ವಿದೇಶಗಳಲ್ಲಿ ಕರುನಾಡಿನ ಗತ್ತು: ಬೆಂಗಳೂರಿನ ಮೋಟಾರ್‌ಸೈಕಲ್‌ಗಳಿಗೆ ಯೂರೋಪ್‌ನಲ್ಲಿ ಬೇಡಿಕೆ!

ಯುರೋಪಿಯನ್ ದೇಶಗಳಲ್ಲಿ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್‌ಗಳನ್ನು ಪ್ರತಿನಿಧಿಸುವಲ್ಲಿ ವ್ಯಾಪಕ ಪರಿಣತಿ ಮತ್ತು ಪ್ರಾದೇಶಿಕ ಮಾರುಕಟ್ಟೆಗಳ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುವ ಮೋಟೋಮೊಂಡೊ ಜೊತೆಗೆ ನಮ್ಮ ಕರ್ನಾಟಕ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಅಲ್ಟ್ರಾವೈಲೆಟ್ ಪಾಲುದಾರಿಕೆ ಘೋಷಿಸಿದೆ. ಅಲ್ಟ್ರಾವೈಲೆಟ್ ಕಂಪನಿಯು ಮೋಟೋಮೊಂಡೊ ಜೊತೆಗಿನ ತನ್ನ ಇತ್ತೀಚಿನ ಮೈತ್ರಿಯೊಂದಿಗೆ, ಯುನೈಟೆಡ್ ಕಿಂಗ್‌ಡಮ್ ಮತ್ತು ಬೆಲ್ಜಿಯಂ, ನೆದರ್‌ಲ್ಯಾಂಡ್ಸ್ ಮತ್ತು ಲಕ್ಸೆಂಬರ್ಗ್‌ಗಳನ್ನು ಒಳಗೊಂಡಿರುವ ಬೆನೆಲಕ್ಸ್ ಪ್ರದೇಶಕ್ಕೆ ಮೋಟೋಮೊಂಡೊವನ್ನು ಅಧಿಕೃತ ಆಮದುದಾರ ಮತ್ತು ವಿತರಕರನ್ನಾಗಿ ನೇಮಿಸಿದೆ.

ಈ ಪಾಲುದಾರಿಕೆಯು ಅಲ್ಟ್ರಾವೈಲೆಟ್ ಅನ್ನು ಜಾಗತಿಕವಾಗಿ ಬೆಳೆಯಲು ಮತ್ತು ವಿಶ್ವಕ್ಕಾಗಿ ಭಾರತ ತಯಾರಿಸುವ ವಾಹನಗಳ ಪ್ರಮುಖ ಅಧ್ಯಾಯವನ್ನು ಪ್ರತಿನಿಧಿಸುತ್ತದೆ. ಈ ಮೈತ್ರಿಕೂಟದ ಮೂಲಕ, ಅಲ್ಟ್ರಾವೈಲೆಟ್ ತನ್ನ ಪವರ್‌ಫುಲ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಆಗಿರುವ F77 MACH 2 RECON ಅನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮೊದಲು ಪರಿಚಯಿಸಲಿದೆ.

ultraviolette-gears-up-for-launch-in-united-kingdom-and-benelux-region

"ಯುನೈಟೆಡ್ ಕಿಂಗ್‌ಡಮ್ ಮತ್ತು ಬೆನೆಲಕ್ಸ್ ಪ್ರದೇಶಕ್ಕೆ ಅಲ್ಟ್ರಾವೈಲೆಟ್ ಮೋಟಾರ್‌ಸೈಕಲ್‌ಗಳನ್ನು ಪರಿಚಯಿಸಲು ಮೋಟೋಮೊಂಡೊ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ರೋಮಾಂಚನಗೊಂಡಿದ್ದೇವೆ. ಈ ಪಾಲುದಾರಿಕೆಯು ನಮ್ಮ ಜಾಗತಿಕ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ. ಏಕೆಂದರೆ ನಾವು ಅಲ್ಟ್ರಾವೈಲೆಟ್ ಬ್ರ್ಯಾಂಡ್ ಅನ್ನು ಭಾರತವನ್ನು ಮೀರಿ ವಿಶ್ವದ ಅತ್ಯಂತ ಪ್ರಬುದ್ಧ ಮತ್ತು ವಿವೇಚನಾಶೀಲ ಮೋಟಾರ್‌ಸೈಕ್ಲಿಂಗ್ ಮಾರುಕಟ್ಟೆಗಳಿಗೆ ವಿಸ್ತರಿಸುತ್ತೇವೆ.

