ಅತ್ಯಾಧುನಿಕ ಬೈಕ್ ಬಿಡುಗಡೆ: ಬೆಲೆ ಇಷ್ಟೇನಾ? ಒಂದೇ ದಿನದಲ್ಲಿ 3,000 ಬುಕಿಂಗ್
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಜಾಗತಿಕವಾಗಿ ಜನಪ್ರಿಯತೆ ಪಡೆದಿರುವ ಬೆಂಗಳೂರು ಮೂಲದ 'ಅಲ್ಟ್ರಾವೈಲೆಟ್', ನಿನ್ನೆಯಷ್ಟೆ ಬಿಡುಗಡೆ ಮಾಡಿರುವ ತನ್ನ ಹೊಸ ಮೋಟಾರ್‌ಸೈಕಲ್ X-47 ಕ್ರಾಸ್‌ಓವರ್ ಮೋಟಾರ್ ಸೈಕಲ್‌ಗೆ ಒಂದು ಹೆಗ್ಗುರುತು ಸಾಧನೆಯನ್ನು ಘೋಷಿಸಿದೆ. ಇದು ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ 3,000 ಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ. ಈ ಅಗಾಧ ಪ್ರತಿಕ್ರಿಯೆಯು ಪರ್ಫಾಮೆನ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಭವಿಷ್ಯವನ್ನು ಬದಲಿಸುವ ಅಲ್ಟ್ರಾವೈಲೆಟ್‌ನ ದೃಷ್ಟಿಕೋನದ ಕಡೆಗೆ ಭಾರತೀಯ ಗ್ರಾಹಕರ ನಂಬಿಕೆ ಮತ್ತು ಉತ್ಸಾಹವನ್ನು ಒತ್ತಿಹೇಳುತ್ತದೆ ಎಂದು ಕಂಪನಿ ಹೇಳಿದೆ.
ಹೊಸ ಮೋಟಾರ್‌ಸೈಕಲ್ ಭಾರತದಾದ್ಯಂತ ರೂ. 2,49,000 ದಿಂದ ಪ್ರಾರಂಭವಾಗುವ ಪರಿಚಯಾತ್ಮಕ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ಇದು ಮೊದಲ 1000 ಗ್ರಾಹಕರಿಗೆ ಅನ್ವಯಿಸುತ್ತದೆ. ನಂತರ ಬುಕ್ ಮಾಡುವ ಗ್ರಾಹಕರಿಗೆ ಈ ಬೆಲೆ ತುಸು ಹೆಚ್ಚಾಗಬಹುದು ಎಂದು ಕಂಪನಿ ತಿಳಿಸಿತ್ತು. ಆದರೆ 24 ಗಂಟೆಗಳಲ್ಲಿ 3,000 ಕ್ಕೂ ಹೆಚ್ಚು ಬುಕಿಂಗ್‌ಗಳ ಅಭೂತಪೂರ್ವ ಬೇಡಿಕೆಗೆ ಪ್ರತಿಕ್ರಿಯೆಯಾಗಿ, ಕಂಪನಿಯು ಪರಿಚಯಾತ್ಮಕ ಬೆಲೆಯನ್ನು ಮೊದಲ 1000 ಗ್ರಾಹಕರಿಂದ ಈಗ 5000 ಗ್ರಾಹಕರಿಗೆ ವಿಸ್ತರಿಸಿದೆ.

ಭವಿಷ್ಯದ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ, ಸಾಟಿಯಿಲ್ಲದ ಪರ್ಫಾಮೆನ್ಸ್ ಮತ್ತು ಸುರಕ್ಷತಾ ಮಾನದಂಡಗಳನ್ನು ಸಂಯೋಜಿಸುವ ಕಂಪನಿಯ ಆಧಾರಸ್ತಂಭಗಳ ಮೇಲೆ X-47 ಮೋಟಾರ್‌ಸೈಕಲ್ ಅನ್ನು ನಿರ್ಮಿಸಲಾಗಿದೆ. ಹೊಸ ಅಲ್ಟ್ರಾವೈಲೆಟ್ X-47 ಕ್ರಾಸ್‌ಓವರ್ ಮೋಟಾರ್ ಸೈಕಲ್‌ನ ವಿತರಣೆಗಳು ಅಕ್ಟೋಬರ್ 2025 ರಲ್ಲಿ ಪ್ರಾರಂಭವಾಗುತ್ತವೆ ಎಂದು ಕಂಪನಿ ತಿಳಿಸಿದೆ.
