TVS: 93,800 ರೂಪಾಯಿ.. ಪ್ರಖ್ಯಾತ ಟಿವಿಎಸ್ ಬೈಕ್‌ನ ಹೊಸ ವೇರಿಯೆಂಟ್ ಬಿಡುಗಡೆ, ವಿಶೇಷತೆಗಳೇನು?
ಭಾರತದ ಮಾರುಕಟ್ಟೆಯಲ್ಲಿಂದು ಟಿವಿಎಸ್ ರೈಡರ್ (TVS Raider) ಮೋಟಾರ್‌ಸೈಕಲ್‌ನ ಹೊಚ್ಚ ಹೊಸ ರೂಪಾಂತರವಾದ 'ಡುಯಲ್ ಡಿಸ್ಕ್ ಬ್ರೇಕ್'ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದೆ. ಇದು ಸ್ಪೋರ್ಟಿ ಕಮ್ಯೂಟರ್ ಬೈಕ್ ಆಗಿದ್ದು, ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಜೊತೆಗಿದು ಗರಿಷ್ಠ ಸುರಕ್ಷತೆಗೂ ಸಾಕ್ಷಿಯಾಗಿದೆ. ಬನ್ನಿ, ಈ ನೂತನ ರೂಪಾಂತರದ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಈ ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ಬ್ರೇಕ್ ರೂಪಾಂತರ (ವೇರಿಯೆಂಟ್), ಎಸ್‌ಎಕ್ಸ್‌ಸಿ ಡಿಡಿ (ಡುಯಲ್ ಡಿಸ್ಕ್) ಹಾಗೂ ಟಿಎಫ್‌ಟಿ ಡಿಡಿ (ಡುಯಲ್ ಡಿಸ್ಕ್) ಎಂಬ 2 ವಿಧದಲ್ಲಿ ಲಭ್ಯವಿದೆ. ಕ್ರಮವಾಗಿ ರೂ.93,800 ದಿಂದ ರೂ.95,600 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಎಲ್ಲ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದು.

ಹೊಸ ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ಬ್ರೇಕ್ ರೂಪಾಂತರ, ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಪಡೆದಿದೆ. ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಹಾಗೂ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ವಿಕೆಡ್ ಬ್ಲ್ಯಾಕ್, ಬ್ಲೇಜಿಂಗ್ ಬ್ಲೂ, ಫೋರ್ಜಾ ಬ್ಲೂ, ಬ್ಲ್ಯಾಕ್ ಪ್ಯಾಂಥರ್, ನಾರ್ಡೊ ಗ್ರೇ, ಐರನ್ ಮ್ಯಾನ್ ಮತ್ತು ಫಿಯರಿ ಯೆಲ್ಲೋ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.
ಇದು ದೊಡ್ಡ ಗಾತ್ರದ ಬೈಕ್ ಆಗಿದೆ. 2,070 ಎಂಎಂ ಉದ್ದ, 785 ಎಂಎಂ ಅಗಲ ಹಾಗೂ 1028 ಎಂಎಂ ಎತ್ತರವಿದೆ. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,326 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 123 ಕೆಜಿ ತೂಕವಿದೆ.
ನೂತನ ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ಬ್ರೇಕ್ ರೂಪಾಂತರವು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 124.8 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 7,500 ಆರ್‌ಪಿಎಂನಲ್ಲಿ 11.2 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6,000 ಆರ್‌ಪಿಎಂನಲ್ಲಿ 11.75 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಈ ಮೋಟಾರ್‌ಸೈಕಲ್ 56.7 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಗ್ಲೈಡ್ ಥ್ರೂ ಟೆಕ್ನಾಲಜಿ (ಜಿಟಿಟಿ) ಹೊಂದಿದ್ದು, ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ. 99 ಕೆಎಂಪಿಹೆಚ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 6.3 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಹೊಸ ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ಬ್ರೇಕ್ ರೂಪಾಂತರ, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್/ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಒಳಗೊಂಡಿದೆ. ಇದರೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಶನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ವೈಶಿಷ್ಟ್ಯಗಳನ್ನು ಹೊಂದಿದೆ. 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಸೀಟ್ ಎತ್ತರ 780 ಎಂಎಂ ಇದೆ.
ಇದು ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಮುಂಭಾಗ (ಫ್ರಂಟ್) & ಹಿಂಭಾಗ (ರೇರ್) ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಸಿಂಗಲ್ ಚಾನೆಲ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಒಳಗೊಂಡಿದೆ. ಟೆಲಿಸ್ಕೋಪಿಕ್ ಫೋರ್ಕ್ ಮತ್ತು 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ಗಳನ್ನು ಪಡೆದಿದೆ. 17 ಇಂಚಿನ ಅಲಾಯ್ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ. 90/90-17 ಹಾಗೂ 110/80-17 ಅಳತೆಯ ಟೈರ್‌ಗಳನ್ನು ಹೊಂದಿದೆ.
ಒಟ್ಟಾರೆಯಾಗಿ ನೂತನ 'ಟಿವಿಎಸ್ ರೈಡರ್ ಡುಯಲ್ ಡಿಸ್ಕ್ ಬ್ರೇಕ್' ರೂಪಾಂತರ ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಬರುವ ದಿನಗಳಲ್ಲಿ ಈ ಬೈಕ್‌ನ ವಿತರಣೆ ಶುರುವಾಗಲಿದ್ದು, ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








