Tesseract: ಭಾರತದಲ್ಲಿ ಹೊಸ ಸ್ಕೂಟರ್‌ಗೆ ಮುಗಿಬಿದ್ದ 50,000 ಜನ: ಎರಡೇ ವಾರಗಳಲ್ಲಿ ಎಲ್ಲವೂ ಉಡೀಸ್!
ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿರುವ ಅಲ್ಟ್ರಾವೈಲೆಟ್ (Ultraviolette), ಇತ್ತೀಚೆಗೆ ಅನಾವರಣಗೊಳಿಸಿರುವ ತನ್ನ ಟೆಸ್ಸೆರಾಕ್ಟ್ (Tesseract) ಇವಿ ಸ್ಕೂಟರ್‌ನೊಂದಿಗೆ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಸ್ಕೂಟರ್ ಅನಾವರಣಗೊಂಡ ಕೇವಲ ಎರಡು ವಾರಗಳಲ್ಲಿ 50,000 ಮುಂಗಡ ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಗ್ರಾಹಕರಿಂದ ವ್ಯಕ್ತವಾಗಿರುವ ಅಗಾಧ ಪ್ರತಿಕ್ರಿಯೆ ಕುರಿತು ಕಂಪನಿ ಹರ್ಷ ವ್ಯಕ್ತಪಡಿಸಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ, ನಾವೀನ್ಯತೆ ಮತ್ತು ಉನ್ನತ ವಿನ್ಯಾಸವನ್ನು ಸಂಯೋಜಿಸುವ ಭವಿಷ್ಯದ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಒತ್ತಿಹೇಳುತ್ತದೆ ಎಂದು ಕಂಪನಿ ತನ್ನ ಸ್ಕೂಟರ್ ಕುರಿತು ಹೆಮ್ಮೆಯನ್ನು ವ್ಯಕ್ತಪಡಿಸಿದೆ.
ಅಲ್ಟ್ರಾವೈಲೆಟ್ ಟೆಸ್ಸೆರಾಕ್ಟ್ (Ultraviolette Tesseract) ಆಧುನಿಕ ವೈಶಿಷ್ಟ್ಯಗಳು, ಉನ್ನತ ಬ್ಯಾಟರಿ ತಂತ್ರಜ್ಞಾನ ಮತ್ತು ಸಾಟಿಯಿಲ್ಲದ ಸವಾರಿ ಅನುಭವದೊಂದಿಗೆ ಸಜ್ಜಾಗಿದೆ. 20bhp (14.7 kW) ಗರಿಷ್ಠ ಎಲೆಕ್ಟ್ರಿಕ್ ಪವರ್ ಉತ್ಪಾದನೆಯೊಂದಿಗೆ, ಸಿಂಗಲ್ ಚಾರ್ಜ್‌ನಲ್ಲಿ ಬರೋಬ್ಬರಿ 261 ಕಿ.ಮೀ (IDC) ವರೆಗಿನ ರೇಂಜ್ ನೀಡುತ್ತದೆ. ಸ್ಕೂಟರ್ ಒಂದು ಗಂಟೆಗಿಂತ ಕಡಿಮೆ ಅವಧಿಯಲ್ಲಿ ಶೇ80 ರಷ್ಟು ಚಾರ್ಜ್ ಮಾಡಬಹುದು.

ಈ ಸ್ಕೂಟರ್ ಡೆಸರ್ಟ್ ಸ್ಯಾಂಡ್, ಸ್ಟೆಲ್ತ್ ಬ್ಲಾಕ್, ಸೋನಿಕ್ ಪಿಂಕ್ ಮತ್ತು ಸೋಲಾರ್ ವೈಟ್ ಎಂಬ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ. ಹೊಸ ಟೆಸ್ಸೆರಾಕ್ಟ್‌ಗಾಗಿ ಮುಂಗಡ ಬುಕಿಂಗ್‌ಗಳು ಕಂಪನಿಯ ವೆಬ್‌ಸೈಟ್‌ನಲ್ಲಿ ರೂ. 999 ಗೆ ತೆರೆದಿವೆ. ಈಗಾಗಲೇ ಅಗಾಧವಾದ ಪ್ರೀ-ಬುಕಿಂಗ್‌ಗಳು ಹರಿದುಬಂದಿದ್ದು, ಇದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಹೊಸ ಯುಗದ ಆರಂಭ ಮಾತ್ರ ಎಂದು ಕಂಪನಿ ಹೇಳಿದೆ.
ಟೆಸ್ಸೆರಾಕ್ಟ್‌ಗೆ ಹರಿದುಬಂದಿರುವ ಪ್ರತಿಕ್ರಿಯೆ ಸಂಪೂರ್ಣವಾಗಿ ಅಸಾಧಾರಣವಾಗಿದೆ. ಕೇವಲ ಎರಡು ವಾರಗಳಲ್ಲಿ 50,000 ಬುಕಿಂಗ್‌ಗಳನ್ನು ದಾಟುವುದು ನಿಜವಾಗಿಯೂ ಹೊಸ ದಾಖಲೆಯಾಗಿದೆ. ಟೆಸ್ಸೆರಾಕ್ಟ್ ಕೇವಲ ಎಲೆಕ್ಟ್ರಿಕ್ ಸ್ಕೂಟರ್ ಮಾತ್ರವಲ್ಲ ಇದೊಂದು ಹೊಸ ಕ್ರಾಂತಿಯಾಗಿದೆ. ಭಾರತದ ಎಲ್ಲಾ ಮೂಲೆಗಳಿಂದ ಉತ್ಸಾಹದ ಬೆಂಬಲ ಸಿಗುತ್ತಿರುವುದು ನಮಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಅಲ್ಟ್ರಾವೈಲೆಟ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ನಾರಾಯಣ್ ಸುಬ್ರಮಣಿಯಂ ಹೇಳಿದರು.

