Ultraviolette: ಬೆಂಗಳೂರಿನ ವಜ್ರ.. ಹೊಸ ಅಲ್ಟ್ರಾವೈಲೆಟ್ ಎಕ್ಸ್47 ಇ-ಬೈಕ್ ವಿತರಣೆ ಶುರು, ಬೆಲೆ ಎಷ್ಟು.. ವಿಶೇಷತೆಗಳೇನು?

ಬೆಂಗಳೂರಿನ ಅಲ್ಟ್ರಾವೈಲೆಟ್ ಆಟೋಮೋಟಿವ್ (Ultraviolette Automotive) ಪ್ರಖ್ಯಾತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ತಯಾರಕ ಕಂಪನಿಯಾಗಿದೆ. ಸೆಪ್ಟೆಂಬರ್‌ನಲ್ಲಿ ಹೊಚ್ಚ ಹೊಸ 'ಎಕ್ಸ್47' ಹೆಸರಿನ ಇ-ಬೈಕ್‌ನ್ನು ಅದ್ದೂರಿಯಾಗಿ ಮಾರಾಟಕ್ಕೂ ತಂದಿತ್ತು. ಇದು ಬಿಡುಗಡೆಗೊಂಡ 24 ಗಂಟೆಗಳಲ್ಲಿಯೇ 3000ಕ್ಕೂ ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳನ್ನು ಪಡೆದುಕೊಂಡಿತ್ತು. ಸದ್ಯ ಈ ಮೋಟಾರ್‌ಸೈಕಲ್‌ನ ವಿತರಣೆಯನ್ನು ಶುರು ಮಾಡಲಾಗಿದೆ. ಈಚೆಗೆ ಇದೇ ಬೈಕ್‌ನ ಒಂದಷ್ಟು ಮಾಡೆಲ್‌ಗಳನ್ನು ಫ್ಯಾಕ್ಟರಿಯ ಅಸೆಂಬ್ಲಿ ಲೈನ್‌ನಿಂದ ಹೊರತರುತ್ತಿರುವ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಂಪನಿಯು ಹಂಚಿಕೊಂಡಿತ್ತು.

ಅಲ್ಟ್ರಾವೈಲೆಟ್ ಎಕ್ಸ್47 (Ultraviolette X47) ವಿಶೇಷತೆಗಳೇನು:

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.2.49 ಲಕ್ಷದಿಂದ ರೂ.3.99 ಲಕ್ಷ ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಒರಿಜಿನಲ್ (Original), ಒರಿಜಿನಲ್ ಪ್ಲಸ್ (Original Plus), ರೆಕಾನ್ (Recon) ಹಾಗೂ ರೆಕಾನ್ ಪ್ಲಸ್ (Recon Plus) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

Ultraviolette X47 Electric Bike Deliveries Begin Details

ಇದು ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣು ಕುಕ್ಕುವಂತಿದೆ. ಅತ್ಯುತ್ತಮವಾದ ಎಲ್ಇಡಿ ಹೆಡ್‌ಲ್ಯಾಂಪ್, ಎತ್ತರವಿರುವ ವಿಂಡ್‌ಸ್ಕ್ರೀನ್, ಅಗಲವಾದ ಹ್ಯಾಂಡಲ್‌ಬಾರ್, ಮತ್ತು ಸಿಂಗಲ್ ಪೀಸ್ ಸೀಟ್‌ನ್ನು ಪಡೆದಿದೆ. ಲೇಸರ್ ಟರ್ಬೊ ರೆಡ್, ಶಾಡೋ ಕಾಸ್ಮಿಕ್ ಬ್ಲ್ಯಾಕ್, ಏರ್‌ಸ್ಟ್ರೈಕ್ ಸ್ಟೆಲ್ಲರ್ ವೈಟ್ & ಡಸರ್ಟ್ ವಿಂಗ್ ಬಣ್ಣಗಳೊಂದಿಗೂ ದೊರೆಯುತ್ತದೆ.

ನೂತನ 'ಅಲ್ಟ್ರಾವೈಲೆಟ್ ಎಕ್ಸ್47' ಇ-ಬೈಕ್ ಸಾಕಷ್ಟು ದೊಡ್ಡ ಗಾತ್ರದಲ್ಲಿದೆ. 2,080 ಮಿ.ಮೀ ಉದ್ದ, 830 ಮಿ.ಮೀ ಅಗಲ ಹಾಗೂ 1,130 ಮಿ.ಮೀ ಎತ್ತರವಿದೆ. ಹಾಗೆಯೇ 160 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,435 ಮಿ.ಮೀ ವೀಲ್‌ಬೇಸ್‌ನ್ನು ಹೊಂದಿದೆ. ಸರಿ ಸುಮಾರು 197 ಕೆಜಿ ತೂಕವಿದೆ.

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಬಲಿಷ್ಠವಾದ 2 ಪವರ್‌ಟ್ರೇನ್‌ನ್ನು ಒಳಗೊಂಡಿದೆ. 7.1 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 211 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಮತ್ತೊಂದು 10.3 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 323 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.

ಇದು ಯಾವುದೇ ಪೆಟ್ರೋಲ್ ಚಾಲಿತ ಬೈಕ್‌ಗೂ ಕಮ್ಮಿಯಿಲ್ಲ ಎಂದು ಹೇಳಬಹುದು. 145 ಕೆಎಂಪಿಹೆಚ್ ಸ್ಪೀಡ್‌ನ್ನು ಹೊಂದಿದೆ. 8.1 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಗ್ಲೈಡ್, ಕಾಂಬ್ಯಾಟ್ & ಬ್ಯಾಲಿಸ್ಟಿಕ್ ಎಂಬ 3 ರೈಡಿಂಗ್ ಮೋಡ್‌ನ್ನು ಹೊಂದಿದೆ.

ಹೊಸ 'ಎಕ್ಸ್47' ಬೈಕ್ ಹತ್ತಾರು ವೈಶಿಷ್ಟ್ಯಗಳಿಗೂ ಸಾಕ್ಷಿಯಾಗಿದೆ. ಫುಲ್ ಕಲರ್ ಟಿಎಫ್‌ಟಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್‌, ಕೀಲೆಸ್ ಸ್ಟಾರ್ಟ್‌ನ್ನು ಹೊಂದಿದೆ. ಜೊತೆಗಿದು ರಾಡಾರ್ ಬೆಂಬಲಿತ 'ಅಡ್ವಾನ್ಸ್ಡ್ ರೈಡರ್ ಅಸಿಸ್ಟೆನ್ಸ್ ಸಿಸ್ಟಮ್'ನ್ನು ಒಳಗೊಂಡಿದೆ. ಅಲಾಯ್ ವೀಲ್‌ಗಳು (17 ಇಂಚು) & ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.

ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಲಿದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟ್ರಾಕ್ಷನ್-ಕಂಟ್ರೋಲ್ ಸಿಸ್ಟಮ್‌ನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ, ನೂತನ 'ಅಲ್ಟ್ರಾವೈಲೆಟ್ ಎಕ್ಸ್47' ಇ-ಬೈಕ್‌ಗಳ ವಿತರಣೆ ಶುರುವಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸಾಹಸಮಯ ಮೋಟಾರ್‌ಸೈಕಲ್‌ ಹುಡುಕುತ್ತಿರುವವರಿಗೆ ಒಳ್ಳೆಯ ಆಯ್ಕೆಯಾಗಲಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

More from DriveSpark

Article Published On: Wednesday, October 22, 2025, 23:00 [IST]
English summary
Ultraviolette x47 electric bike deliveries begin details
Read more on ultraviolette india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+