ಯುರೋಪಿನಾದ್ಯಂತ ಪ್ರೀಮಿಯಂ ಮೋಟಾರ್‌ ಸೈಕಲ್ ಬ್ರಾಂಡ್‌ಗಳನ್ನು ಸ್ಥಾಪಿಸುವಲ್ಲಿ ಮತ್ತು ಬೆಳೆಸುವಲ್ಲಿ ಮೋಟೋಮೊಂಡೊದ ಸಾಬೀತಾಗಿರುವ ಪರಿಣತಿಯು, ಈ ಪ್ರಮುಖ ಪ್ರದೇಶಗಳಲ್ಲಿ ಅಲ್ಟ್ರಾವೈಲೆಟ್ ಅನ್ನು ಪ್ರತಿನಿಧಿಸಲು ಹಾಗೂ ಅವರನ್ನು ಪರಿಪೂರ್ಣ ಪಾಲುದಾರರನ್ನಾಗಿ ಮಾಡಲು ಸಹಕರಿಸಲಿದೆ ಎಂದು ಮೋಟೋಮೊಂಡೊದ ವ್ಯವಸ್ಥಾಪಕ ನಿರ್ದೇಶಕ ಜಾನ್ ಯ್ಕೆಮಾ ಹೇಳಿದರು.

ultraviolette-gears-up-for-launch-in-united-kingdom-and-benelux-region

ಮಾರುಕಟ್ಟೆಯ ಬಗ್ಗೆ ನಮ್ಮ ಆಳವಾದ ತಿಳುವಳಿಕೆ, ನಾವೀನ್ಯತೆ ಮತ್ತು ಮೋಟಾರ್‌ಸೈಕ್ಲಿಂಗ್ ಸಂಸ್ಕೃತಿಯ ಮೇಲಿನ ಉತ್ಸಾಹದೊಂದಿಗೆ ಸೇರಿ, ಉತ್ಪನ್ನ ಅನುಭವದಿಂದ ಮಾರಾಟದ ನಂತರದ ಬೆಂಬಲದವರೆಗೆ ಅಲ್ಟ್ರಾವೈಲೆಟ್ ಪರಿಸರ ವ್ಯವಸ್ಥೆಯು ಮೊದಲ ದಿನದಿಂದಲೇ ವಿಶ್ವ ದರ್ಜೆಯಾಗಿರುತ್ತದೆ ಎಂದು ಖಚಿತಪಡಿಸುತ್ತದೆ. ಇದು ಕೇವಲ ಆರಂಭ, ಮುಂದಿನ ಹಾದಿಯ ಬಗ್ಗೆ ನಾವು ನಂಬಲಾಗದಷ್ಟು ಉತ್ಸುಕರಾಗಿದ್ದೇವೆ ಎಂದರು.''

ವಿಶ್ವದ ಅತ್ಯಂತ ಮುಂದುವರಿದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬ್ರ್ಯಾಂಡ್ ಆದ ಅಲ್ಟ್ರಾವೈಲೆಟ್ ಅನ್ನು ಯುನೈಟೆಡ್ ಕಿಂಗ್‌ಡಮ್ ಮತ್ತು ಬೆನೆಲಕ್ಸ್ ಪ್ರದೇಶಕ್ಕೆ ತರಲು ನಾವು ಹೆಮ್ಮೆಪಡುತ್ತೇವೆ. ಅವರ ತಂತ್ರಜ್ಞಾನ ಅಭೂತಪೂರ್ವವಾಗಿದೆ, ನಾವು ಇದೀಗಷ್ಟೇ ಆರಂಭವನ್ನು ನೋಡಿದ್ದೇವೆ. ಎಲ್ಲಾ ಇಂಧನ ಚಾಲಿತ ವಾಹನಗಳಿಗೆ ನಿಜವಾದ ಪರ್ಯಾಯವನ್ನು ನೀಡುವ ಮೂಲಕ ಅಲ್ಟ್ರಾವೈಲೆಟ್ ಪ್ರಸ್ತುತ ಮೋಟಾರ್‌ಸೈಕಲ್ ಮಾರುಕಟ್ಟೆಯನ್ನು ಆಳುತ್ತಿದೆ ಎಂದು ಜಾನ್ ಹೇಳಿದರು.

ಅಲ್ಟ್ರಾವೈಲೆಟ್ F77 MACH 2 RECON ಅನ್ನು ಜೂನ್ 30, 2025 ರ ಮೊದಲು ಮಾಡುವ ಬುಕಿಂಗ್ ಮಾಡುವವರಿಗೆ ಕೇವಲ £8,499 (ಅಂದಾಜು 9.5 ಲಕ್ಷ ಭಾರತೀಯ ರೂ.) ನಿಂದ ಪ್ರಾರಂಭವಾಗುವ ಪರಿಚಯಾತ್ಮಕ ಆನ್-ರೋಡ್ ಬೆಲೆಯಲ್ಲಿ ನೀಡಲಿದೆ. ಈ ನಿರ್ಧಿಷ್ಟ ದಿನಾಂಕದ ನಂತರ ಬುಕ್ ಮಾಡುವವರಿಗೆ F77 MACH 2 RECON ಅನ್ನು £9,399 (10.6 ಲಕ್ಷ ರೂ.) ಆನ್-ರೋಡ್ ಬೆಲೆಯಲ್ಲಿ ಲಭ್ಯವಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, April 16, 2025, 17:55 [IST]
English summary
Ultraviolette gears up for launch in united kingdom and benelux region
Read more on ultraviolette
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+