯಕ್ಕೆ ಬಂದರೆ ಟಿವಿಎಸ್ ಜುಪಿಟರ್ ಕಂಪನಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಅಕ್ಟೋಬರ್‌ನಲ್ಲಿ ದೀಪಾವಳಿ ಹಾಗೂ ದಸರಾ ಹಬ್ಬಗಳಲ್ಲಿ ಗ್ರಾಹಕರು ಮುಗಿಬಿದ್ದು ಈ ಸ್ಕೂಟರ್ ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಮಾರಾಟವು 1 ಲಕ್ಷ ಯೂನಿಟ್‌ಗಳನ್ನು ದಾಟಿದೆ.
ಅಕ್ಟೋಬರ್ 2025 ರ ಟಿವಿಎಸ್ ಜುಪಿಟರ್ ಸ್ಕೂಟರ್ ಮಾರಾಟ ವರದಿಯನ್ನು ಪ್ರಮುಖ ಆಟೋಮೋಟಿವ್ ಸುದ್ದಿಸಂಸ್ಥೆಯಾದ 'ರಷ್‌ಲೇನ್' ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ ಟಿವಿಎಸ್ ಕಂಪನಿಯು ಅಕ್ಟೋಬರ್ 2025 ರಲ್ಲಿ ಬರೋಬ್ಬರಿ 1,18,888 ಜುಪಿಟರ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಒಂದು ತಿಂಗಳಲ್ಲಿ 1.8 ಲಕ್ಷ ವಾಹನ ಮಾರಾಟವನ್ನು ದಾಟಿರುವುದು ಕಂಪನಿಗೆ ಹಿಂದೆಂದಿಗಿಂತ ಅತ್ಯಧಿಕವಾಗಿದೆ.

ಹೌದು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಕಂಪನಿಯು ಕಡಿಮೆ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲೂ 1 ಲಕ್ಷ ವಾಹನ ಮಾರಾಟ ದಾಟಿತ್ತಾದರೂ, ಕೇವಲ 1,09,702 ವಾಹನಗಳನ್ನಷ್ಟೆ ಮಾರಾಟ ಮಾಡಲಾಗಿತ್ತು. ಅಂದರೆ ಅಕ್ಟೋಬರ್ 2025 ರಲ್ಲಿ 9,186 ಹೆಚ್ಚು ಟಿವಿಎಸ್ ಜುಪಿಟರ್ ಸ್ಕೂಟರ್‌ಗಳು ಮಾರಾಟವಾಗಿವೆ. ಈ ಮೂಲಕ ಶೇಕಡಾ 8.37 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
ಈ ಮಾರಾಟ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಟಿವಿಎಸ್ ಜುಪಿಟರ್ ಟಾಪ್-10 ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದ್ದು, ಸ್ಪರ್ಧೆಯಲ್ಲಿ ಪ್ರಮುಖ ಸ್ಕೂಟರ್ ಹಾಗೂ ಬೈಕ್‌ಗಳನ್ನು ಹಿಂದಿಕ್ಕಿದೆ. ಅಕ್ಟೋಬರ್ 2025 ರ ಟಾಪ್-10 ದ್ವಿಚಕ್ರ ವಾಹನ (Top 10 Two Wheelers October 2025) ಗಳ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಪಡೆದುಕೊಂಡಿದೆ.