"ಒಂದೇ ದಿನದಲ್ಲಿ X-47 ಗೆ ದೊರೆತ ಅದ್ಭುತ ಪ್ರತಿಕ್ರಿಯೆಯು ಭಾರತದಲ್ಲಿ ಅತ್ಯಾಧುನಿಕ, ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಬಗ್ಗೆ ಹೆಚ್ಚುತ್ತಿರುವ ಹಸಿವಿಗೆ ಸಾಕ್ಷಿಯಾಗಿದೆ. ಈ ಮಟ್ಟದ ಉತ್ಸಾಹವನ್ನು ನೋಡಿ ನಾವು ರೋಮಾಂಚನಗೊಂಡಿದ್ದೇವೆ, ಪರಿಚಯಾತ್ಮಕ ಕೊಡುಗೆಯನ್ನು 5000 ಗ್ರಾಹಕರಿಗೆ ವಿಸ್ತರಿಸುತ್ತಿದ್ದೇವೆ" ಎಂದು ಅಲ್ಟ್ರಾವೈಲೆಟ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ನಾರಾಯಣ್ ಸುಬ್ರಮಣಿಯಂ ಹೇಳಿದರು.

X-47 ಕ್ರಾಸ್‌ಓವರ್ ವಿಶೇಷತೆಗಳು
ಈ ಮೋಟಾರ್‌ಸೈಕಲ್ 10.3 kWh ಬ್ಯಾಟರಿ ಪ್ಯಾಕ್‌ನಿಂದ ನಡೆಸಲ್ಪಡುತ್ತದೆ. ಇದು 40.2 hp (30 kW) ಪವರ್ ಮತ್ತು 100 Nm ಟಾರ್ಕ್ ಉತ್ಪಾದಿಸುತ್ತದೆ. ಕೇವಲ 2.7 ಸೆಕೆಂಡುಗಳಲ್ಲಿ 60 ಕಿ.ಮೀ ವೇಗ ಮತ್ತು 145 ಕಿ.ಮೀ ಟಾಪ್ ಸ್ಪೀಡ್ ತಲುಪಬಲ್ಲದು. ಸಿಂಗಲ್ ಚಾರ್ಜ್‌ನಲ್ಲಿ 323 ಕಿ.ಮೀ ವರೆಗಿನ IDC ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ.
ಅಲ್ಟ್ರಾವೈಲೆಟ್ X-47 ಅತ್ಯಾಧುನಿಕ 77 GHz ಲಾಂಗ್ ರೇಂಜ್ ಹಿಂಭಾಗದ ರಾಡಾರ್ ಅನ್ನು ಹೊಂದಿದೆ. ಇದು 200 ಮೀಟರ್‌ಗಳವರೆಗೆ ದೂರವನ್ನು ಮೇಲ್ವಿಚಾರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ದ್ವಿಚಕ್ರ ವಾಹನ ಡೈನಾಮಿಕ್ಸ್‌ಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ರಾಡಾರ್ ವ್ಯವಸ್ಥೆಯು ಬುದ್ಧಿವಂತಿಕೆಯಿಂದ 20 ಡಿಗ್ರಿಗಳವರೆಗಿನ ಲೀನ್ ಆಂಗಲ್‌ಗಳಿಗೆ ಹೊಂದಿಕೊಳ್ಳುತ್ತದೆ.

