ನಿನ್ನೆಯಷ್ಟೆ ಬಿಡುಗಡೆಯಾದ ಹೊಸ ಟಿವಿಎಸ್ ರೈಡರ್ ಡೆಡ್‌ಪೂಲ್-ವೊಲ್ವೆರಿನ್ ವಿಶೇಷತೆಗಳು

ಟಿವಿಎಸ್ ಮೋಟಾರ್ ಕಂಪನಿಯು ತನ್ನ ರೈಡರ್ ಸೂಪರ್ ಸ್ಕ್ವಾಡ್ ಆವೃತ್ತಿಗೆ ಜನಪ್ರಿಯ ಹಾಲಿವುಡ್ ಸಿನಿಮಾಗಳ ಮಾರ್ವೆಲ್‌ನಿಂದ - ಪ್ರೇರಿತವಾದ ಎರಡು ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಡೆಡ್‌ಪೂಲ್ ಮತ್ತು ವೊಲ್ವೆರಿನ್ ವೇರಿಯೆಂಟ್‌ಗಳು ಯುವ ಸವಾರರನ್ನು ಗುರಿಯಾಗಿಟ್ಟುಕೊಂಡು ವಿಶಿಷ್ಟ ಗ್ರಾಫಿಕ್ಸ್ ಮತ್ತು ಸುಧಾರಿತ ತಂತ್ರಜ್ಞಾನವನ್ನು ಒಳಗೊಂಡಿವೆ. ಹೊಸ ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಆವೃತ್ತಿಯ ಬೆಲೆ ರೂ. 99,465 (ಎಕ್ಸ್ ಶೋ ರೂಂ) ಇದೆ. ಈ ತಿಂಗಳಿನಿಂದ ಎಲ್ಲಾ ಟಿವಿಎಸ್ ಮೋಟಾರ್ ಕಂಪನಿಯ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಡೆಡ್‌ಪೂಲ್ ಆವೃತ್ತಿಯ ಟ್ಯಾಂಕ್‌ನಲ್ಲಿ ಡೆಡ್‌ಪೂಲ್‌ನ ಐಕಾನಿಕ್ ಮುಖವಾಡ ಮತ್ತು ಸೈಡ್ ಪ್ಯಾನೆಲ್‌ನಲ್ಲಿ '90' ಇರುವ ಕಪ್ಪು ಬಣ್ಣದ ಬೇಸ್ ಅನ್ನು ನೀಡುತ್ತದೆ. ಇದು 1990 ರಲ್ಲಿ ಪಾತ್ರದ ಕಾಮಿಕ್ ಚೊಚ್ಚಲ ಪ್ರವೇಶವನ್ನು ಉಲ್ಲೇಖಿಸುತ್ತದೆ. ಇನ್ನು ವೊಲ್ವೆರಿನ್ ಆವೃತ್ತಿಯು 1974 ರಲ್ಲಿ ವೊಲ್ವೆರಿನ್‌ನ ಮೊದಲ ಕಾಮಿಕ್ ನೋಟವನ್ನು ಪ್ಯಾನೆಲ್‌ನಲ್ಲಿ '74' ನೊಂದಿಗೆ ಬೂದು ಬಣ್ಣದ ಥೀಮ್ ಅನ್ನು ಹೊಂದಿದೆ.

tvs-raider-wolverine-and-deadpool-super-squad-edition-top-things

ಎಂಜಿನ್ ಮತ್ತು ಕಾರ್ಯಕ್ಷಮತೆ ಪರ್ಫಾಮೆನ್ಸ್ ವಿಷಯಕ್ಕೆ ಬಂದರೆ ಎರಡೂ ವೇರಿಯೆಂಟ್‌ಗಳು 124.8cc, 3-ವಾಲ್ವ್ ಎಂಜಿನ್ ಹೊಂದಿವೆ. ಈ ಎಂಜಿನ್ 11.38 PS ಪವರ್ ಮತ್ತು 11.75 Nm ಟಾರ್ಕ್ ಅನ್ನು ಉತ್ಪಾದಿಸುತ್ತವೆ (ಪವರ್ ಮೋಡ್‌ನಲ್ಲಿ ISG ಬೂಸ್ಟ್ ಹೊರಹಾಕುತ್ತವೆ), 5 - ಸ್ಪೀಡ್ ಗೇರ್‌ಬಾಕ್ಸ್‌ ನೀಡಲಾಗಿದೆ.

