Ultraviolette: ಬೆಂಗಳೂರು ಮೂಲದ 'ಅಲ್ಟ್ರಾವೈಲೆಟ್ F77 ಸೂಪರ್‌ ಸ್ಟ್ರೀಟ್' ಬೈಕ್ ಬಿಡುಗಡೆ

ಬೆಂಗಳೂರು ಮೂಲದ ಮೋಟಾರ್‌ಸೈಕಲ್ ತಯಾರಕರಾದ 'ಅಲ್ಟ್ರಾವೈಲೆಟ್' (Ultraviolette) ಇಂದು ಬಹುನಿರೀಕ್ಷಿತ F77 ಸೂಪರ್‌ಸ್ಟ್ರೀಟ್ ಬೈಕ್‌ನ್ನು ಬಿಡುಗಡೆ ಮಾಡಿದೆ. ಗ್ರಾಹಕರ ಆದ್ಯತೆಗಳ ಆಧಾರದ ಮೇಲೆ, F77 ಸೂಪರ್‌ಸ್ಟ್ರೀಟ್ ಅನ್ನು ಕ್ರಿಯಾತ್ಮಕ ಪರ್ಫಾಮೆನ್ಸ್ ಸ್ಟ್ರೀಟ್ ಮೋಟಾರ್‌ಸೈಕಲ್ ಆಗಿ ವಿನ್ಯಾಸಗೊಳಿಸಲಾಗಿದೆ. ಈ ಮೋಟಾರ್ ಸೈಕಲ್ F77 ಸೂಪರ್‌ಸ್ಟ್ರೀಟ್ ಮತ್ತು F77 ಸೂಪರ್‌ಸ್ಟ್ರೀಟ್ ರೆಕಾನ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಭಾರತದಾದ್ಯಂತ ರೂ. 2,99,000 (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುವ ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ವಿತರಣೆಗಳು ಮಾರ್ಚ್ 2025 ರಲ್ಲಿ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ.

F77 ಸೂಪರ್‌ಸ್ಟ್ರೀಟ್ 10.3 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಮೋಟಾರ್‌ 30 kW (40.2 hp) ಗರಿಷ್ಠ ಪವರ್ ಹಾಗೂ 100 Nm ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 2.8 ಸೆಕೆಂಡುಗಳಲ್ಲಿ 60 ಕಿ.ಮೀ ವೇಗವನ್ನು ವೇಗ ತಲುಪುವ ಸಾಮರ್ಥ್ಯವನ್ನು ಹೊಂದಿದೆ. 155 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು. ಸಿಂಗಲ್ ಚಾರ್ಜ್‌ನಲ್ಲಿ 323 ಕಿ.ಮೀಗಳ ಪ್ರಭಾವಶಾಲಿ IDC ರೇಂಜ್ ಹೊಂದಿದೆ.

ultraviolette-f77-superstreet-electric-motorcycle-launched

F77 ಸೂಪರ್‌ಸ್ಟ್ರೀಟ್ ಬೈಕ್‌ನ 3-ಹಂತದ ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆಯು ವೈವಿಧ್ಯಮಯ ಸವಾರಿ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಟ್ರಾಕ್ಷನ್ (ಎಳೆತ) ಮತ್ತು ಸ್ಥಿರತೆಯನ್ನು ಹೊಂದಿದೆ. ಹಾಗೆಯೇ ಇದು 10 ಹಂತದ ರೀಜೆನ್ ಬ್ರೇಕಿಂಗ್‌ನೊಂದಿಗೆ ಸಜ್ಜುಗೊಂಡಿದೆ. ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (UV DSC) ಅನ್ನು ಸಹ ಒಳಗೊಂಡಿದ್ದು, ಇದು ABS ನೊಂದಿಗೆ ರೀಜೆನ್ ಬ್ರೇಕಿಂಗ್ ಮಟ್ಟವನ್ನು ಸರಾಗವಾಗಿ ಮಾಡ್ಯುಲೇಟ್ ಮಾಡುವ ಅತ್ಯಾಧುನಿಕ ವೈಶಿಷ್ಟ್ಯವಾಗಿದೆ.

F77 ಸೂಪರ್‌ಸ್ಟ್ರೀಟ್ ಬೈಕ್ ಡೆಲ್ಟಾ ವಾಚ್‌ನೊಂದಿಗೆ ಸಜ್ಜುಗೊಂಡಿದ್ದು, ಇದು ಉನ್ನತ ಮಟ್ಟದ ಭದ್ರತೆಯನ್ನು ಒದಗಿಸುವ ಒಂದು ವಿಶಿಷ್ಟ ವೈಶಿಷ್ಟ್ಯವಾಗಿದೆ. ಈ ನವೀನ ತಂತ್ರಜ್ಞಾನವು ಜಾಗರೂಕ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ, ತಮ್ಮ ಮೋಟಾರ್‌ಸೈಕಲ್‌ನಲ್ಲಿ ಯಾವುದೇ ಅತಿಕ್ರಮಣ ಪ್ರಯತ್ನಗಳ ಬಗ್ಗೆ ಸವಾರರಿಗೆ ತಕ್ಷಣ ಎಚ್ಚರಿಕೆ ನೀಡುತ್ತದೆ. ಡೆಲ್ಟಾ ವಾಚ್‌ನೊಂದಿಗೆ, ಸವಾರರು ತನ್ನ ಬೈಕ್‌ಗೆ ಹೆಚ್ಚುವರಿ ರಕ್ಷಣೆಯನ್ನು ನೀಡಬಹುದು.

