ಕರ್ನಾಟಕದ ಗತ್ತು: ಜಾಗತಿಕ ವೇದಿಕೆಯಲ್ಲಿ ಅತ್ಯಾಧುನಿಕ ರಾಡಾರ್ ಸಂವಹನದ ಹೆಲ್ಮೆಟ್ ಬಿಡುಗಡೆ

ಭಾರತದಾದ್ಯಂತ X-47 ಕ್ರಾಸ್ಒವರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಇತ್ತೀಚಿನ ಬಿಡುಗಡೆ ಮತ್ತು ಡೆಲಿವರಿಗಳ ನಂತರ, ಕರ್ನಾಟಕ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಾದ ''ಅಲ್ಟ್ರಾವೈಲೆಟ್'' (Ultraviolette) ತಮ್ಮ ಸಂಪೂರ್ಣ ವಾಹನ ಪೋರ್ಟ್‌ಫೋಲಿಯೊವನ್ನು ಇಟಲಿಯ ಮಿಲನ್‌ನಲ್ಲಿ ನಡೆದ ವಿಶ್ವದ ಪ್ರೀಮಿಯರ್ ಮೋಟಾರ್‌ಸೈಕಲ್ ಪ್ರದರ್ಶನ - EICMA 2025 ರಲ್ಲಿ ಅನಾವರಣಗೊಳಿಸಿದೆ. ಹಾಗೆಯೇ ಕಾರ್ಡೋ ಸಿಸ್ಟಮ್ಸ್‌ನೊಂದಿಗೆ ತನ್ನ ಮೊದಲ ಪಾಲುದಾರಿಕೆಯನ್ನು ಘೋಷಿಸಿದೆ. ಅಲ್ಟ್ರಾವೈಲೆಟ್ ಮತ್ತು ಕಾರ್ಡೋ ಸಿಸ್ಟಮ್ಸ್ ಎರಡೂ ಒಟ್ಟಾಗಿ ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ನಿರ್ಮಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿವೆ.

ಮತ್ತೊಂದು ಹೈಲೆಟ್ ಎಂದರೆ ಅಲ್ಟ್ರಾವೈಲೆಟ್ ಈಗ 'UV ಕ್ರಾಸ್‌ಫೇಡ್' (UV Crossfade) - ಎಂಬ ಹೊಸ ಕಾರ್ಬನ್ ಫೈಬರ್ ಶೆಲ್ ಹೊಂದಿರುವ ಹೆಲ್ಮೆಟ್ ಅನ್ನು EICMA 2025 ರಲ್ಲಿ ಬಿಡುಗಡೆ ಮಾಡಿದೆ. ಇದು ರೂ. 19,900 ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಹೊಸ UV ಕ್ರಾಸ್‌ಫೇಡ್ ಹೆಲ್ಮೆಟ್, ಅಲ್ಟ್ರಾವೈಲೆಟ್ ಮೋಟಾರ್‌ಸೈಕಲ್‌ಗಳಾದ F77 MACH 2, F77 ಸೂಪರ್‌ಸ್ಟ್ರೀಟ್ ಮತ್ತು X-47 ವಾಹನಗಳಿಗೆ ಕನೆಕ್ಟ್ ಆಗಬಲ್ಲದು.