ಕೆಲವು ತಾಂತ್ರಿಕ ನವೀಕರಣಗಳನ್ನು ಮಾಡಲಾಗಿದ್ದು, ತ್ವರಿತ ವೇಗವರ್ಧನೆಗಾಗಿ ಬೂಸ್ಟ್ ಮೋಡ್‌ನೊಂದಿಗೆ iGO ಅಸಿಸ್ಟ್ ಮತ್ತು ಸುಗಮ, ಕಡಿಮೆ - ವೇಗದ ಕುಶಲತೆಗಾಗಿ ಗ್ಲೈಡ್ ಥ್ರೂ ತಂತ್ರಜ್ಞಾನ (GTT) ವನ್ನು ನೀಡಲಾಗಿದೆ. ವಿಶೇಷ ಫೀಚರ್ಸ್ ಅಡಿಯಲ್ಲಿ ನ್ಯಾವಿಗೇಷನ್, ಕಾಲ್/ಎಸ್‌ಎಂಎಸ್ ವಾರ್ನಿಂಗ್, ವಾಯಿಸ್ ಅಸಿಸ್ಟ್ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ 85+ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ LCD ಕ್ಲಸ್ಟರ್ ಒಳಗೊಂಡಿದೆ.

ರೈಡ್ ಮೋಡ್‌ಗಳಾದ ಇಕೋ, ಪವರ್ ಮತ್ತು ಬೂಸ್ಟ್ ಮೋಡ್‌ಗಳು ಪ್ರಮಾಣಿತವಾಗಿದ್ದು, ಸವಾರರು ಪರ್ಫಾಮೆನ್ಸ್ ಮತ್ತು ಮೈಲೇಜ್ ಸರಿಹೊಂದಿಸಲು ಅನುವು ಮಾಡಿಕೊಡುತ್ತದೆ. ಸಸ್ಪೆನ್ಷನ್ ಮತ್ತು ಬ್ರೇಕ್‌ಗಳ ವಿಷಯಕ್ಕೆ ಬಂದರೆ ಟೆಲಿಸ್ಕೋಪಿಕ್ ಫೋರ್ಕ್‌ಗಳು, ಮೊನೊಶಾಕ್ ಹಿಂಭಾಗದ ಸಸ್ಪೆನ್ಷನ್, 240mm ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು 140mm ಹಿಂಭಾಗದ ಡ್ರಮ್, 17-ಇಂಚಿನ ವೀಳ್‌ಗಳನ್ನು ನೀಡಲಾಗಿದೆ.

ಮಾರ್ವೆಲ್ ಲೈನ್‌ಅಪ್: ಟಿವಿಎಸ್ ರೈಡರ್, ಮಾರ್ವೆಲ್ - ಎಡಿಷನ್‌ನೊಂದಿಗೆ ಬಿಡುಗಡೆಯಾಗಿರುವ ಭಾರತದ ಮೊದಲ ಮೋಟಾರ್‌ಸೈಕಲ್ ಆಗಿದೆ. ಆಗಸ್ಟ್ 2023 ರಲ್ಲಿ ಐರನ್ ಮ್ಯಾನ್ ಮತ್ತು ಬ್ಲ್ಯಾಕ್ ಪ್ಯಾಂಥರ್‌ನೊಂದಿಗೆ ಸ್ಕೂಟರ್ ಪಾದಾರ್ಪಣೆ ಮಾಡಿತ್ತು. ಈ ವೇರಿಯೆಂಟ್‌ಗಳು ತಮ್ಮ ವಿಶಿಷ್ಟ ಸೂಪರ್‌ಹೀರೋ - ಪ್ರೇರಿತ ಸ್ಟೈಲಿಂಗ್ ಮತ್ತು ಕ್ರಿಯಾತ್ಮಕ ಕಾರ್ಯಕ್ಷಮತೆಯಿಂದ ಯುವ ಸವಾರರನ್ನು ಆಕರ್ಷಿಸಿದವು.