ಟೆಸ್ಸೆರಾಕ್ಟ್ ವಿಶೇಷತೆಗಳು: ಈ ಹೊಸ ಸ್ಕೂಟರ್ ಓಮ್ನಿಸೆನ್ಸ್ ಮಿರರ್‌ಗಳೊಂದಿಗೆ ಜೋಡಿಸಲಾದ ಇಂಟಿಗ್ರೇಟೆಡ್ ರಾಡಾರ್ ಮತ್ತು ಡ್ಯಾಶ್‌ಕ್ಯಾಮ್ ಹೊಂದಿದೆ. ಬ್ಲೈಂಡ್‌ಸ್ಪಾಟ್ ಡಿಟೆಕ್ಷನ್, ಲೇನ್ ಚೇಂಜ್, ಓವರ್‌ಟೇಕಿಂಗ್ ಅಸಿಸ್ಟ್ ಮತ್ತು ನೈಜ-ಸಮಯದ ಘರ್ಷಣೆ ಎಚ್ಚರಿಕೆಗಳಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಈವರೆಗಿನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಒಂದು ಹೆಜ್ಜೆ ಮುಂದೆ ನಿಲ್ಲುತ್ತದೆ.
ಇದು ವರ್ಧಿತ ಸುರಕ್ಷತೆ ಮತ್ತು ಪವರ್ ಬಳಕೆಯನ್ನು ಅತ್ಯುತ್ತಮವಾಗಿಸಲು ಟ್ರಾಕ್ಷನ್ ಕಂಟ್ರೋಲ್ ಮತ್ತು ಡೈನಾಮಿಕ್ ರೀಜೆನ್‌ನೊಂದಿಗೆ ಸಜ್ಜುಗೊಂಡಿದೆ. 7 ಇಂಚಿನ ಟಚ್‌ಸ್ಕ್ರೀನ್ TFT ಡಿಸ್ಪ್ಲೇ ಮತ್ತು ORVM ಗಳಲ್ಲಿ ಎಂಬೆಡ್ ಮಾಡಲಾದ ಬಹು-ಬಣ್ಣದ LED ಡಿಸ್ಪ್ಲೇಗಳನ್ನು ಹೊಂದಿದೆ. ಇದು ಸವಾರರ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸಿ ಅಪಘಾತಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

ಟೆಸ್ಸೆರಾಕ್ಟ್ ಭವಿಷ್ಯದ ವಿನ್ಯಾಸವನ್ನು ಸಾಟಿಯಿಲ್ಲದ ಕಾರ್ಯಕ್ಷಮತೆಯೊಂದಿಗೆ ಸಂಯೋಜಿಸುತ್ತದೆ. ಇದು ಅತ್ಯಂತ ಮುಂದುವರಿದ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಇದು ಹಲವು ವರ್ಷಗಳ ಅತ್ಯಾಧುನಿಕ ಸಂಶೋಧನೆ ಮತ್ತು ನಾವೀನ್ಯತೆಯಿಂದ ಹೊರಬಂದಿದೆ ಎಂದು ಅಲ್ಟ್ರಾವೈಲೆಟ್ ಆಟೋಮೋಟಿವ್‌ನ ಸಹ-ಸಂಸ್ಥಾಪಕ ಮತ್ತು CTO ನೀರಜ್ ರಾಜ್‌ಮೋಹನ್ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