ಅಕ್ಟೋಬರ್ 2025 ರ ಟಾಪ್-10 ದ್ವಿಚಕ್ರ ವಾಹನ ಪಟ್ಟಿಯಲ್ಲಿ ಮೊದಲ ಸ್ಥಾನ ಹೀರೋ ಸ್ಪ್ಲೆಂಡರ್, ಎರಡನೇ ಸ್ಥಾನ ಹೋಂಡಾ ಆಕ್ಟಿವಾ, ಮೂರನೇ ಸ್ಥಾನ ಹೋಂಡಾ ಶೈನ್ ಹಾಗೂ ನಾಲ್ಕನೇ ಸ್ಥಾನದಲ್ಲಿ ಬಜಾಜ್ ಪಲ್ಸರ್ ಇವೆ. ಈ ಘಟಾನುಘಟಿಗಳ ಜೊತೆಗೆ ಸೆಣಸಾಡಿ ಟಿವಿಎಸ್ ಜುಪಿಟರ್ ಐದನೇ ಸ್ಥಾನವನ್ನು ದಕ್ಕಿಸಿಕೊಂಡಿದೆ. ಈ ಮೂಲಕ ಭಾರತದ ಅತ್ಯಂತ ಬೇಡಿಕೆಯ ಸ್ಕೂಟರ್ ಎಂದು ಜನಪ್ರಿಯತೆ ಗಳಿಸಿದೆ.
ಇದು ಟಿವಿಎಸ್ ಕಂಪನಿಗೆ ಹೆಮ್ಮೆಯ ವಿಷಯವಾಗಿದ್ದು, ಈಗ ಸ್ಕೂಟರ್ ಅನ್ನು ಟಾಪ್-1 ಸ್ಥಾನಕ್ಕೆ ತರಲು ಹೊಸ ಪ್ಲಾನ್ ಮಾಡಿದೆ. ಟಿವಿಎಸ್ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಜೂಪಿಟರ್ 125 ಸ್ಕೂಟರ್‌ನ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಇದು ವಿಶ್ವದ ಮೊದಲ ಸಿಎನ್‌ಜಿ ಸ್ಕೂಟರ್ ಆಗಿದ್ದು, ಇದರ ಆರಂಭಿಕ ಬೆಲೆ ಸುಮಾರು 90,000 ರೂ. ಇರುವ ನಿರೀಕ್ಷೆಯಿದೆ.

ಈಗಾಗಲೇ ಬೈಕ್ ವಿಭಾಗದಲ್ಲಿ ಬಜಾಜ್ ಕಂಪನಿಯು ಫ್ರೀಡಂ 125 ಎಂಬ ಸಿಎನ್‌ಜಿ ಮೋಟಾರ್‌ಸೈಕಲ್ ಅನ್ನು ಪರಿಚಯಿಸಿದೆ. ಇದು ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ, ಹಾಗೆಯೇ ಸ್ಕೂಟರ್ ವಿಭಾಗದಲ್ಲಿ ಇದುವರೆಗೆ ಯಾವುದೆ ಸಿಎನ್‌ಜಿ ವಾಹನ ಬಂದಿಲ್ಲ. ಟಿವಿಎಸ್ ಈಗ ಜುಪಿಟರ್ ಸಿಎನ್‌ಜಿ ಪರೀಕ್ಷೆಗಳು ಜೋರಾಗಿ ನಡೆಯುತ್ತಿದ್ದು, ಮೂಲಗಳ ಪ್ರಕಾರ ಇದರ ಮೈಲೇಜ್ ಪ್ರತಿ ಕಿಲೋಗ್ರಾಂಗೆ ಸುಮಾರು 90 ಕಿಲೋಮೀಟರ್ ಎಂದು ಹೇಳಲಾಗುತ್ತಿದೆ.
ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡಬಲ್ಲ ಸ್ಕೂಟರ್ ಅನ್ನು ಹುಡುಕುತ್ತಿರುವ ಗ್ರಾಹಕರಿಗೆ TVS Jupiter 125 CNG ಅತ್ಯುತ್ತಮ ಆಯ್ಕೆಯಾಗಲಿದೆ. ಈ ಸ್ಕೂಟರ್ 2026 ರ ಮಧ್ಯದಲ್ಲಿ ಮಾರಾಟಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ಸ್ಕೂಟರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಲ್ಲಿ ಹೋಂಡಾ ಆಕ್ಟೀವಾಗೆ ಸೆಡ್ಡು ಹೊಡೆದು ಟಿವಿಎಸ್ ಜುಪಿಟರ್ ನಂ.1 ಸ್ಥಾನ ಆಕ್ರಮಿಸುವುದು ಪಕ್ಕಾ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