ultraviolette-f77-superstreet-electric-motorcycle-launched

ಟರ್ಬೊ ರೆಡ್, ಆಫ್ಟರ್‌ಬರ್ನರ್ ಎಲ್ಲೋ, ಸ್ಟೆಲ್ಲರ್ ವೈಟ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಎಂಬ ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಜೊತೆಗೆ ಕಂಪನಿಯು ಸಂಪೂರ್ಣ ಶ್ರೇಣಿಯ ಪರಿಕರಗಳನ್ನು (ಟೂಲ್ಸ್) ಘೋಷಿಸಿದೆ. ಇವುಗಳಲ್ಲಿ ಏರೋ ಡಿಸ್ಕ್‌ಗಳು, ಟ್ಯಾಂಕ್ ಗ್ರಿಪ್‌ಗಳು, ಲಿವರ್ ಗಾರ್ಡ್ಸ್, TPMS, ಪಂಕ್ಚರ್ ಕಿಟ್, ಸ್ಕ್ರೀನ್ ಗಾರ್ಡ್, ಟಾಪ್ ಬಾಕ್ಸ್, ಸಾಫ್ಟ್ ಪ್ಯಾನಿಯರ್‌ಗಳು, ಹಾರ್ಡ್ ಪ್ಯಾನಿಯರ್‌ಗಳು ಮತ್ತು ಟೈಪ್ 2 ಚಾರ್ಜಿಂಗ್ ಇಂಟರ್‌ಫೇಸ್ ಸೇರಿವೆ.

ಅಲ್ಟ್ರಾವೈಲೆಟ್‌ನ ಐಚ್ಛಿಕ ಪ್ಯಾಕೇಜ್‌ಗಳು ಎಲ್ಲಾ F77 ಸೂಪರ್‌ಸ್ಟ್ರೀಟ್ ಗ್ರಾಹಕರಿಗೆ ಲಭ್ಯವಿದೆ. ಪರ್ಫಾರ್ಮೆನ್ಸ್ ಪ್ಯಾಕ್ ಡೈನಾಮಿಕ್ ರೀಜೆನ್‌ನೊಂದಿಗೆ 10 ಹಂತದ ಪುನರುತ್ಪಾದಕ ಬ್ರೇಕಿಂಗ್ (Regenerative braking) ಮತ್ತು ಸುಧಾರಿತ 3 - ಹಂತದ ಟ್ರಾಕ್ಷನ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳೊಂದಿಗೆ ಪರ್ಫಾಮೆನ್ಸ್ ಮತ್ತು ಸುರಕ್ಷತೆಯನ್ನು ಅತ್ಯುತ್ತಮವಾಗಿಸುವತ್ತ ಗಮನಹರಿಸುತ್ತದೆ.

ultraviolette-f77-superstreet-electric-motorcycle-launched

ಕಂಪನಿಯ A.I. ಅನ್ನು ಸವಾರಿಯ ಸಮಯದಲ್ಲಿ ಮತ್ತು ಬೈಕ್ ನಿಲ್ಲಿಸಿದಾಗ ಸ್ಮಾರ್ಟ್ ಟೆಕ್ ಸಹ-ಪೈಲಟ್ ಆಗಿ ಕಾರ್ಯನಿರ್ವಹಿಸುವ ಸುಧಾರಿತ ಸಂಪರ್ಕ ವೈಶಿಷ್ಟ್ಯಗಳನ್ನು ಸವಾರರಿಗೆ ನೀಡಲು ವಿನ್ಯಾಸಗೊಳಿಸಲಾಗಿದೆ. ಈ ಪ್ಯಾಕ್‌ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಚಲನೆ, ಪತನ ಮತ್ತು ಟೋವಿಂಗ್ (Movement, Falling and Towing) ಎಚ್ಚರಿಕೆಗಳು, ರಿಮೋಟ್ ಲಾಕ್‌ಡೌನ್, ಕ್ರ್ಯಾಶ್ ಎಚ್ಚರಿಕೆ, ದೈನಂದಿನ ಸವಾರಿ ಅಂಕಿಅಂಶಗಳು ಮತ್ತು ಆಂಟಿ-ಕೊಲಿಷನ್ ಎಚ್ಚರಿಕೆ ವ್ಯವಸ್ಥೆ ಸೇರಿವೆ.

ನಾವು ಸಂಪೂರ್ಣವಾಗಿ ವಿಭಿನ್ನ ರೂಪದ ಅಂಶದೊಂದಿಗೆ ಹೊಸ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಿದ್ದೇವೆ. ಮಾತ್ರವಲ್ಲದೆ ಇತ್ತೀಚೆಗೆ ನಮ್ಮ ಮೌಲ್ಯಯುತ ಗ್ರಾಹಕರಿಗಾಗಿ ಚಾರ್ಜಿಂಗ್‌ಗಾಗಿ ಟೈಪ್ 2 ಇಂಟರ್ಫೇಸ್ ಅನ್ನು ಪರಿಚಯಿಸಿದ್ದೇವೆ. ಈ ಇಂಟರ್ಫೇಸ್‌ನೊಂದಿಗೆ ನಾವು ಈಗ ಭಾರತದಾದ್ಯಂತ ಎಲ್ಲಾ AC ಕಾರ್ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸಿದ್ದೇವೆ ಎಂದು ಅಲ್ಟ್ರಾವಯೊಲೆಟ್‌ನ CTO ಮತ್ತು ಸಹ-ಸಂಸ್ಥಾಪಕ ನೀರಜ್ ರಾಜ್‌ಮೋಹನ್ ಹೇಳಿದ್ದಾರೆ.

More from DriveSpark

Article Published On: Friday, January 31, 2025, 16:30 [IST]
English summary
Ultraviolette f77 superstreet electric motorcycle launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+