ultraviolette-launches-smart-carbon-fibre-helmet-uv-crossfade

ಇದು ವಾಹನಗಳೊಂದಿಗೆ ರಿಯಲ್-ಟೈಮ್ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಈ ಹೊಸ ನಾವೀನ್ಯತೆಯನ್ನು ಅಳವಡಿಸಿಕೊಳ್ಳುತ್ತಿರುವ ಮೊದಲಿಗರು ಅಲ್ಟ್ರಾವೈಲೆಟ್ ಮೋಟಾರ್‌ಸೈಕಲ್‌ಗಳಾಗಿವೆ. ಕಂಪನಿಯ ಸಂಪೂರ್ಣ ವಾಹನ ಪೋರ್ಟ್‌ಫೋಲಿಯೊದಲ್ಲಿ ಹಂತ ಹಂತವಾಗಿ ಇದನ್ನು ಹೊರತರಲು ಯೋಜಿಸಲಾಗಿದೆ. ಕಾರ್ಡೊದ ಮೆಶ್ ನೆಟ್‌ವರ್ಕ್ ಅನ್ನು ಅಲ್ಟ್ರಾವೈಲೆಟ್‌ನ ಸ್ಮಾರ್ಟ್ ಸಿಸ್ಟಮ್‌ಗಳೊಂದಿಗೆ ಸಂಯೋಜಿಸಿ, ಹೆಲ್ಮೆಟ್ ರಿಯಲ್ - ಟೈಮ್ ರೈಡರ್ -ಟು- ರೈಡರ್/ರೈಡರ್ ಗ್ರೂಪ್ ಮತ್ತು ರೈಡರ್- ಟು -ವೆಹಿಕಲ್ ಸಂಪರ್ಕವನ್ನು ಸುಗಮಗೊಳಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಡೈನಾಮಿಕ್ ಅಲರ್ಟ್ ಸೀಕ್ವೆನ್ಸಿಂಗ್ (D.A.S) ನೊಂದಿಗೆ, ಅತ್ಯಾಧುನಿಕ ಸಾಫ್ಟ್‌ವೇರ್' ಸವಾರನು ಪ್ರತಿಕ್ರಿಯಿಸಲು ನೈಜ ಸಮಯದಲ್ಲಿ ಎಚ್ಚರಿಕೆಗಳನ್ನು ಓದುವುದರ ಜೊತೆಗೆ ನಿರ್ಣಯಿಸಿ ನಿಯೋಜಿಸುತ್ತದೆ. ಸವಾರಿ ಮಾಡುವಾಗ ಸ್ಥಳೀಯ ಮೆಶ್ ಅಥವಾ ರಿಮೋಟ್ ಫೋನ್ ಕರೆಗಳಿಗೆ ಸಂಪರ್ಕಗೊಂಡಾಗ, D.A.S ಸೂಟ್ ಮೋಟಾರ್‌ಸೈಕಲ್‌ನಿಂದ ಒಳಬರುವ ನೋಟಿಫಿಕೇಷನ್‌ಗಳನ್ನು ನಿರ್ಣಯಿಸುತ್ತದೆ. ಅವುಗಳನ್ನು ಸವಾರನ ಸಂಪರ್ಕಿತ ಕಾರ್ಡೊ ಘಟಕಕ್ಕೆ ಕ್ರಿಯಾತ್ಮಕವಾಗಿ ನಿಯೋಜಿಸುತ್ತದೆ.

ultraviolette-launches-smart-carbon-fibre-helmet-uv-crossfade

UV ಕ್ರಾಸ್‌ಫೇಡ್ ಫೈಬರ್‌ಗ್ಲಾಸ್ ಒಳ ಪದರಗಳೊಂದಿಗೆ ಜೋಡಿಸಲಾದ ಕಾರ್ಬನ್ ಫೈಬರ್ ಹೊರ ಶೆಲ್ ಅನ್ನು ಹೊಂದಿದೆ, ಇದರ ಪರಿಣಾಮವಾಗಿ ಸರಿಸುಮಾರು 1380 ಗ್ರಾಂ ಹಗುರತೆಯನ್ನು ಹೆಲ್ಮೆಟ್ ಹೊಂದಿದೆ. ಈ ಹೆಲ್ಮೆಟ್ DoT, ISI ಪ್ರಮಾಣೀಕರಣಗಳಿಗೆ ಒಳಪಟ್ಟಿದೆ. ಜೊತೆಗೆ ಯುರೋಪಿಯನ್ ಮಾರುಕಟ್ಟೆಗಳಿಗೂ ಅನ್ವಯಿಸುವ ECE 22.06 ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ನಿರ್ಮಾಣವಾಗಿದೆ ಎಂದು ಕಂಪನಿ ತಿಳಿಸಿದೆ.