ಈ ಎರಡು ಹೊಸ ವೇರಿಯೆಂಟ್‌ಗಳು ಅಸ್ತಿತ್ವದಲ್ಲಿರುವ ಐರನ್ ಮ್ಯಾನ್ ಮತ್ತು ಬ್ಲ್ಯಾಕ್ ಪ್ಯಾಂಥರ್ ಆವೃತ್ತಿಗಳನ್ನು ಸೇರುತ್ತವೆ. ಮಾರ್ವೆಲ್‌ನೊಂದಿಗಿನ ತನ್ನ ಯಶಸ್ವಿ ಸಹಯೋಗವನ್ನು ಬಲಪಡಿಸುತ್ತಾ, ಟಿವಿಎಸ್ ಮೋಟಾರ್ ಕಂಪನಿಯು ಜನರೇಷನ್ Z ಗ್ರಾಹಕರಿಗೆ ಅನುಗುಣವಾಗಿ ಅತ್ಯಾಧುನಿಕ ವಿನ್ಯಾಸ ಮತ್ತು ಎಂಜಿನಿಯರಿಂಗ್ ಮೂಲಕ ಐಕಾನಿಕ್ ಪಾತ್ರಗಳಿಗೆ ಜೀವ ತುಂಬುವುದನ್ನು ಮುಂದುವರೆಸಿದೆ.

ಹಾಲಿವುಡ್ ಮಾರ್ವೆಲ್‌ನ ಈ ಎರಡು ಅತ್ಯಂತ ಪ್ರತಿಷ್ಠಿತ ಪಾತ್ರಗಳಾದ ಡೆಡ್‌ಪೂಲ್ ಮತ್ತು ವೊಲ್ವೆರಿನ್‌ಗಳಿಂದ ಸ್ಫೂರ್ತಿ ಪಡೆದ ಈ ಇತ್ತೀಚಿನ ಎಡಿಷನ್ ಟಿವಿಎಸ್ ರೈಡರ್‌ನಲ್ಲಿ ದಿಟ್ಟ ವಿನ್ಯಾಸ ಮತ್ತು ಮನೋಭಾವವನ್ನು ತುಂಬುತ್ತದೆ. ಸೂಪರ್ ಸ್ಕ್ವಾಡ್ ಶ್ರೇಣಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಟಿವಿಎಸ್ ಮೋಟಾರ್ ಹೇಳಿದೆ.

ಒಟ್ಟಾರೆ ಈ ನವೀಕರಿಸಿದ ಆವೃತ್ತಿಗಳು ಪೌರಾಣಿಕ ಮಾರ್ವೆಲ್ ಪಾತ್ರಗಳಿಂದ ಪ್ರೇರಿತವಾದ ಡೈನಾಮಿಕ್ ಹೊಸ ಡೆಕಲ್‌ಗಳನ್ನು ಪ್ರದರ್ಶಿಸುತ್ತದೆ. ಇದು 125 ಸಿಸಿ ವಿಭಾಗದಲ್ಲಿ ಮೋಟಾರ್‌ಸೈಕಲ್‌ನ ವಿಶಿಷ್ಟ ಗುರುತನ್ನು ಬಲಪಡಿಸುತ್ತದೆ. ಜೊತೆಗೆ ತಂತ್ರಜ್ಞಾನ ಆಧಾರಿತ ವೈಶಿಷ್ಟ್ಯಗಳ ಸೂಟ್‌ನೊಂದಿಗೆ ತನ್ನ ವಿಭಾಗದಲ್ಲಿ ಗ್ರಾಹಕರಿಗೆ ಅತ್ಯಾಕರ್ಷಕ ಆಯ್ಕೆಯಾಗಿದೆ.

More from DriveSpark

Article Published On: Wednesday, August 27, 2025, 13:19 [IST]
English summary
Tvs raider wolverine and deadpool super squad edition top things
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+