ಇಂಟಿಗ್ರೇಟೆಡ್ ಡ್ಯಾಶ್‌ಕ್ಯಾಮ್ ಪಡೆದಿರುವ ಅಲ್ಟ್ರಾವೈಲೆಟ್ X-47, ಸುರಕ್ಷತೆ, ಭದ್ರತೆ ಮತ್ತು ಸವಾರರ ವಿಶ್ವಾಸವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಸಾಮರ್ಥ್ಯದ 1080p, 30fps IMX307 HDR ವೈಡ್-ಆಂಗಲ್ ಕ್ಯಾಮೆರಾಗಳೊಂದಿಗೆ (120°) ಸಜ್ಜುಗೊಂಡಿದೆ. ಈ ಕ್ಯಾಮೆರಾಗಳು ಎಲ್ಲಾ ಪರಿಸ್ಥಿತಿಗಳಲ್ಲಿಯೂ ಅಸಾಧಾರಣ ಸ್ಪಷ್ಟತೆ ನೀಡುತ್ತವೆ.
ಅಲ್ಟ್ರಾವೈಲೆಟ್ X-47 ಕ್ರಾಸ್‌ಒವರ್ ಮೋಟಾರ್‌ಸೈಕಲ್ 3-ಸ್ಟೇಜ್ ಟ್ರಾಕ್ಷನ್ ಕಂಟ್ರೋಲ್‌ನೊಂದಿಗೆ ಜೋಡಿಸಲಾದ ಬದಲಾಯಿಸಬಹುದಾದ ಮೋಡ್‌ಗಳೊಂದಿಗೆ ಅತ್ಯಾಧುನಿಕ 10ನೇ ಜನರೇಷನ್ ಬಾಷ್ ಡ್ಯುಯಲ್-ಚಾನೆಲ್ ABS ಹೊಂದಿದೆ. ಬ್ರೆಂಬೊ ಬ್ರೇಕಿಂಗ್ ಸಿಸ್ಟಮ್ ನೀಡಲಾಗಿದ್ದು, 320 mm ಮುಂಭಾಗದ ಡಿಸ್ಕ್ ಫಿಕ್ಸಡ್ 4 ಪಿಸ್ಟನ್ ಕ್ಯಾಲಿಪರ್ ಮತ್ತು ಸಿಂಟರ್ಡ್ ಪ್ಯಾಡ್‌ಗಳನ್ನು ಹೊಂದಿದೆ. ಪ್ಲೋಟಿಂಗ್ ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 230 mm ಹಿಂಭಾಗದ ಡಿಸ್ಕ್ ನೀಡಲಾಗಿದೆ.
ಅಲ್ಟ್ರಾವೈಲೆಟ್ X-47 ಕ್ರಾಸ್‌ಒವರ್ 5-ಇಂಚಿನ ಮಲ್ಟಿ-ಫಂಕ್ಷನ್ TFT ಡಿಸ್ಪ್ಲೇಯನ್ನು ಹೊಂದಿದ್ದು, ಇದು ಟಚ್ ಇನ್‌ಪುಟ್ ಸ್ವಿಚ್ ಕನ್ಸೋಲ್‌ನೊಂದಿಗೆ ಜೋಡಿಯಾಗಿದೆ. ವಿಶಾಲವಾದ ವೀಲ್‌ಬೇಸ್ ಮತ್ತು ಉತ್ತಮ ಸ್ಥಿರತೆಗಾಗಿ ದೀರ್ಘ ಪ್ರಯಾಣದ ಸಸ್ಪೆನ್ಷನ್‌ನೊಂದಿಗೆ ವಿನ್ಯಾಸಗೊಳಿಸಲಾದ X-47 ಉದ್ಯಮ-ಮೊದಲ ರೇಡಿಯಲ್ ಆಲ್-ಟೆರೈನ್ ಟೈರ್‌ಗಳನ್ನು ಪಡೆದುಕೊಂಡಿದೆ.


Click it and Unblock the Notifications