"ನಾವು ವಾಹನಗಳನ್ನು ನಿರ್ಮಿಸುವುದಲ್ಲದೆ, ಅವುಗಳ ಭವಿಷ್ಯವನ್ನು ಉನ್ನತೀಕರಿಸುವ ಮತ್ತು ಮರು ವ್ಯಾಖ್ಯಾನಿಸುವ ಅನುಭವಗಳನ್ನು ರಚಿಸುತ್ತೇವೆ. UV ಕ್ರಾಸ್‌ಫೇಡ್ ಕಾರ್ಬನ್ - ಫೈಬರ್ ಹೆಲ್ಮೆಟ್‌ನ ಬಿಡುಗಡೆಯು ಸುರಕ್ಷತೆ, ಅರಿವು ಮತ್ತು ಒಟ್ಟಾರೆ ಸವಾರಿ ಅನುಭವವನ್ನು ಹೆಚ್ಚಿಸಲು ಸವಾರ ಮತ್ತು ಬೈಕ್ ನಡುವಿನ ಸುಧಾರಿತ ಸಂಪರ್ಕದ ಹೊಸ ಯುಗದ ಆರಂಭವನ್ನು ಪ್ರತಿನಿಧಿಸುತ್ತದೆ.

ultraviolette-launches-smart-carbon-fibre-helmet-uv-crossfade

UV ಕ್ರಾಸ್‌ಫೇಡ್ ಹೆಲ್ಮೆಟ್ ರಾಜಿಯಾಗದ ಎಂಜಿನಿಯರಿಂಗ್‌ನೊಂದಿಗೆ ಸುರಕ್ಷತೆಯನ್ನು ಹೆಚ್ಚಿಸುವುದಲ್ಲದೆ, X-47 ನಲ್ಲಿರುವ UV ಹೈಪರ್‌ಸೆನ್ಸ್ ರಾಡಾರ್ ಸಿಸ್ಟಮ್‌ಗಳಿಂದ ಸವಾರರಿಗೆ ರಿಯಲ್ ಟೈಮ್ ಎಚ್ಚರಿಕೆಗಳನ್ನು ನೀಡುವುದು ಸೇರಿದಂತೆ ಕಂಪನಿಯ ಮೋಟಾರ್‌ಸೈಕಲ್‌ಗಳೊಂದಿಗೆ ಸಂವಹನ ನಡೆಸಬಹುದು. ಕಾರ್ಡೊ ಸಿಸ್ಟಮ್ಸ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಈ ಪ್ರಯಾಣದ ಪ್ರಮುಖ ಭಾಗವಾಗಿದೆ ಎಂದು ಕಂಪನಿ ತಿಳಿಸಿದೆ.

"ಅಲ್ಟ್ರಾವಯೊಲೆಟ್‌ನೊಂದಿಗಿನ ನಮ್ಮ ಸಹಕಾರವು ಮೋಟಾರ್‌ಸೈಕಲ್‌ಗಳ ಜಗತ್ತಿಗೆ ಸಂಪರ್ಕದ ಹೊಸ ಆಯಾಮವನ್ನು ತರುತ್ತದೆ, ಕಾರ್ಡೋ ಘಟಕದೊಂದಿಗೆ ನೇರವಾಗಿ ಸಂವಹನ ನಡೆಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಸ್ಟೇಟಸ್ ಅಲರ್ಟ್‌ಗಳು ಮತ್ತು ಇತರ ಸುಧಾರಿತ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್‌ನೊಂದಿಗೆ ಹೊಸ ಫೀಚರ್ಸ್ ಪರಿಚಯಿಸಲಾಗುತ್ತಿದೆ ಎಂದು ಕಾರ್ಡೋ ಸಿಸ್ಟಮ್ಸ್‌ನ ಉಪಾಧ್ಯಕ್ಷ ಶಾಚರ್ ಹರಾರಿ ಹೇಳಿದ್ದಾರೆ.

More from DriveSpark

Article Published On: Wednesday, November 5, 2025, 14:16 [IST]
English summary
Ultraviolette launches smart carbon fibre helmet uv crossfade
Read more on ultraviolette
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+